ಚಿಕ್ಕಬಳ್ಳಾಪುರ: ಅಂಬ್ಯುಲೆನ್ಸ್‌ನಲ್ಲೇ ಮಗುವಿಗೆ ಜನ್ಮ ನೀಡಿದ ತಾಯಿ..!
ಗುಡಿಬಂಡೆ ತಾಲೂಕಿನ ಎಲ್ಲೋಡು ಗ್ರಾಮದ ಮಹಿಳೆ ಹೆರಿಗೆ ನೋವು ಕಾಣಿಸಿಕೊಂಡ ಕಾರಣ 108 ಅಂಬ್ಯುಲೆನ್ಸ್ ಮೂಲಕ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ಕರೆತರಲಾಗುತ್ತಿತ್ತು. ಈ ವೇಳೆ ಇನ್ನೇನು ಜಿಲ್ಲಾ ಕೇಂದ್ರ ತಲುಪಿ ವಾಪಸಂದ್ರದ ಬಳಿ ಬರುವಷ್ಟರಲ್ಲಿ ಮಹಿಳೆಗೆ ಹೆರಿಗೆಯಾಗಿದೆ.
ಚಿಕ್ಕಬಳ್ಳಾಪುರ(ಡಿ.14): ಹೆರಿಗೆಗೆ ಜಿಲ್ಲಾಸ್ಪತ್ರೆಗೆ ಆಗಮಿಸುವಾಗ ಮಾರ್ಗ ಮಧ್ಯೆ ಅಂಬ್ಯುಲೆನ್ಸ್‌ನಲ್ಲೇ ಹೆರಿಗೆಯಾದ ಘಟನೆ ಚಿಕ್ಕಬಳ್ಳಾಪುರದಲ್ಲಿ ಇಂದು(ಗುರುವಾರ) ನಡೆದಿದೆ.
ಗುಡಿಬಂಡೆ ತಾಲೂಕಿನ ಎಲ್ಲೋಡು ಗ್ರಾಮದ ಮಹಿಳೆ ಹೆರಿಗೆ ನೋವು ಕಾಣಿಸಿಕೊಂಡ ಕಾರಣ 108 ಅಂಬ್ಯುಲೆನ್ಸ್ ಮೂಲಕ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ಕರೆತರಲಾಗುತ್ತಿತ್ತು. ಈ ವೇಳೆ ಇನ್ನೇನು ಜಿಲ್ಲಾ ಕೇಂದ್ರ ತಲುಪಿ ವಾಪಸಂದ್ರದ ಬಳಿ ಬರುವಷ್ಟರಲ್ಲಿ ಮಹಿಳೆಗೆ ಹೆರಿಗೆಯಾಗಿದೆ.
ಗರ್ಭಿಣಿಯೂ ಅಲ್ಲ, ಮಗುವೂ ಆಗಿಲ್ಲ, ಆದ್ರೂ ಸ್ತನಗಳಿಂದ ಡಿಸ್ಚಾರ್ಜ್ ಆಗ್ತಿದ್ಯಾ?
ಅಂಬ್ಯುಲೆನ್ಸ್ ನಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು ಅಂಬ್ಯುಲೆನ್ಸ್ ಸಿಬ್ಬಂದಿ ಸುರಕ್ಷಿತವಾಗಿ ಹೆರಿಗೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ತಾಯಿ ಮಗು ಇಬ್ಬರು ಕ್ಷೇಮವಾಗಿದ್ದು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ಇಬ್ಬರನ್ನ ದಾಖಲಿಸಲಾಗಿದೆ.