ಸುತ್ತೂರು(ಜೂ.11): ನಾವು ದೇವರನ್ನು ಹುಡುಕಿಕೊಂಡು ಹೋಗುವ ಬದಲು, ನಮ್ಮ ಆತ್ಮದಲ್ಲೇ ಕಾಣುವಂತಹ ವ್ಯವಸ್ಥೆಯನ್ನು ರೂಪಿಸಿಕೊಂಡಾಗ ಮಾತ್ರ ಶಾಂತಿ ನೆಮ್ಮದಿ ದೊರಕುತ್ತದೆ ಎಂದು ಮಾಜಿ ಮುಖ್ಯಮಂತ್ರಿ, ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

ವರುಣ ಕ್ಷೇತ್ರಕ್ಕೆ ಸೇರಿದ ವರಕೋಡು ಗ್ರಾಮದ ಬಳಿ ಪುರಾತನ ಕಾಲದ ಶ್ರೀ ಬೀರೇಶ್ವರ ದೇವಸ್ಥಾನದ ಪುನರ್‌ನಿರ್ಮಾಣಕ್ಕೆ ಬುಧವಾರ ಭೂಮಿ ಪೂಜೆಯನ್ನು ನೆರವೇರಿಸಿ ಅವರು ಮಾತನಾಡಿದರು.

ಸಿದ್ದರಾಮಯ್ಯ ಆಗಮನದ ಹಿನ್ನೆಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಭಕ್ತರು, ಅಭಿಮಾನಿಗಳು ಹಾಗೂ ಪಕ್ಷದ ಕಾರ್ಯಕರ್ತರು ನೆರೆದಿದ್ದರು. ವೇದಿಕೆಯಲ್ಲಿ ಸಿದ್ದರಾಮಯ್ಯ ಅವರಿಗೆ ಹಾರ ಹಾಕಲು ಪಕ್ಷದ ಕಾರ್ಯಕರ್ತರು ಮತ್ತು ಅಭಿಮಾನಿಗಳು ಮುಗಿಬಿದ್ದರು. ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಸುಮಾರು 500ಕ್ಕೂ ಹೆಚ್ಚು ಮಂದಿ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾದರು.

ಗ್ರಾಮೀಣ ಪ್ರದೇಶಗಳಲ್ಲಿ ದೇವಾಲಯಗಳನ್ನು ನಿರ್ಮಿಸಿಕೊಂಡು ಶಾಂತಿಯುತ ಬದುಕನ್ನು ಕಾಣಬೇಕು ಹಾಗೂ ಈ ನಡುವೆ ಇತ್ತೀಚಿನ ದಿನಗಳಲ್ಲಿ ಕೊರೋನಾ ವೈರಸ್‌ ಬಂದಿರುವ ಹಿನ್ನೆಲೆ ಎಲ್ಲರೂ ಶುಚಿತ್ವಕ್ಕೆ ಹೆಚ್ಚು ಒತ್ತು ನೀಡುವ ಮೂಲಕ ಹಾಗೂ ಪ್ರತಿಯೊಬ್ಬರು ಮಾಸ್ಕ್‌ ಧರಿಸುವ ಜೊತೆಗೆ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ರೋಗವನ್ನು ಹೋಗಲಾಡಿಸಲು ಶ್ರಮಿಸಬೇಕು ಎಂದರು.

ಜನ ಜಾಸ್ತಿ ಇದ್ದಾರೆ ಅಂತಿದ್ರೆ ಕಾರ್ಯಕ್ರಮಕ್ಕೆ ಬರ್ತಿರ್ಲಿಲ್ಲ ಎಂದ ಸಿದ್ದು

ಗ್ರಾಮಸ್ಥರು ಈ ದೇವಾಲಯ ನಿರ್ಮಾಣಕ್ಕೆ ದೇಣಿಗೆಯನ್ನು ಹಾಕಿಕೊಂಡು ಕೆಲಸ ಮುಂದುವರೆಸಿ ನಾನು ಸಹ ಸಹಾಯ ನೀಡುತ್ತೇನೆ ಎಂದು ಅವರು ಭರವಸೆ ನೀಡಿದರು. ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ಸರ್ಕಾರದ ವತಿಯಿಂದ ಹಣ ಬಿಡುಗಡೆ ಮಾಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.

