ಇಂಡಿ(ಜು.29): ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೋ ಅಥವಾ ಈಗಿನ ಡಿಸಿಎಂ ಲಕ್ಷ್ಮಣ ಸವದಿ ಮುಖ್ಯಮಂತ್ರಿ ಆಗುತ್ತಾರೋ ಎಂಬುದನ್ನು ಪಕ್ಷದ ಹೈಕಮಾಂಡ್‌ ನಿರ್ಣಯಿಸುತ್ತದೆ. ಆ ಬಗ್ಗೆ ನಾನೇನೂ ಹೇಳಿವುದಿಲ್ಲ ಎಂದು ವಿಜ​ಯ​ಪುರ ಸಂಸದ ರಮೇಶ ಜಿಗಜಿಣಗಿ ಹೇಳಿ​ದ್ದಾರೆ. 

ವಿಜ​ಯ​ಪುರ ಜಿಲ್ಲೆಯ ಇಂಡಿ ಪಟ್ಟಣದಲ್ಲಿ ಮಂಗಳವಾರ ಸುದ್ದಿ​ಗಾ​ರ​ರೊಂದಿಗೆ ಮಾತ​ನಾ​ಡಿದ ಅವರು, ನಾನು ಕೇವಲ ಸಂಸದನಷ್ಟೇ. ಸಂಸ​ದ​ನಾಗಿ ಜಿಲ್ಲೆಯ ಅಭಿವೃದ್ಧಿ ಕುರಿತು ಹೇಳಬಲ್ಲೆ ಅಷ್ಟೇ. ಸಿಎಂ ಬದ​ಲಾ​ವಣೆ ಬಗ್ಗೆ ಹೇಳಲ್ಲ ಎಂದಷ್ಟೇ ತಿಳಿಸಿದ್ದಾರೆ.

ರಫೇಲ್‌ ವಿಮಾನ ಪೈಲಟ್‌ ಅರುಣ್‌ ವಿಜಯಪುರ ಸೈನಿಕ ಶಾಲೆ ವಿದ್ಯಾರ್ಥಿ!

ಶೀಘ್ರ ಗೊಂದಲ ನಿವಾರಣೆ

ಹಿಂದಿನ ಕಾಂಗ್ರೆಸ್‌ ಸರ್ಕಾರ ತಳವಾರ, ಪರಿವಾರ ಜಾತಿಗಳನ್ನು ಪರಿಶಿಷ್ಟ ಪಂಗಡದ ಮೀಸಲಾತಿಗೆ ಒಳಪಡಿಸುವ ಕುರಿತು ಸ್ಪಷ್ಟವಾದ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಕಲುಹಿಸದಿರುವುದು ಇಂದು ತಳವಾರ, ಪರಿವಾರ ಸಮುದಾಯಕ್ಕೆ ಎಷ್ಟಿ ಪ್ರಮಾಣಪತ್ರ ವಿತರಣೆಯಾಗುವಲ್ಲಿ ಗೊಂದಲವಾಗಿದೆ ಎಂದು ಹೇಳಿದ್ದಾರೆ. 

ಹಿಂದಿನ ಕಾಂಗ್ರೆಸ್‌ ಸರಕಾರ ಯಾವ ರೀತಿ ಪ್ರಸ್ತಾವನೆ ಸಲ್ಲಿಸಿದೆಯೋ ಅದೇ ಪ್ರಕಾರ ಕೇಂದ್ರ ಸರಕಾರ ಮಂಜೂರು ನೀಡಿದೆ. ಕಲೆವೇ ದಿನದಲ್ಲಿ ಈ ಗೊಂದಲ ನಿವಾರಿಸಲಾಗುವುದು. ಅಲ್ಲಿಯವರೆಗೆ ತಳವಾರ, ಪರಿವಾರ ಸಮುದಾಯವರು ಶಾಂತರಾಗಿರಬೇಕು ಎಂದು ತಿಳಿಸಿದ್ದಾರೆ.