Asianet Suvarna News Asianet Suvarna News

ಗಣೇಶೋತ್ಸವ, ಮೊಹರಂ: ಶಿವಮೊಗ್ಗ ಜಿಲ್ಲೆಯಾದ್ಯಂತ ಬಿಗಿ ಬಂದೋಬಸ್ತ್

ಗೌರಿ ಗಣೇಶ ಹಬ್ಬ ಹಾಗೂ ಮೊಹರಂ ಹಬ್ಬದ ಪ್ರಯುಕ್ತ ಶಾಂತಿಯುತ ಆಚರಣೆಗಾಗಿ ಸಕಲ ಕ್ರಮಕೈಗೊಂಡು ಶಿವಮೊಗ್ಗ ಜಿಲ್ಲೆಯಾದ್ಯಂತ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ 

Muharram Ganesha Festival  Security Tightened Across  Shivamogga District
Author
Bengaluru, First Published Sep 2, 2019, 1:52 PM IST

ಶಿವಮೊಗ್ಗ[ಸೆ.02]:  ಗೌರಿ ಗಣೇಶ ಹಬ್ಬ ಹಾಗೂ ಮೊಹರಂ ಹಬ್ಬದ ಪ್ರಯುಕ್ತ ಶಾಂತಿಯುತ ಆಚರಣೆಗಾಗಿ ಸಕಲ ಕ್ರಮಕೈಗೊಂಡು ಜಿಲ್ಲೆಯಾದ್ಯಂತ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶಾಂತರಾಜು ಅವರು ತಿಳಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 2900 ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುತ್ತಿದೆ. ಅದರಲ್ಲಿ ಶಿವಮೊಗ್ಗ ವಿಭಾಗದಲ್ಲಿ 800ಕ್ಕೂ ಹೆಚ್ಚು ಸಾರ್ವಜನಿಕ ಗಣೇಶ ಮೂರ್ತಿಗಳಿವೆ. ಸೆ.2ರಂದು 170, 3ರಂದು 29, ಸೆ.4ರಂದು 1035 ಗಣೇಶ ಮೂರ್ತಿ ವಿಸರ್ಜಿಸಲಾಗುತ್ತಿದೆ. ವಿಸರ್ಜನೆ ವೇಳೆ ಸೂಕ್ತ ಭದ್ರತೆ ಒದಗಿಸಲಾಗುವುದು. ಅದಕ್ಕೆ ಬೇಕಾದ ಮುಂಜಾಗ್ರತೆ ಕ್ರಮಕೈಗೊಳ್ಳಲಾಗಿದೆ ಎಂದರು.

ಗಣೇಶ ಮಂಡಳಿ, ಸಂಘಟಕರಿಗೆ ಅನೇಕ ಸಲಹೆ ಸೂಚನೆಗಳನ್ನು ನೀಡಲಾಗಿದೆ. ಅವುಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ತಪಿದಲ್ಲಿ ಅವರನ್ನೇ ಹೊಣೆ ಮಾಡಲಾಗುವುದು ಹಾಗೂ ಗಣಪತಿ ಮಂಡಳಿ ಅವರು ಒತ್ತಾಯಪೂರ್ವಕವಾಗಿ ಸಾರ್ವಜನಿಕರಿಂದ ಚಂದಾ ವಸೂಲಿ ಮಾಡಬಾರದು. ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ, ಧ್ವನಿವರ್ಷಕ ಬಳಕೆಗೆ ಎಸ್‌ಡಿಪಿಒ, ಸಿಪಿಐ ಕಚೇರಿಯಲ್ಲಿ ಸ್ಥಾಪಿಸಿರುವ ಏಕಗವಾಕ್ಷಿಯಲ್ಲಿ ಅನುಮತಿ ಪತ್ರ ಪಡೆಯಬೇಕು. ಬೆಂಕಿ ಅವಘಡ ತಡೆಗಟ್ಟುವ ಸಲುವಾಗಿ ಆಕಸ್ಮಿಕ ಬೆಂಕಿ ಆರಿಸುವ ಸಲಕರಣೆಗಳಾದ ಮರಳು ಮತ್ತು ನೀರು ತುಂಬಿದ ಬಕೆಟ್‌, ಫೈರ್‌ ಎಕ್ಸ್‌ಟಿಂಗಿಷರ್‌ ಇಟ್ಟುಕೊಳ್ಳಬೇಕು ಎಂದು ಹೇಳಿದರು.

