ನಂಜನಗೂಡು [ಆ.26]:  ತಾಲೂಕಿನ ಹುಲ್ಲಹಳ್ಳಿ ಸಮೀಪದ ಸಂಗಮ ಕ್ಷೇತ್ರದ ಸ್ನಾನ ಘಟ್ಟದ ಬಳಿ ಕಪಿಲಾ ನದಿಗೆ ಹಾರಿ ತಾಯಿ ಮಗಳಿಬ್ಬರೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ  ಬಂದಿದೆ.

ಮೈಸೂರಿನ ಮಂಚೇಗೌಡನ ಕೊಪ್ಪಲಿನ ನಿವಾಸಿ ಬೆಟ್ಟೇಗೌಡರ ಮಗಳು ಮಂಜುಳಾ (38) ಹಾಗೂ ಅವರ ಮಗಳು ಸೌಮ್ಯ (19) ಮೃತರು. ನದಿಗೆ ಹಾರುವ ಮುನ್ನ ತಾಯಿ, ಮಗಳಿಬ್ಬರೂ ಒಟ್ಟಿಗೆ ಸೆಲ್ಫಿ ತೆಗೆದುಕೊಂಡಿದ್ದರು. ಬಳಿಕ ನದಿಗೆ ಹಾಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

ವಾರದ ಹಿಂದೆಯಷ್ಟೇ ಮಂಜುಳಾ ಅವರ ಅಳಿಯ,  ಸೌಮ್ಯಳ ಪತಿ ಅಪಘಾತದಲ್ಲಿ ಮೃತಪಟ್ಟಿದ್ದರಿಂದಾಗಿ ತಾಯಿ ಮತ್ತು ಮಗಳಿಬ್ಬರೂ ಕೂಡ ಆಘಾತಗೊಂಡಿದ್ದರು. ಇದರಿಂದ ಮನನೊಂದು ಮಗಳೊಂದಿಗೆ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಈ ಸಂಬಂಧ ಮೃತ ಮಂಜುಳಾ ತಂದೆ ಹುಲ್ಲಹಳ್ಳಿ ಪೊಲೀಸ್‌ ಠಾಣೆಗೆ ದೂರು ದಾಖಲಿಸಿದ್ದಾರೆ.