Asianet Suvarna News Asianet Suvarna News

Covid-19 Crisis: 29 ಸಾವಿರಕ್ಕೂ ಹೆಚ್ಚು ಕೇಸ್‌ ದೃಢ: ಸಕ್ರಿಯ ಕೇಸ್‌ 2.23 ಲಕ್ಷಕ್ಕೆ ಏರಿಕೆ

ರಾಜಧಾನಿಯಲ್ಲಿ ಶುಕ್ರವಾರವೂ ಕೂಡ 29 ಸಾವಿರಕ್ಕೂ ಹೆಚ್ಚು ಕೊರೋನಾ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 2.23 ಲಕ್ಷಕ್ಕೆ ಹೆಚ್ಚಳವಾಗಿದೆ. ಹೊಸದಾಗಿ 17,001 ಪುರುಷರು, 12,067 ಮಹಿಳೆಯರು ಸೇರಿದಂತೆ 29,068 ಜನರಲ್ಲಿ ಕೊರೋನಾ ದೃಢಪಟ್ಟಿದೆ.

More Than 29000 Covid Cases on jan 22th in Bengaluru gvd
Author
Bangalore, First Published Jan 22, 2022, 1:45 AM IST

ಬೆಂಗಳೂರು (ಜ.22): ರಾಜಧಾನಿಯಲ್ಲಿ ಶುಕ್ರವಾರವೂ ಕೂಡ 29 ಸಾವಿರಕ್ಕೂ ಹೆಚ್ಚು ಕೊರೋನಾ ಸೋಂಕು (Coronavirus) ಪ್ರಕರಣಗಳು ಪತ್ತೆಯಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 2.23 ಲಕ್ಷಕ್ಕೆ ಹೆಚ್ಚಳವಾಗಿದೆ. ಹೊಸದಾಗಿ 17,001 ಪುರುಷರು, 12,067 ಮಹಿಳೆಯರು ಸೇರಿದಂತೆ 29,068 ಜನರಲ್ಲಿ ಕೊರೋನಾ (Covid19) ದೃಢಪಟ್ಟಿದ್ದು, ಆರು ಮಂದಿ ಸೋಂಕಿನಿಂದ ಮೃತಪಟ್ಟಿರುವ ವರದಿಯಾಗಿದೆ. 

ಹೊಸ ಸೋಂಕಿತರ ಪತ್ತೆಯಿಂದ ನಗರದಲ್ಲಿ ಈವರೆಗಿನ ಸೋಂಕಿತರ ಸಂಖ್ಯೆ 15.42 ಲಕ್ಷಕ್ಕೆ ಏರಿಕೆಯಾಗಿದೆ. 7,196 ಮಂದಿ ಸೋಂಕಿತರು ಬಿಡುಗಡೆಯಾಗಿದ್ದು ಇದುವರೆಗೆ 13.02 ಲಕ್ಷ ಜನರು ಗುಣಮುಖರಾಗಿದ್ದಾರೆ. ಆರು ಮಂದಿ ಸಾವಿನಿಂದ ಈವರೆಗೆ ಸೋಂಕಿಗೆ ಬಲಿಯಾದವರ (Death) ಸಂಖ್ಯೆ 16,484ಕ್ಕೆ ಹೆಚ್ಚಳವಾಗಿದೆ.

ಪಾಲಿಕೆ ವ್ಯಾಪ್ತಿಯ ಬೆಳ್ಳಂದೂರು, ಬೇಗೂರು ಸೇರಿದಂತೆ 10 ವಲಯಗಳಲ್ಲಿ ಕಳೆದ ಏಳು ದಿನಗಳಲ್ಲಿ ಸೋಂಕಿತರಾಗುತ್ತಿರುವವ ಸಂಖ್ಯೆ 250ರ ಗಡಿ ದಾಟಿದೆ. ಬೆಳ್ಳಂದೂರು 561, ಬೇಗೂರು 346, ಎಚ್‌ಎಸ್‌ಆರ್‌ ಲೇಔಟ್‌ 331, ಹೊರಮಾವು 321, ದೊಡ್ಡನೆಕ್ಕುಂದಿ 314, ನ್ಯೂತಿಪ್ಪಸಂದ್ರ 311, ಕೋರಮಂಗಲ 280, ವರ್ತೂರು 272, ರಾಜರಾಜೇಶ್ವರಿ ನಗರ 267 ಮತ್ತು ಹೆಮ್ಮಿಗೆಪುರ 260 ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ.

