ಬ್ಯಾಡಗಿ: ಬ್ರೇಕ್‌ ಫೇಲಾಗಿ ಉರುಳಿ ಬಿದ್ದ ಸಾರಿಗೆ ಬಸ್‌

30ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ| ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಛತ್ರ ಗ್ರಾಮದ ಬಳಿ ನಡೆದ ಘಟನೆ| ಹಾವೇರಿಯಿಂದ ಬೆಂಗಳೂರ ಕಡೆಗೆ ತೆರಳುತ್ತಿದ್ದ ಬಸ್‌| ಗಾಯಾಳುಗಳನ್ನು ಬ್ಯಾಡಗಿ ಹಾಗೂ ರಾಣಿಬೆನ್ನೂರ ಆಸ್ಪತ್ರೆಗೆ ದಾಖಲು|

More than 30 Passengers Injured for NWKRTC Bus Overturn in Haveri grg

ಬ್ಯಾಡಗಿ(ಮಾ.18): ಸಾರಿಗೆ ಇಲಾಖೆಯ ಬಸ್‌ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರಣ ಮೂವತ್ತಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡ ಘಟನೆ ತಾಲೂಕಿನ ಛತ್ರ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧ​ವಾರ ನಡೆದಿದೆ.

ಹಾವೇರಿಯಿಂದ ಬೆಂಗಳೂರ ಕಡೆಗೆ ತೆರಳುತ್ತಿದ್ದ ಬಸ್‌ನಲ್ಲಿ 30ಕ್ಕೂ ಹೆಚ್ಚು ಪ್ರಯಾಣಿಕರಿದ್ದರು. ಚಾಲಕನ ನಿಯಂತ್ರಣ ತಪ್ಪಿ ಛತ್ರ ಗ್ರಾಮದ ಬಳಿ ಬಸ್‌ ಪಲ್ಟಿಯಾಗಿದ್ದು ಈ ಎಲ್ಲ ಪ್ರಯಾ​ಣಿ​ಕರು ಗಾಯ​ಗೊಂಡಿ​ದ್ದಾ​ರೆ. 

ಹಾವೇ​ರಿ​ಯಲ್ಲಿ ಜೋಡಿ ಕೊಲೆ: ಹಳೆ ದ್ವೇಷವೇ ಹತ್ಯೆಗೆ ಕಾರ​ಣ?

ಇಬ್ಬರು ಮಕ್ಕ​ಳಿಗೆ ಗಂಭೀ​ರ ಗಾಯ​ಗ​ಳಾ​ಗಿದ್ದು ಉಳಿ​ದ ಪ್ರಯಾ​ಣಿ​ಕ​ರಿಗೆ ಸಣ್ಣ​ಪುಟ್ಟಗಾಯ​ಗ​ಳಾ​ಗಿವೆ. ಬಸ್ಸಿನ ಬ್ರೇಕ್‌ ಫೇಲ್‌ ಆಗಿದ್ದೇ ಚಾಲಕನ ನಿಯಂತ್ರಣ ತಪ್ಪಲು ಕಾರಣವೆನ್ನಲಾತ್ತಿದೆ. ಉಳಿದಂತೆ ಸತ್ಯಾಸತ್ಯತೆ ತನಿಖೆಯಲ್ಲಿ ಬಹಿರಂಗವಾಗಬೇಕಿದೆ. ಗಾಯಾಳುಗಳನ್ನು ಬ್ಯಾಡಗಿ ಹಾಗೂ ರಾಣಿಬೆನ್ನೂರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
 

Latest Videos
Follow Us:
Download App:
  • android
  • ios