ಕೊರೊನರಿ ಎಂಜೋಗ್ರಾಮ್ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಮುರುಘಾ ಶ್ರೀ ಶಿಫ್ಟ್.  ಮುರುಘಾ ಮಠದ ಮುಂಭಾಗವೇ ಮುರುಘಾ ಶ್ರೀಯನ್ನ ಪೊಲೀಸ್ ವ್ಯಾನ್ ನಲ್ಲಿ ಕರೆದೊಯ್ದ ಪೊಲೀಸರು‌.

ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿತ್ರದುರ್ಗ (ಸೆ.22) : ಮುರುಘಾ ಶ್ರೀ ವಿರುದ್ದದ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ A1 ಆರೋಪಿ ಮುರುಘಾ ಶ್ರೀ ಹಾಗೂ A2 ಆರೋಪಿ ಲೇಡಿ ವಾರ್ಡನ್ ರಶ್ಮಿ ನ್ಯಾಯಾಂಗ ಬಂಧನದಲ್ಲಿ ಇದ್ದಾರೆ. ಇನ್ನುಳಿದ ಮೂವರು ಆರೋಪಿಗಳು ನಾಪತ್ತೆ ಆಗಿದ್ದು ಅವರಿಗಾಗಿ ಪೊಲೀಸರು ಇನ್ನೂ ಶೋಧ ಕಾರ್ಯ ಮುಂದುವರಿಸಿದ್ದಾರೆ. ಸದ್ಯ ಸೆಪ್ಟೆಂಬರ್ 27ರವರೆಗೂ ಚಿತ್ರದುರ್ಗ ಎರಡನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮುರುಘಾ ಶ್ರೀ ಗೆ ನ್ಯಾಯಾಂಗ ಬಂಧನ ವಿಧಿಸಿದೆ. ಈ ಸಂದರ್ಭದಲ್ಲಿ ಮುರುಘಾ ಶ್ರೀ ಪರ ವಕೀಲರು ಮುರುಘಾ ಶ್ರೀಗೆ ಹೃದಯ ಸಂಬಂಧಿ ಕಾಯಿಲೆಯಿದೆ ಹೆಚ್ಚಿನ ಚಿಕಿತ್ಸೆಗಾಗಿ ಅವಕಾಶ ಮಾಡಿಕೊಡಿ ಎಂದು ನ್ಯಾಯಾಧೀಶರ ಮುಂದೆ ಮನವಿ ಮಾಡಿದ್ದರು.

Murugha Mutt Case; CWC ಅಧಿಕಾರಿಗಳಿಂದ ಮಕ್ಕಳಿಗೆ ಹಿಂಸೆ, ಒಡನಾಡಿ ಸಂಸ್ಥೆ ಆರೋಪ

ಅದರಂತೆ ಇಂದು ಚಿತ್ರದುರ್ಗ(Chitradurga)ದ ಎರಡನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಬಿ.ಕೆ ಕೋಮಲಾ(B.K.Komala) ಅವರು ಶಿವಮೊಗ್ಗ(Shivamogga)ದ ಮೆಗ್ಗಾನ್ ಆಸ್ಪತ್ರೆ(Megan Hospital)ಗೆ ಕರೆದೊಯ್ಯುವಂತೆ ಸೂಚನೆ ನೀಡಿ ಆದೇಶ ಹೊರಡಿಸಿದ್ದರು. ಸದ್ಯ ಚಿತ್ರದುರ್ಗ ಜಿಲ್ಲೆಯ ಸಮೀಪ ಅಂದ್ರೆ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಕೊರೊನಾರಿ ಎಂಜೋಗ್ರಾಮ್(Coronary angiogram) ಗೆ ಚಿಕಿತ್ಸೆ ನೀಡಲಿದ್ದಾರೆ ಎಂದು ನ್ಯಾಯಾಧೀಶರು ಪರಿಗಣಿಸಿ ಆದೇಶ ಹೊರಡಿಸಿದ್ದರು. ಕೋರ್ಟ್ ಸೂಚನೆ ಮೇರೆಗೆ ಇಂದು ಸಂಜೆ ೬ ಗಂಟೆ ಸುಮಾರಿಗೆ ಚಿತ್ರದುರ್ಗ ಜಿಲ್ಲಾ ಕಾರಾಗೃಹ ಅಧೀಕ್ಷಕರು ಸೂಕ್ತ ಪೊಲೀಸ್ ಭದ್ರತೆಯೊಂದಿಗೆ ಆರೋಪಿ ಮುರುಘಾ ಶ್ರೀ(Murugha shri)ಯನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ಯಲು ಅನುಮತಿ ನೀಡಿದರು. ಪೊಲೀಸ್ ವ್ಯಾನ್ ನಲ್ಲೇ ಮುರುಘಾ ಶ್ರೀ ಕೂರಿಸಿಕೊಂಡು ಸೂಕ್ತ ಭದ್ರತೆಯೊಂದಿಗೆ ಮುರುಘಾ ಶ್ರೀಗಳನ್ನು ಶಿವಮೊಗ್ಗಕ್ಕೆ ಶಿಫ್ಟ್ ಮಾಡಲಾಯಿತು.

