ಗುಂಡ್ಲುಪೇಟೆ [ಸೆ.18]:  ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆಸಮಿತಿಯ ಅಧ್ಯಕ್ಷರ ಚುನಾವಣೆ ಸೆ. 18ರಂದು ನಡೆಯಲಿದ್ದು, ಅಧ್ಯಕ್ಷರಾಗಿ ಕಾಂಗ್ರೆಸ್‌ ಮುಖಂಡ ಮೃತ್ಯುಂಜಯ ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆ ಇದೆ.

ಕೃಷಿ ಉತ್ಪನ್ನ ಮಾರುಕಟ್ಟೆಸಮಿತಿ ಅಧ್ಯಕ್ಷರಾಗಿದ್ದ ಕರಕಲ ಮಾದಹಳ್ಳಿ ಪ್ರಭುಸ್ವಾಮಿ ಪಕ್ಷದ ಆಂತರಿಕ ಒಳ ಒಪ್ಪಂದದಂತೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಸೆ. 18ರ ಬುಧವಾರ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿದ್ದು, ತಹಸೀಲ್ದಾರ್‌ ಎಂ. ನಂಜುಂಡಯ್ಯ ಚುನಾವಣಾಧಿಕಾರಿ ನೇಮಕಗೊಂಡಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ ಮುಖಂಡರೂ ಆದ ಹಾಲು ಉತ್ಪಾದಕರ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಕರಾದ ಸೋಮಹಳ್ಳಿಯ ಎಸ್‌.ಶಿವನಾಗಪ್ಪ ಹಾಗೂ ಶ್ಯಾನಡ್ರಹಳ್ಳಿ ಮೃತ್ಯುಂಜಯ ನಡುವೆ ಪೈಪೋಟಿ ನಡೆದಿತ್ತು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕ ಮಾಡಿ

ಈ ಬಾರಿಯೇ ಎಸ್‌.ಶಿವನಾಗಪ್ಪ ಅವರಿಗೆ ಅಧ್ಯಕ್ಷ ಸ್ಥಾನ ಸಿಗುವ ಸಾಧ್ಯತೆ ಹೆಚ್ಚಿತ್ತಾದರೂ ತಾಪಂ ಅಧ್ಯಕ್ಷ ಸ್ಥಾನ ಈ ಬಾರಿ ಸೋಮಹಳ್ಳಿಯ ಎಸ್‌.ಎಸ್‌.ಮಧುಶಂಕರ್‌ಗೆ ಸಿಗಲಿದೆ. ಹಾಗಾಗಿ ಒಂದೇ ಗ್ರಾಮಕ್ಕೆ ಎರಡು ತಾಪಂ ಹಾಗೂ ಎಪಿಎಂಸಿ ಅಧ್ಯಕ್ಷ ಸ್ಥಾನ ಕೊಡಬಾರದು ಎಂದು ಸ್ಥಳೀಯ ಕಾಂಗ್ರೆಸ್‌ ವರಿಷ್ಠರು ಚರ್ಚಿಸಿದ ಪರಿಣಾಮ ಮೃತ್ಯುಂಜಯಗೆ ಅಧ್ಯಕ್ಷ ಸ್ಥಾನ ಒಲಿಯಲಿದೆ.

ಎಪಿಎಂಸಿ ಅಧ್ಯಕ್ಷ ಕರಕಲಮಾದಹಳ್ಳಿ ಪ್ರಭು ರಾಜೀನಾಮೆ ನೀಡಿದ ಬಳಿಕ ಕೋಟೆಕೆರೆ ಹೊಣಕಾರನಾಯಕ ಪ್ರಭಾರ ಅಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದಾರೆ.