ನನ್ನನ್ನು ಮುಲ್ಲಾಅಂತಾ ಕರೆದರೆ ಮುಲ್ಲಾಗಳು ಒಪ್ಪಿಕೊಳ್ಳಲ್ಲ: ಸಿ.ಟಿ.ರವಿ

ಚಿಕ್ಕಮಗಳೂರಿನಲ್ಲಿ ಹಿಂದೂ ಪರ ಸಂಘಟನೆಗಳಾದ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳ ನಡೆಸುತ್ತಿರುವ ದತ್ತಜಯಂತಿ ಉತ್ಸವ ಹಿನ್ನಲೆಯಲ್ಲಿ ದತ್ತಭಕ್ತರಿಂದ ಭಿಕ್ಷಾಟನೆ ನಡೆಯಿತು. ಮಾಜಿ ಸಚಿವ ಸಿ.ಟಿ .ರವಿ ಸೇರಿದಂತೆ ದತ್ತಭಕ್ತರು ನಗರದ ನಾರಾಯಣಪುರ ಬಡಾವಣೆಯಲ್ಲಿ ಇರುವ ಮನೆಗಳಿಗೆ ತೆರಳಿ ಭಿಕ್ಷಾಟನೆ ಮಾಡಿ ಪಡಿ ಸಂಗ್ರಹ ಮಾಡಿದ್ರು.

Mullahs wont accept calling me Mullah says CT Ravi

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು 

ಚಿಕ್ಕಮಗಳೂರು (ಡಿ.7) :  ಚಿಕ್ಕಮಗಳೂರಿನಲ್ಲಿ ಹಿಂದೂ ಪರ ಸಂಘಟನೆಗಳಾದ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳ ನಡೆಸುತ್ತಿರುವ ದತ್ತಜಯಂತಿ ಉತ್ಸವ ಹಿನ್ನಲೆಯಲ್ಲಿ ದತ್ತಭಕ್ತರಿಂದ ಭಿಕ್ಷಾಟನೆ ನಡೆಯಿತು. ಮಾಜಿ ಸಚಿವ ಸಿ.ಟಿ .ರವಿ ಸೇರಿದಂತೆ ದತ್ತಭಕ್ತರು ನಗರದ ನಾರಾಯಣಪುರ ಬಡಾವಣೆಯಲ್ಲಿ ಇರುವ ಮನೆಗಳಿಗೆ ತೆರಳಿ ಭಿಕ್ಷಾಟನೆ ಮಾಡಿ ಪಡಿ ಸಂಗ್ರಹ ಮಾಡಿದ್ರು.  ದತ್ತಾತ್ರೇಯ ಸ್ವಾಮಿಗೆ ಅಕ್ಕಿ, ಬೆಲ್ಲ ಮತ್ತು ಕಾಯಿ ತುಂಬಾ ಪ್ರಿಯವಾದ ಆಹಾರವಾದುದರಿಂದ ಇದನ್ನೇ ಮನೆ ಮನೆಗೆ ತೆರಳಿ ಭಿಕ್ಷೆಯನ್ನು ಬೇಡುವುದರ ಮೂಲಕ ಪಡಿಯನ್ನು ಸಂಗ್ರಹ ಮಾಡಿದರು. ಮನೆ ಮನೆಗೆ ತೆರಳಿ ಸಂಗ್ರಹಿಸಿದ ಅಕ್ಕಿ, ಬೆಲ್ಲ, ಕಾಯಿಯ ಪಡಿಯನ್ನು ಇರುಮುಡಿ ರೂಪದಲ್ಲಿ ಅದನ್ನ ದತ್ತಪೀಠಕ್ಕೆ ಕೊಂಡೊಯ್ದು ದತ್ತಾತ್ರೇಯ ಸ್ವಾಮಿಗೆ ಅರ್ಪಣೆ ಮಾಡಲಿದ್ದಾರೆ. 

ಪಡಿ ಸಂಗ್ರಹಕ್ಕೆ ಶಾಸಕ ಸಿ.ಟಿ.ರವಿ(C.T.Ravi)ಗೆ 20ಕ್ಕೂ ಹೆಚ್ಚು ಮಾಲಾಧಾರಿಗಳು ಸಾಥ್ ನೀಡಿದ್ದಾರೆ. ಇಂದು ಮಧ್ಯಾಹ್ನ ನಗರದಲ್ಲಿ 30 ಸಾವಿರಕ್ಕೂ ಅಧಿಕ ದತ್ತಭಕ್ತರಿಂದ ನಗರದಲ್ಲಿ ಬೃಹತ್ ಶೋಭಾಯಾತ್ರೆ ನಡೆಯಲಿದೆ. ಹಾಗಾಗಿ, ಮುಂಜಾಗೃತ ಕ್ರಮವಾಗಿ ಶೋಭಾಯಾತ್ರೆ ತೆರಳುವ ಮಾರ್ಗದಲ್ಲಿ ಪಾರ್ಕಿಂಗ್ ರದ್ದು ಮಾಡಿದ್ದು, ಬೆಳಗ್ಗೆಯಿಂದಲೂ ಪೊಲೀಸರು ಕಾವಲು ಕಾಯುತ್ತಿದ್ದಾರೆ. ಖಾಕಿ ಪಡೆ ಜಿಲ್ಲಾದ್ಯಂತ ಹೈ ಅಲರ್ಟ್ ಘೋಷಿಸಿದ್ದಾರೆ.

Assembly election: ಗೆದ್ದವರು, ಸೋತವರ ನಡುವೆಯೇ ಮತ್ತೆ ಕದನ!

'ನನ್ನ ಮುಲ್ಲಾ ಎಂದು ಕರೆದ್ರೆ ಮುಲ್ಲಾಗಳು ಒಪ್ಪಿಕೊಳ್ಳಲ್ಲ': ಸಿ.ಟಿ.ರವಿ

ಪಡಿ ಸಂಗ್ರಹದ ಬಳಿಕ ಸುದ್ದಿಗಾರರೊಂದಿಗೆ ಮಾತಾಡಿದ ಸಿ.ಟಿ ರವಿ, ಬಿಜೆಪಿ ನಾಯಕರ ಹೆಸರಿಗೆ ಮುಸ್ಲಿಂ ಹೆಸರನ್ನು ಹಾಕಿ ಟ್ವೀಟ್ ಮಾಡ್ತಿರೋ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿ ಕಾಂಗ್ರೆಸ್ ನಾಯಕರ ವಿರುದ್ದ ಕಿಡಿಕಾರಿದರು. ಕಾಂಗ್ರೆಸ್ ಮಾಡಿರುವ ಟ್ವೀಟ್ ಗೆ ವ್ಯಂಗ್ಯವಾಡಿ ಅವರು, ಬಿಜೆಪಿ ನಾಯಕರ ಸ್ವಭಾವ ಹಾಗೆ ಇದ್ರೆ ಕಾಂಗ್ರೆಸ್ನವರು ಖಂಡಿತ ಕರೆಯಲಿ. ನನ್ನ ಸ್ವಭಾವ ಕುಂಕುಮ ಕಂಡರೆ ಆಗದಿದ್ರೆ, ಕೇಸರಿ ನೋಡಿದ್ರೆ ಆಗದಿದ್ರೆ, ಮುಲ್ಲಾಗಳ ಮೇಲೆ ಪ್ರೀತಿ ಜಾಸ್ತಿಇದ್ರೆ ಖಂಡಿತ ಮುಲ್ಲಾ ಅಂತಲೇ ಕರೆಯಬಹುದು ಎಂದು ಲೇವಡಿ ಮಾಡಿದರು. 

