ಬದುಕಿಲ್ಲ ಎಂದು ಕೊಂಡಿದ್ದ ಮಗ 20 ವರ್ಷದ ನಂತ್ರ ಕಣ್ಣೆದುರು ಬಂದ
ಇನ್ನೆಂದೂ ಮರಳಿ ಬರಲಾರ ಎಂದುಕೊಂಡಿದ್ದ ಮಗ ಶಿವರಾತ್ರಿ ದಿನ ಹಠಾತ್ತನೆ ಕಣ್ಮುಂದೆ ಬಂದಿದ್ದ. 20 ವರ್ಷಗಳ ನಂತರ ಕರುಳ ಕುಡಿಯನ್ನು ಕಂಡ ಅಮ್ಮನಿಗಾದ ಆನಂದ ಅಷ್ಟಿಷ್ಟಲ್ಲ. ಕೊಡಗಿನ ಅದೃಷ್ಟವಂತ ತಾಯಿಯೊಬ್ಬರು 2 ದಶಕಗಳ ನಂತರ ತಮ್ಮ ಪುತ್ರನನ್ನು ಮರಳಿ ಪಡೆದಿದ್ದಾರೆ.
ಮಡಿಕೇರಿ(ಫೆ.26): ಇನ್ನೆಂದೂ ಮರಳಿ ಬರಲಾರ ಎಂದುಕೊಂಡಿದ್ದ ಮಗ ಶಿವರಾತ್ರಿ ದಿನ ಹಠಾತ್ತನೆ ಕಣ್ಮುಂದೆ ಬಂದಿದ್ದ. 20 ವರ್ಷಗಳ ನಂತರ ಕರುಳ ಕುಡಿಯನ್ನು ಕಂಡ ಅಮ್ಮನಿಗಾದ ಆನಂದ ಅಷ್ಟಿಷ್ಟಲ್ಲ. ಕೊಡಗಿನ ಅದೃಷ್ಟವಂತ ತಾಯಿಯೊಬ್ಬರು 2 ದಶಕಗಳ ನಂತರ ತಮ್ಮ ಪುತ್ರನನ್ನು ಮರಳಿ ಪಡೆದಿದ್ದಾರೆ.
ತಾಯಿ ಮಗನ ಅಪರೂಪದ ಸಮ್ಮಿಲನಕ್ಕೆ ಕೊಡಗು ಸಾಕ್ಷಿಯಾಗಿದೆ. ಅಮ್ಮ-ಮಗ 20 ವರ್ಷಗಳ ಬಳಿಕ ಒಂದಾಗಿದ್ದಾರೆ. ಕೊಡಗಿನ ಕುಟುಂಬ ಅಪರೂಪದ ಸಂಭ್ರಮಕ್ಕೆ ಸಾಕ್ಷಿಯಾಗಿದೆ. 20 ವರ್ಷದ ಹಿಂದೆ ಮನೆ ಬಿಟ್ಟು ಹೋಗಿದ್ದ ಶಿವಕುಮಾರ ಎರಡು ದಶಕದ ಬಳಿಕ ಮರಳಿ ಮನೆಗೆ ಬಂದಿದ್ದಾರೆ.
ಭಾಷಣದಲ್ಲಿ ಪ್ರವಾದಿ ಪೈಗಂಬರ್ ಅವಹೇಳನ ಮಾಡಿದ ಮೋದಿ
ಶಿವರಾತ್ರಿಯಂದು ತಾಯಿಯೆದುರು ಪ್ರತ್ಯಕ್ಷನಾದ ಶಿವಕುಮಾರನನ್ನು ನೋಡಿ ತಾಯಿ ಖುಷಿಯಾಗಿದ್ದಾರೆ. ಸೋಮವಾರಪೇಟೆ ತಾಲೂಕಿನ ಕಣಿವೆಯಲ್ಲಿನ ಕುಟುಂಬ ತಾಯಿ ಮಗನ ಸಮ್ಮಿಲನದ ಸಂಭ್ರಮ ಕಂಡಿದೆ. ಊರು ಬಿಟ್ಟ ಮಗ ಬದುಕಿಲ್ಲ ಎಂದು ಮನೆಯವರು ಅಂದುಕೊಂಡಿದ್ದರು. ಮಗ ಮಡದಿ ಮಕ್ಕಳ ಜತೆ ಮತ್ತೆ ಹುಟ್ಟೂರಿಗೆ ಆಗಮಿಸಿದ್ದಾನೆ.
20 ವರ್ಷದ ಬಳಿಕ ಹೆತ್ತೊಡಲಿಗಾಗಿ ಹಾತೊರೆದ ಮಗನ ಮನ, ಅಪರೂಪದ ಬೆಸುಗೆ ಕಂಡು ಜನ ಮೂಕವಿಸ್ಮಿತರಾದರು. ಮಗನ ಆಗಮನದಿಂದ ತಾಯಿ ಶಿವಮ್ಮ ಫುಲ್ ಖುಷಿಯಾಗಿದ್ದಾರೆ. ಕಣಿವೆಯಿಂದ ಹೋಗಿ ಶಿವಕುಮಾರ್ ಉತ್ತರಪ್ರದೇಶದಲ್ಲಿ ನೆಲೆಸಿದ್ದರು.