ಗ್ರಾಮದ ಮುಖಂಡ ಅಪ್ಪಾಜಿ ಗೌಡ ಮಾತನಾಡಿ, ವರಕೋಡು, ಕೆಂಪಯ್ಯನ ಹುಂಡಿ, ಬಡಗಲ ಹುಂಡಿ, ಮೂಡಲ ಹುಂಡಿ, ದುದ್ದಗೆರೆ ಸೇರಿದಂತೆ ನೂರಾರು ಗ್ರಾಮಗಳಿಗೆ ಸೇರಿದ ದೇವಸ್ಥಾನವಾಗಿದ್ದು, ಸುಮಾರು 12 ಎಕರೆ ವಿಸ್ತೀರ್ಣ ಹೊಂದಿದೆ, ಇದೆ ವೇಳೆ ಪರಿಯಾಪಟ್ಟಣ ತಾಲೂಕು ವಡ್ಡರಹಳ್ಳಿ ಗ್ರಾಮಸ್ಥರು 2 ಲಕ್ಷ ರು, ಬಿಳಿಗೆರೆ ಹುಂಡಿ ನಂಜುಂಡೇಗೌಡ 50 ಸಾವಿರ ರು. ಗಳನ್ನು ದೇವಾಲಯ ಸಮಿತಿಗೆ ನೀಡಿದರು.

ಹೋಂಸ್ಟೇಗಳ ತೆರವಿಗೆ ಹೈಕೋರ್ಟ್‌ ತಡೆ

ಇದೇ ವೇಳೆ ಗ್ರಾಮದ ರೈತ ಮುಖಂಡ ಸಿದ್ದೇಗೌಡ ವೇದಿಕೆ ಮೇಲೆ ಬಂದು ಸಿದ್ದರಾಮಯ್ಯನವರು ಪ್ರಧಾನಿಯಾಗಲಿ, ದೇಶದ ಕಷ್ಟಆಲಿಸಲಿ ಎಂದು ಕೂಗಿ ಹೇಳಿದರು. ಗ್ರಾಪಂ ಅಧ್ಯಕ್ಷೆ ಭವಾನಿ, ಜಿಪಂ ಮಾಜಿ ಅಧ್ಯಕ್ಷ ಕೆ. ಮರೀಗೌಡ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ವಿಜಯ್‌ಕುಮಾರ್‌, ತಾಪಂ ಸದಸ್ಯ ಮುದ್ದುರಾಮೇಗೌಡ, ಮೈಸೂರು ಎಪಿಎಂಸಿ ಅಧ್ಯಕ್ಷ ಪ್ರಭುಸ್ವಾಮಿ, ಉಮೇಶ್‌, ರಾಜ್ಯ ಅಹಿಂದ ಉಪಾಧ್ಯಕ್ಷ ನಟರಾಜು, ಸ್ವಾಮಿ, ಬಸವರಾಜು, ದೊಡ್ಡೇಗೌಡ, ಎಪಿಎಂಸಿ ಸದಸ್ಯ ರವಿ, ಜೆ.ಜೆ. ಆನಂದ್‌, ನಾಡನಹಳ್ಳಿ ರವಿ, ಗಡಿ ಯಜಮಾನರಾದ ಶಿವಣ್ಣ, ಜವರೇಗೌಡ, ಉಮೇಶ್‌, ಮಹದೇವ, ರವಿ, ತಮ್ಮಡೇಗೌಡ, ಮರಿಗೌಡ, ಬೀರಪ್ಪ, ಶಿವಣ್ಣ, ಮಹದೇವು ಇದ್ದರು.