ಮಂಡ್ಯ(ಫೆ.17): ಮಮ್ಮೀ ಕರ್ಕೊಂಡ್‌ ಹೋಗು, ಇಲ್ಲಾ ಆತ್ಮಹತ್ಯೆ ಮಾಡ್ತೀನಿ ಎಂದು ಬಾಲಕಿಯೊಬ್ಬಳು ಹೆತ್ತಮ್ಮನಿಗೆ ಪತ್ರ ಬರೆದಿರುವ ಮನಕಲಕುವ ಘಟನೆ ಮಂಡ್ಯದಲ್ಲಿ ನಡೆದಿದೆ. ಬಾಲ ಮಂದಿರದಲ್ಲಿರುವ ಬಾಲಕಿ ತನ್ನನ್ನು ಮನೆಗೆ ಕರೆದುಕೊಂಡು ಹೋಗುವಂತೆ ಅಮ್ಮನಿಗೆ ಮೊರೆ ಇಟ್ಟಿದ್ದಾಳೆ.

ಮಮ್ಮಿ ಪ್ಲೀಸ್ ನನ್ನನ್ನು ಕರೆದುಕೊಂಡು  ಹೋಗು. ಇಲ್ಲದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ. ತಾಯಿಗೆ ಪ್ರಶ್ನೆ ಪತ್ರಿಕೆ ಮೂಲಕ ಅಪ್ರಾಪ್ತ ಬಾಲಕಿ ಮನವಿ ಮಾಡಿದ್ದು, ಬಾಲಮಂದಿರದಿಂದ ಮನೆಗೆ ಕರೆದುಕೊಂಡುಹೋಗುವಂತೆ ಹೇಳಿದ್ದಾಳೆ.

ತಡರಾತ್ರಿ ಹೊತ್ತಿ ಉರಿದ ಗಾರ್ಮೆಂಟ್..! ಬಟ್ಟೆ, ಯಂತ್ರ ಎಲ್ಲವೂ ಭಸ್ಮ

ಪ್ರಶ್ನೆಪತ್ರಿಕೆಯಲ್ಲಿ ಬರೆದು ಸ್ನೇಹಿತೆ ಮೂಲಕ ತಾಯಿಗೆ ರವಾನೆ ಮಾಡಿದ್ದು, ಕಾನೂನುಬಾಹಿರ ನಿಶ್ಚಿತಾರ್ಥ ಮಾಡುತ್ತಿದ್ದ ಹಿನ್ನೆಲೆ ಬಾಲಕಿಯನ್ನು ರಕ್ಷಿಸಿದ ಅಧಿಕಾರಿಗಳು ಬಾಲಮಂದಿರದಲ್ಲಿರಿಸಿದ್ದರು. ಮಕ್ಕಳ ಸಹಾಯವಾಣಿಗೆ ಮಾಹಿತಿ ಬಂದ ಮೇರೆಗೆ ದಾಳಿ ನಡೆಸಿದ್ದ ಅಧಿಕಾರಿಗಳು ಮಂಡ್ಯ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆಯುತ್ತಿದ್ದ ಅಪ್ರಾಪ್ತ ಬಾಲಕಿ ನಿಶ್ಚಿತಾರ್ಥ ತಡೆದಿದ್ದರು.

ನಿಶ್ಚಿತಾರ್ಥ ತಡೆದು ಬಾಲಕಿ ರಕ್ಷಣೆ ಮಾಡಿದ್ದ ಅಧಿಕಾರಿಗಳು ನಂತರ ಮೇಲಧಿಕಾರಿಗಳ ತಾತ್ಕಾಲಿಕ ಆಶ್ರಯಕ್ಕಾಗಿ ಬಾಲಂದಿರಕ್ಕೆ ದಾಖಲು ಮಾಡಿದ್ದರು. ಪಿಯುಸಿ ಪರೀಕ್ಷೆ ಪರೀಕ್ಷೆ ಬರೆಯಲು ಅವಕಾಶ ಕೊಡಲಾಗಿತ್ತು. ಪ್ರಶ್ನೆ ಪತ್ರಿಕೆಯಲ್ಲಿ ತನ್ನನ್ನು ಕರೆದುಕೊಂಡು ಹೋಗುವಂತೆ ಬರೆದು ಸ್ನೇಹಿತರ ಮೂಲಕ ಮನೆಗೆ ತಲುಪಿಸಿದ್ದ ಬಾಲಕಿ ತನ್ನನ್ನು ಕರೆದುಕೊಂಡು ಹೋಗಿ ಇಲ್ಲವಾದ್ರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದಿದ್ದಾಳೆ.

ದೂರದ ಊರಿನಿಂದಲೇ ನಿಮ್ಮ ಕ್ಷೇತ್ರದ ಮತ ಚಲಾಯಿಸಿ!

ಬಾಲಮಂದಿರದಲ್ಲಿ ಕೆಲಸ ಮಾಡು ಅಂತ ಬೈತಾರೆ. ಟಾರ್ಚರ್ ಕೊಡುತ್ತಾರೆ. 18 ವರ್ಷ ಆಗುವವರೆಗೂ ಮದುವೆ ಮಾಡಲ್ಲ ಎಂದು ಬರೆದುಕೊಟ್ಟು ತನ್ನನ್ನು ಕರೆದುಕೊಂಡು ಹೋಗು ಎಂದು ತಾಯಿಗೆ ಮನವಿ ಮಾಡಿಕೊಂಡಿರುವ ಬಾಲಕಿ ಕರೆದುಕೊಂಡು ಹೋಗದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪದೇ ಪದೇ ಉಲ್ಲೇಖ ಮಾಡಿದ್ದಾಳೆ. ಬಾಲಕಿ ಬರೆದಿರುವ ಪ್ರಶ್ನೆ ಪತ್ರಿಕೆ ನೀಡಿ ಮಗಳನ್ನು ಕಳುಹಿಸಿಕೊಡುವಂತೆ ಪೋಷಕರು ಮನವಿ ಮಾಡುತ್ತಿದ್ದಾರೆ. ಕಾನೂನು ಬಾಹಿರ ನಿಶ್ಚಿತಾರ್ಥ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.