ನನ್ನ ಮುಲ್ಲಾಎಂದು ಕರೆಯೋಕ್ಕಾಗಲ್ಲ, ಹಿಂದೂ ಹುಲಿ ಅಂತಾನೇ ಕರೆಯಬೇಕು ಜೊತೆಗೆ ನನ್ನ ಮುಲ್ಲಾ ಅಂತ ಕರೆದ್ರೆ ಮುಲ್ಲಾಗಳು ಒಪ್ಪಿಕೊಳ್ಳಲ್ಲ ಎಂದರು. ಸ್ವಭಾವಕ್ಕೆ ತಕ್ಕಂತೆ ಬಿರುದುಗಳು ನಮಗೆ ಬರುತ್ತದೆ ಎಂದು ಹೇಳಿ ಪರ್ಷಿಯನ್ ಭಾಷೆಯನ್ನ ಆಡಳಿತ ಭಾಷೆಯನ್ನಾಗಿ ಮಾಡಿದವನನ್ನ ಕನ್ನಡ ಪ್ರೇಮಿ ಅಂತ ಹೇಳಕ್ಕಾಗುತ್ತ ಎಂದು ಪ್ರಶ್ನೆ ಮಾಡಿದರು. ಹಾಗೆ ಹೇಳಿದ್ರೆ ಅದಕ್ಕಿಂತ ಅಪಪ್ರಚಾರ ಬೇರೆ ಏನಿದೆ ಮುಲ್ಲಾ ಅನ್ನೋ ಹೆಸರು ಯಾರಿಗೆ ಕನೆಕ್ಟ್ ಆಗುತ್ತೆ ಅಂದ್ರೆ, ಶಾದಿ ಭಾಗ್ಯ, ದೇ ಆರ್ ಆಲ್ ಮೈ ಬ್ರದರ್ಸ್ ಅನ್ನೋರಿಗೆ ಕನೆಕ್ಟ್ ಆಗುತ್ತೆ ಎಂದು ಪರೋಕ್ಷವಾಗಿ ಡಿ ಕೆ ಶಿವಕುಮಾರ್, ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನಡೆಸಿದರು. ಬೆಂಕಿ ಹಾಕಿದ್ರು ಕೂಡ ಅಮಾಯಕರು ಅನ್ನೋರಿಗೆ ಮುಲ್ಲಾ ಬಿರುದು ಕನೆಕ್ಟ್ ಆಗುತ್ತೆ ಕೇಸರಿ, ಕುಂಕುಮವನ್ನ ದೂಡಿ ಟೋಪಿಯನ್ನ ಪ್ರೀತಿಯಿಂದ ಹಾಕಿಕೊಳ್ಳುವವರಿಗೆ ಕನೆಕ್ಟ್ ಆಗುತ್ತೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೆಸರೇಳದೆ ಕುಟುಕಿದರು. 

ನಾವು ಸೌಹಾರ್ದತೆಯನ್ನು ಕಾಪಾಡಿಕೊಳ್ಳಬೇಕು:

ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿ.ಟಿ ರವಿ ಅವರು, ಮಹಾರಾಷ್ಟ್ರದ ವಾಹನಗಳಾಗಲಿ, ಕರ್ನಾಟಕದ ವಾಹನಗಳಿಗಾಗಲಿ ಮಸಿ ಬಳಿಯೋದು, ಪ್ರಚೋದನೆ ಮಾಡೋ ಕೆಲಸ ಸರಿಯಲ್ಲ ಎಂದು ತಿಳಿಸಿದರು. ಅವರು ತಮ್ಮ ರಾಜ್ಯದಲ್ಲಿಇದಕ್ಕೆ ಅವಕಾಶ ಕೊಡಬಾರದು. ಹಾಗೆಯೇ ಈ ರಾಜ್ಯದಲ್ಲಿಅದಕ್ಕೆ ಅವಕಾಶ ಕೊಡಬಾರದು. ಇದರ ಜೊತೆಗೆ ನಾವು ಸೌಹಾರ್ದತೆಯನ್ನು ಕಾಪಾಡಿಕೊಳ್ಳಬೇಕಾದ ಜವಾಬ್ದಾರಿ ಇದೆ ಎಂದರು. 

