ಬಂಗಾರಪ್ಪರನ್ನ ನೆನೆಸಿಕೊಳ್ಳಿ: ರೈತರ ಪ್ರಶ್ನೆಗೆ ಗರಂ ಆದ ಸಂಸದ ಡಿ.ಕೆ.ಸುರೇಶ್

ತಾಲೂಕಿನ ಸೀಗೇಕುಪ್ಪೆ ಗ್ರಾಮ ಪಂಚಾಯಿತಿಯಲ್ಲಿ ನಡೆದ ಜನ ಸಂಪರ್ಕ ಸಭೆಯಲ್ಲಿ ರೈತರು ಕೇಳಿದ ಪ್ರಶ್ನೆಗೆ ಸಂಸದ ಡಿ.ಕೆ.ಸುರೇಶ್ ಗರಂ ಆಗಿ ಉತ್ತರ ನೀಡಿದರು. ನಿಮ್ಮ ಮನೆಯಲ್ಲಿ ವೃದ್ಧಾಪ್ಯ ವೇತನ ತೆಗೆದುಕೊಂಡರೆ 1200 ರು.. ಬರುತ್ತದೆ. 5 ಕೆ.ಜಿ. ಅಕ್ಕಿ ಕೊಟ್ಟಿದ್ದಾರೆ.

MP DK Suresh Slams On Magadi Villagers Farmers gvd

ಮಾಗಡಿ (ಡಿ.02): ತಾಲೂಕಿನ ಸೀಗೇಕುಪ್ಪೆ ಗ್ರಾಮ ಪಂಚಾಯಿತಿಯಲ್ಲಿ ನಡೆದ ಜನ ಸಂಪರ್ಕ ಸಭೆಯಲ್ಲಿ ರೈತರು ಕೇಳಿದ ಪ್ರಶ್ನೆಗೆ ಸಂಸದ ಡಿ.ಕೆ.ಸುರೇಶ್ ಗರಂ ಆಗಿ ಉತ್ತರ ನೀಡಿದರು. ನಿಮ್ಮ ಮನೆಯಲ್ಲಿ ವೃದ್ಧಾಪ್ಯ ವೇತನ ತೆಗೆದುಕೊಂಡರೆ 1200 ರು.. ಬರುತ್ತದೆ. 5 ಕೆ.ಜಿ. ಅಕ್ಕಿ ಕೊಟ್ಟಿದ್ದಾರೆ, 5 ಕೆ.ಜಿ. ಅಕ್ಕಿಗೆ ದುಡ್ಡು ಕೊಟ್ಟಿದ್ದಾರೆ, ರೈತರ ಒಂದು ಪಂಪ್ ಸೆಟ್ ಗೆ ಒಂದು ತಿಂಗಳಿಗೆ 38 ಸಾವಿರ ರು. ಸರ್ಕಾರ ದುಡ್ಡು ಕೊಡಬೇಕು. ವಿದ್ಯುತ್‌ ಉತ್ಪಾದನೆಗೂ ಸರ್ಕಾರ ಹಣ ಕೊಡಬೇಕು. ಪಂಪ್ ಸೆಟ್ ಗೆ 500- 100 ರು. ಬಿಲ್ ಮಾಡಿದರೆ ನೀನು ವ್ಯವಸಾಯ ಮಾಡುತ್ತಿರಲಿಲ್ಲ, ವ್ಯವಸಾಯ ಬಿಟ್ಟು ಎಲ್ಲಾದರೂ ಕೂಲಿಗೆ ಹೋಗುತ್ತಿದ್ದೆ. 

ಇವತ್ತು ಬಂಗಾರಪ್ಪ ಅವರನ್ನ ನೆನೆಸಿಕೊಳ್ಳಬೇಕು. ಮಾಡಿದ್ದೆಲ್ಲ ನಮ್ಮದಲ್ಲ, ಮಾಡದಿರೋದೆಲ್ಲ ನಮಗೆ ಬೇಕು ಅನ್ನೋದನ್ನ ಬಿಡಿ ಎಂದು ಹೇಳಿದರು. ತಿಂಗಳಿಗೆ 2 ಸಾವಿರದಂತೆ ವರ್ಷಕ್ಕೆ 24 ಸಾವಿರ ದುಡ್ಡು ಕೊಡುತ್ತಿದ್ದೇವೆ. ಇಡೀ ದೇಶದಲ್ಲೇ ಯಾರು ಕೂಡ 24 ಸಾವಿರ ಕೊಟ್ಟಿಲ್ಲ. ನಿಮ್ಮ ಪಂಚಾಯತಿಯಲ್ಲಿ 1480 ಜನರಿಗೆ ಹಣ ಬರುತ್ತಿದೆ. ನಿಮಗೆ ಬರೋದನ್ನ ಕೊಟ್ಟಸ್ಟು ಇನ್ನೂ ಅದು ಕೊಡಿ ಇದು ಕೊಡಿ ಅನೋದನ್ನ ಬಿಡಿ. 