ಮನರಂಜನಾ ಕಾರ್ಯಕ್ರಮದಲ್ಲಿ ಸ್ವಯಂಸೇವಕರನ್ನು ನೇಮಿಸಿ ಗುಂಪನ್ನು ನಿಯಂತ್ರಿಸಬೇಕು. ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಸ್ಥಳಾವಕಾಶ ಮಾಡಬೇಕು. ಸುರಕ್ಷತೆ ದೃಷ್ಟಿಯಿಂದ ಗಣಪತಿ ಮಂಟಪದ ಬಳಿ ಬೆಳಗ್ಗೆ 6 ಜನ, ರಾತ್ರಿ ವೇಳೆ 2 ಮಂದಿ ಸ್ವಯಂ ಸೇವಕರನ್ನು ದಿನದ 24 ಗಂಟೆ ಇರುವಂತೆ ನೋಡಿಕೊಳ್ಳಬೇಕು. ಗಣಪತಿ ವಿಸರ್ಜನಾ ಮಾರ್ಗ ಸುಸ್ಥಿತಿಯಲ್ಲಿರುವ ಬಗ್ಗೆ ಮುಂಚಿತವಾಗಿ ಗಣಪತಿ ಮಂಡಳಿ ಖಚಿತಪಡಿಸಿಕೊಳ್ಳಬೇಕು. ಪೂರ್ವ ನಿಗದಿತ ಮಾರ್ಗದಲ್ಲಿಯೇ ವಿಸರ್ಜನಾ ಮೆರವಣಿಗೆ ಸಾಗುವಂತೆ ಕ್ರಮಕೈಗೊಳ್ಳಬೇಕು. ಗಣಪತಿ ವಿಸರ್ಜನಾ ಮೆರವಣಿಗೆಯಲ್ಲಿ ಪಾನಮತ್ತರನ್ನು, ಮಾರಕಾಸ್ತ್ರ ಹೊಂದಿರುವವರನ್ನು ನಿಗಾವಹಿಸಿ ಮೆರವಣಿಗೆಯಿಂದ ಹೊರಹಾಕಬೇಕೆಂದು ಗಣೇಶ ಮಂಡಳಿಯವರಿಗೆ ಸೂಚಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಮುಂಗಡವಾಗಿ ಗಣಪತಿ ಮಂಡಳಿಯ ಪದಾಧಿಕಾರಿಗಳು ಮತ್ತು ಪ್ರತಿನಿಧಿಗಳ ಪಟ್ಟಿಯನ್ನು ವ್ಯಾಪ್ತಿಯ ಪೊಲೀಸ್‌ ಠಾಣೆಗೆ ಮುಂಚಿತವಾಗಿ ಸಲ್ಲಿಸುವುದು. ಗಣಪತಿ ಪೆಂಡಾಲ್‌ನಲ್ಲಿ ಸಾಕಷ್ಟುಬೆಳಕಿನ ವ್ಯವಸ್ಥೆ ಇರುವಂತೆ ಸೂಚಿಸಬೇಕು. ಪ್ರಮುಖ ಗಣಪತಿ ಮಂಡಳಿಯವರು ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಿಕೊಳ್ಳಬೇಕು. ಗಣಪತಿ ಪ್ರತಿಷ್ಠಾಪನೆ ದಿನ, ಕಾರ್ಯಕ್ರಮ ವಿವರಗಳನ್ನು ಮುಂಚಿತವಾಗಿ ಸರಹದ್ದಿನ ಪೊಲೀಸ್‌ ಠಾಣೆಗೆ ಸಲ್ಲಿಸಬೇಕು ಎಂದು ಹೇಳಿದರು.

ಸಿಡಿಮದ್ದು, ಪಟಾಕಿ ಮುಂತಾದವುಗಳನ್ನು ಸಿಡಿಸುವಾಗ ಅನ್ಯರಿಗೆ ತೊಂದರೆ ಕೊಡಬಾರದು. ಗಣೇಶೋತ್ಸವ ಸಂದರ್ಭದಲ್ಲಿ ಯಾವುದೇ ಅನಾಹುತ ಸಂಭವಿಸಿದಂತೆ ನೋಡಿಕೊಳ್ಳಬೇಕು. ಇದಕ್ಕೆ ಗಣೇಶ ಮಂಡಳಿ ಜವಾಬ್ದಾರಿ, ಹೊಣೆಗಾರರಾಗಿರುತ್ತಾರೆ ಎಂದು ಎಚ್ಚರಿಕೆ ನೀಡಿದರು.

ಗಣಪತಿ ಮಂಡಳಿಗಳಿಗೆ ಸೂಚನೆ

1) ಗಣೇಶ ಮೂರ್ತಿ ವಿಸರ್ಜನೆ ಸಮಯದಲ್ಲಿ ಪ್ರಚೋದನಕಾರಿ ಘೋಷಣೆ, ಗೀತೆ, ಭಾಷಣಗಳನ್ನು ಮಾಡದಂತೆ ಕ್ರಮಕೈಗೊಳ್ಳಲಾಗುವುದು ಹಾಗೂ ವಿಸರ್ಜನಾ ಮೆರವಣಿಗೆಯಲ್ಲಿರುವವರು ಧಾರ್ಮಿಕ ಕಟ್ಟಡಗಳ ಮೇಲೆ ಅನಗತ್ಯವಾಗಿ ಬಾವುಟ ಮತ್ತು ಬ್ಯಾನರ್‌ ಕಟ್ಟದಂತೆ ನಿಷೇಧಿಸಲಾಗಿದೆ.

2) ಸಣ್ಣಪುಟ್ಟಘಟನೆಗಳು ಉಂಟಾದಲ್ಲಿ ಕೂಡಲೇ ಸ್ಥಳೀಯ ಪೊಲೀಸರಿಗೆ ಮತ್ತು ಜಿಲ್ಲಾ ಕಂಟ್ರೋಲ್‌ ರೂಂಗೆ ಮಾಹಿತಿ ನೀಡುವುದು.

3) ವಿಸರ್ಜನಾ ಮೆರವಣಿಗೆ ಸಂದರ್ಭದಲ್ಲಿ ಗಣಪತಿ ಮಂಡಳಿ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಗಣಪತಿ ಬ್ಯಾಡ್ಜ್‌ ಧರಿಸಿ ಹಾಜರಾಗಬೇಕು ಮತ್ತು ಸ್ವಯಂ ಸೇವಕರನ್ನು ನಿಯೋಜಿಸಿಕೊಳ್ಳಬೇಕು.

Follow Us:
Download App:
  • android
  • ios