ಎರಡೂ ರಾಜ್ಯಗಳ ಆಡಳಿತವನ್ನ ನಡೆಸುವರಿಗೆ ಇದೆ, ಈಗಾಗಲೇ ಬಸವರಾಜ ಬೊಮ್ಮಾಯಿ ಅವರು ದೇವೇಂದ್ರ ಫಡ್ನವಿಸ್ ಅವರು ಇಬ್ಬರೂ ಮಾತಾಡಿದ್ದು ಗಡಿ ವಿವಾದ ಅದನ್ನ ಕಾನೂನಾತ್ಮಕವಾಗಿ ನ್ಯಾಯಾಲಯದ ಮೂಲಕ ಬಗೆಹರಿಸಕೊಳ್ಳೋಕೆ ಇಬ್ಬರಿಗೂ ಕೂಡ ಅವಕಾಶ ಇದೆ ಎಂದರು. ವಿವಾದ ಇರೋದು ಸತ್ಯ, ಅದನ್ನ ಬಗೆಹರಿಸಿಕೊಳ್ಳೋಕೆ ಅವಕಾಶ ಇದ್ದು ಇದನ್ನ ಮೀರಿ ನಮ್ಮಸಂಬಂಧನೂ ಇದೆ. ಭಾರತೀಯರು ಅನ್ನೋ ಭಾವನೆ ಇಟ್ಕೊಂಡು ನಾವು ಕೆಲಸ ಮಾಡಬೇಕು ಆಗ ಗಡಿಯನ್ನ ಮೀರಿ ಸಂಬಂಧಗಳು ಗಟ್ಟಿಯಾಗುತ್ತವೆ. ಗಡಿಯ ಗೋಡೆಯನ್ನ ಎತ್ತಿ ಸಂಬಂಧ ಹಾಳು ಮಾಡೋ ಕೆಲಸವನ್ನ ಯಾರೂ ಕೂಡ ಮಾಡಬಾರದು ಎಂದು ಸಲಹೆ ನೀಡಿದರು. 

ಚಿಕ್ಕಮಗಳೂರು: ದತ್ತಜಯಂತಿ ಉತ್ಸವಕ್ಕೆ ಇಂದು ಚಾಲನೆ; ಬಿಗಿ ಪೊಲೀಸ್ ಬಂದೋಬಸ್ತ್

ಮತ್ತೆ ಕರ್ನಾಟಕದ ವಿಷಯ ಬಂದಾಗ ನೆಲ ಜಲದ ರಕ್ಷಣೆ ಬಗ್ಗೆ ಯಾವತ್ತೂ ಕೂಡಾ ರಾಜಿ ಮಾಡಿಕೊಂಡಿಲ್ಲ ಹಾಗೆಯೇ ಆ ವಿಷಯದಲ್ಲಿ ರಾಜಕೀಯ ಪಕ್ಷಗಳು ಒಂದಾಗಿ ನಮ್ಮ ನಿಲುವನ್ನು ವ್ಯಕ್ತಪಡಿಸಿದ್ದೇವೆ ಹಾಗೆಯೇ ಸೌಹಾರ್ದಯುತವಾಗಿ ಬಗೆಹರಿಸುವಂತಹ ದಾರಿಯನ್ನು ಹುಡುಕುತ್ತೇವೆ ಹೊರತು ಸಂಘರ್ಷದ ದಾರಿಯಲ್ಲ ಸೌಹಾರ್ದಯುತವಾಗಿಯೇ ಬಗೆಹರಿಸಿಕೊಳ್ಳುವಂತಹ ಪ್ರಯತ್ನ ಮಾಡಬೇಕು ಅಂತಾ ನಾನು ಆಗ್ರಹಿಸುತ್ತೇನೆ ಎಂದರು.

Latest Videos
Follow Us:
Download App:
  • android
  • ios