Covid-19 Crisis: ರಾಜ್ಯದಲ್ಲಿ ಕೊರೋನಾ ಮಹಾಸ್ಫೋಟ, 41457 ಕೇಸ್‌

379ಕ್ಕೆ ಇಳಿಕೆ: ಬಿಬಿಎಂಪಿಯ (BBMP) ಎಂಟು ವಲಯಗಳಲ್ಲಿ ಮೈಕ್ರೋ ಕಂಟೈನ್ಮೆಂಟ್‌ಗಳ ಸಂಖ್ಯೆ 379ಕ್ಕೆ ಇಳಿಕೆಯಾಗಿದೆ. ಮಹದೇವಪುರ 118, ಬೊಮ್ಮನಹಳ್ಳಿ 92, ಯಲಹಂಕ 63, ಪೂರ್ವ 51, ಪಶ್ಚಿಮ 27,ದಕ್ಷಿಣ 20, ರಾಜರಾಜೇಶ್ವರಿ ನಗರ 7, ದಾಸರಹಳ್ಳಿ 1 ಕಂಟೈನ್ಮೆಂಟ್‌ಗಳನ್ನು ಗುರುತಿಸಲಾಗಿದೆ ಎಂದು ಪಾಲಿಕೆ ವರದಿ ಮಾಹಿತಿ ನೀಡಿದೆ.

ಲಸಿಕೆ ಅಭಿಯಾನ: ರಾಜ್ಯದಲ್ಲಿ  2.16 ಲಕ್ಷ ಮಂದಿ ಕೋವಿಡ್‌ ಲಸಿಕೆ (Covid19 Vaccine) ಪಡೆದುಕೊಂಡಿದ್ದಾರೆ. 86,459 ಮಂದಿ ಮೊದಲ ಮತ್ತು 99,759 ಮಂದಿ ಎರಡನೇ ಹಾಗೂ 30,598 ಮಂದಿ ಮುನ್ನೆಚ್ಚರಿಕಾ ಡೋಸ್‌ ಸ್ವೀಕರಿಸಿದ್ದಾರೆ. ರಾಜ್ಯದಲ್ಲಿ ಈವರೆಗೆ ಒಟ್ಟು 9.16 ಕೋಟಿ ಡೋಸ್‌ ಲಸಿಕೆ ನೀಡಲಾಗಿದೆ. 5.06 ಕೋಟಿ ಮೊದಲ, 4.07 ಕೋಟಿ ಎರಡನೇ ಮತ್ತು 2.93 ಲಕ್ಷ ಮುನ್ನೆಚ್ಚರಿಕಾ ಡೋಸ್‌ ನೀಡಲಾಗಿದೆ.

Covid-19 Crisis: ಮನೆ ಚಿಕಿತ್ಸೆಗೆ ಸರ್ಕಾರದಿಂದಲೇ ಔಷಧಿ ಕಿಟ್‌ ಪೂರೈಕೆ

ರಾಜ್ಯದಲ್ಲಿ ಡಿಸೆಂಬರ್‌ 25ಕ್ಕೆ ಶೇ.0.27 ಇದ್ದ ಪಾಸಿಟಿವಿಟಿ ದರ ನಿರಂತರವಾಗಿ ಏರುತ್ತಲೇ ಸಾಗಿ ಶೇ.20ರ ಸಮೀಪಕ್ಕೆ ಬಂದಿತ್ತು. ಇದೀಗ ಮೊದಲ ಬಾರಿಗೆ ಪಾಸಿಟಿವಿಟಿ ದರ ಕುಸಿತ ಕಂಡಿದೆ. ಸಾಮಾನ್ಯವಾಗಿ ವಾರದ ಉಳಿದ ದಿನಗಳಿಗೆ ಹೋಲಿಸಿದರೆ ಕೋವಿಡ್‌ ಪರೀಕ್ಷೆಯ ಪ್ರಮಾಣ ಕಡಿಮೆ ನಡೆಯುವ ಹಿನ್ನೆಲೆಯಲ್ಲಿ ಹೊಸ ಪ್ರಕರಣಗಳ ಸಂಖ್ಯೆ ಕಡಿಮೆ ಆಗುವುದು ವಾಡಿಕೆ. ಆದರೆ 2.17 ಲಕ್ಷ ಪರೀಕ್ಷೆ ನಡೆದಿದ್ದರೂ ಪಾಸಿಟಿವಿಟಿ ದರ ಮತ್ತು ಸೋಂಕಿತರ ಸಂಖ್ಯೆ ಕಡಿಮೆ ಆಗಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.

Follow Us:
Download App:
  • android
  • ios