ಮುರುಘಾ ಮಠದ ಮುಂಭಾಗದಲ್ಲಿಯೇ ಪೊಲೀಸ್ ವ್ಯಾನ್ ನಲ್ಲಿ ಮುರುಘಾ ಶ್ರೀ

ಚಿತ್ರದುರ್ಗದ ಪ್ರಸಿದ್ದ ಮಠಗಳಲ್ಲಿ ಮುರುಘಾ ಮಠವೂ ಒಂದಾಗಿದೆ. ಅದರ ಪೀಠಾಧ್ಯಕ್ಷರಾದ ಮುರುಘಾ ಶ್ರೀಗಳು ಇಂದು ಪೋಕ್ಸೋ ಪ್ರಕರಣ(POCSO case)ದಲ್ಲಿ A1 ಆರೋಪಿ ಆಗಿರುವ ಕಾರಣಕ್ಕೆ, ತಮ್ಮದೇ ಮುರುಘಾ ಮಠದ ಮುಂಭಾಗದಲ್ಲಿಯೇ ಪೊಲೀಸ್ ವ್ಯಾನ್ ನಲ್ಲಿ ಆರೋಪಿಯಾಗಿ ಕುಳಿತು ಸಾಗಿದ್ದು ಮುರುಘಾಶ್ರೀ ಭಕ್ತವೃಂದದಲ್ಲಿ ಕೊಂಚ ನೋವುಂಟು ಮಾಡಿತು ಅಂದ್ರೆ ತಪ್ಪಾಗಲಿಕ್ಕಿಲ್ಲ. ಮುರುಘಾ ಶ್ರೀ ಕರೆದೊಯ್ಯುತ್ತಿದ್ದ ಪೊಲೀಸರ ವ್ಯಾನ್ ಮುರುಘಾ ಮಠದ ಮುಂಭಾಗ ಸಾಗುತ್ತಿದ್ದಂತೆ ಮುರುಘಾ ಮಠದ ಮುಂಭಾಗದಲ್ಲಿ ನಿಂತಿದ್ದ ಸ್ವಾಮೀಜಿಗಳ ಅನುಯಾಯಿಗಳು ವ್ಯಾನ್ ನತ್ತ ನೋಡಿ ಕೈಮುಗಿಯುವ ಮೂಲಕ ಮುರುಘಾ ಶ್ರೀಗಳಿಗೆ ನಮಸ್ಕರಿಸಿದರು. ಇದೆಲ್ಲೋ ಒಂದ್ಕಡೆ ತಮ್ಮದೇ ಮಠದ ಸ್ವಾಮೀಜಿ ತಮ್ಮ ಮಠದ ಮುಂಭಾಗದಲ್ಲಿಯೇ ಈ ರೀತಿ ಆರೋಪಿಯಾಗಿ ಪೊಲೀಸರ ಸರ್ಪಗಾವಲಿನಲ್ಲಿ ಸಾಗಿದರಲ್ಲ ಎಂದು ಭಕ್ತವೃಂದ ಗುನುಗುಡುತಿತ್ತು.

ಜಾಮೀನು ಅರ್ಜಿ ವಿಚಾರಣೆ ಮತ್ತೆ ಮುಂದೂಡಿದ ಕೋರ್ಟ್, ಮುರುಘಾ ಶ್ರೀಗಳಿಗೆ ಮತ್ತೆ ನಿರಾಸೆ

ಅದೇನೆ ಇರಲಿ, ಸದ್ಯ ಮುರುಘಾ ಶ್ರೀಗಳಿಗೆ ಹೃದಯ ಸಂಬಂಧಿ ಸಮಸ್ಯೆ ಇದ್ದು ಅವರಿಗೆ ಹೆಚ್ಚಿನ ಚಿಕಿತ್ಸೆಗಾಗಿ ಇಂದು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಯಿತು. ನಂತರದಲ್ಲಿ ಅಲ್ಲಿನ ವೈದ್ಯರು ಮುರುಘಾ ಶ್ರೀ ಆರೋಗ್ಯ ವಿಚಾರಿಸಿ, ಮುಂದೆ ಏನು ಹೇಳ್ತಾರೆ ಎಂಬುದನ್ನು ಕಾದು ನೋಡಬೇಕಿದೆ.