ದಿನ ಜೆಡಿಎಸ್, ಬಿಜೆಪಿ ಅವರ ಬಳಿ ಬಾಯಿಗೆ ಬಂದ ಹಾಗೆ ಬೈಸಿಕೊಳ್ಳುತ್ತಿದ್ದೇವೆ. ನೀವು ಇನ್ನೂ ಅದು ಕೊಡಿ ಇದು ಕೊಡಿ ಅನ್ನುತ್ತಿದ್ದೀರಿ. ಇವರ್ಯಾರೋ ರಸ್ತೆ ಮಾಡಿಸಿ, ಮೋರಿ ಮಾಡಿಸಿ ಅಂತಾರೆ. ಅವರ್ಯಾರೋ ಇನ್ನೇನೋ ಕೇಳ್ತಾರೆ. ಜಮೀನ್ ಕೊಟ್ಟಿದ್ದೇವೆ ಫ್ರೀ ಆಗಿ. ಉಳುವವನೇ ಭೂಮಿಯ ಒಡೆಯ ಕಾನೂನು ತಂದಿದ್ದೇವೆ. ಇದನ್ನೆಲ್ಲ ತಂದಿರೋದು ನಿಮಗೋಸ್ಕರ. ಯಾರಾದರೂ ನೆನೆಸಿಕೊಳ್ಳುತ್ತಿದ್ದೀರಾ ನೀವು? ಇದನ್ನೆಲ್ಲ ಜೆಡಿಎಸ್- ಬಿಜೆಪಿ ಅವರು ಮಾಡಿಸಿಕೊಟ್ಟಿದ್ರಾ? ಎಂದು ಪ್ರಶ್ನಿಸಿದರು.

ಹಾಸನಕ್ಕೆ ಪ್ರಜ್ವಲ್ ರೇವಣ್ಣ ಲೋಕಸಭಾ ಅಭ್ಯರ್ಥಿ: ಎಚ್.ಡಿ.ದೇವೇಗೌಡ

ಕಾಡಿನಲ್ಲಿರೋ ಜಮೀನು ಮಾರುತ್ತೇನೆ ಅಂದರು 50 ಲಕ್ಷ ರುಪಾಯಿಗೆ ಹೋಗತ್ತೆ. ನೀನು ಕಟ್ಟೋ ಟ್ಯಾಕ್ಸ್ ಎಷ್ಟು ಯೋಚನೆ ಮಾಡು. ಬರಪರಿಹಾರ ಕೊಡುತ್ತಾರೆ ಇರು ನಿನಗೆ ಎಂದು ರೈತರು ಕೇಳಿದ ಪ್ರಶ್ನೆಗೆ ಸಂಸದ ಡಿ.ಕೆ. ಸುರೇಶ್ ತೀಕ್ಷಣವಾಗಿ ಉತ್ತರ ನೀಡಿದರು. ಜೊತೆಗೆ ತಾಲೂಕಿನಲ್ಲಿ ನಡೆಯುತ್ತಿರುವ ನೀರಾವರಿ ಯೋಜನೆ ಬಗ್ಗೆಯೂ ವಿರೋಧ ಪಕ್ಷದ ವಿರುದ್ಧ ಕಿಡಿಕಾರಿದರು. ಕಾರ್ಯಕ್ರಮದಲ್ಲಿ ಶಾಸಕ ಬಾಲಕೃಷ್ಣ, ತಹಸೀಲ್ದಾರ್ ಸುರೇಂದ್ರ ಮೂರ್ತಿ ಇತರೆ ಇಲಾಖೆಗಳ ಅಧಿಕಾರಿಗಳು, ಜನಪ್ರತಿನಿಧಿಗಳು ಭಾಗವಹಿಸಿದ್ದರು.

Latest Videos
Follow Us:
Download App:
  • android
  • ios