ಹಾಸನ [ಮಾ.18]: ಕೊರೋನಾ ಶಂಕಿತ ರೋಗಿಯ ಮಾಹಿತಿ ಹಾಗೂ ಇತರೆ ಅವಶ್ಯಕ ಸ್ಯಾಂಪಲ್ ಗಳನ್ನು ತೆಗೆದುಕೊಳ್ಳವಾಗ ಎಚ್ಚರ ವಹಿಸಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆಯ ಸಲಹೆಗಾರ ಡಾ.ಸತೀಶ್ ಚಂದ್ರ ತಿಳಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಬಿ.ಸಿ ರಾಯ್ ಸಭಾಂಗಣದಲ್ಲಿ ಜಿಲ್ಲಾ ವೈದ್ಯಾಧಿಕಾರಿಗಳಿಗೆ ಕೋವಿಡ್- 19 ಕುರಿತಾಗಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಾಗಾರ ದಲ್ಲಿ ಅವರು ಮಾತನಾಡಿದರು. ಸೋಂಕಿತ ವ್ಯಕ್ತಿಯ ತಪಾಸಣೆ ನಡೆಸುವ ಆರೋಗ್ಯ ಸಿಬ್ಬಂದಿಗೂ ತೊಂದರೆ ಇರುವ ಹಿನ್ನೆ ಲೆಯಲ್ಲಿ ಈ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ವೈದ್ಯರು ಹಾಗೂ ಸಿಬ್ಬಂದಿ ತಪಾಸಣೆ ವೇಳೆ ಎಚ್ಚರ ವಹಿಸಿ ಎಂದರು.

ಕೊರೋನಾ ಸೋಂಕು ಎಚ್‌1 ಎನ್‌1 ಹಾ ಗೂ ಇತರೆ ಸೋಂಕುಗಳಂತೆ ಸೋಂಕಿತ ವ್ಯಕ್ತಿಯು ಕೆಮ್ಮಿದಾಗ, ಸೀನಿದಾಗ, ಆ ವ್ಯಕ್ತಿಯ ಆಸುಪಾಸಿನಲ್ಲಿರುವವರಿಗೆ ಅಂಟುವ ಸಾಧ್ಯತೆ ಹೆಚ್ಚು. ಈ ಸೋಂಕು ಸರಂಧ್ರ ವಾತಾವರಣ ದಲ್ಲಿ (ಬಟ್ಟೆ ಹಾಗೂ ಬಟ್ಟೆಯನ್ನು ಹೋಲುವ ಇತರೆ ವಸ್ತುಗಳು) 8ರಿಂದ 12 ಗಂಟೆಗಳವರೆಗೆ ಹಾಗೂ ಸರಂಧ್ರವಲ್ಲದ ವಾತಾವರಣದಲ್ಲಿ (ಟೈಲ್ಸ್, ಗ್ರಾನೈಟ್ಸ್, ಲೋಹ ಹಾಗೂ ಇತರೆ ಘನ ವಸ್ತುಗಳ ಮೇಲೆ) 1 ರಿಂದ 2 ದಿನಗಳ ಕಾಲ ಜೀವಂತವಾಗಿರುತ್ತದೆ ಎಂದರು. 

ತೀವ್ರ ಸ್ವರೂಪದ ಲಾಕ್‌ಡೌನ್‌ಗೆ ಸರ್ಕಾರ ಚಿಂತನೆ..!...

ದಿನದಿಂದ ದಿನಕ್ಕೆ ಸೋಂಕಿನ ವ್ಯಾಪಕತೆ ಹೆಚ್ಚುತ್ತಿರುವುದರಿಂದ ಸೋಂಕಿತರನ್ನು ಗುರುತಿ ಸುವುದು ಕಷ್ಟ, ಆದರೂ ಕೂಡ ಸೋಂಕಿತ ವ್ಯಕ್ತಿಯು ಪತ್ತೆಯಾದ ೨೮ ದಿನಗಳಲ್ಲಿ ಆತನ ಕುಟುಂಬ, ಪ್ರಯಾಣ ಮಾಡಿದ ಟ್ಯಾಕ್ಸಿ ಅಥವಾ ಸಾರ್ವಜನಿಕ ವಾಹನಗಳಲ್ಲಿ ಆ ವ್ಯಕ್ತಿಯೊಂದಿಗೆ ಪ್ರಯಾಣ ಮಾಡಿದ ಇತರೆ ಪ್ರಯಾಣಿಕರ ಸಂಪೂರ್ಣ ವರದಿ ಕಲೆ ಹಾಕಿ ಅವರೆಲ್ಲರನ್ನೂ ಚಿಕಿತ್ಸೆಗೆ ಒಳಪಡಿಸಲಾಗುತ್ತಿದೆ. ಒಟ್ಟಾರೆ ಸೋಂಕು ಹರಡದಂತೆ ವಿಶ್ವದಾದ್ಯಂತ ಕಟ್ಟೆಚ್ಚರ ವಹಿಸಲಾಗುತ್ತಿದೆ ಎಂದರು.

ಸೂಕ್ಷ್ಮ ಜೀವಶಾಸ್ತ್ರಜ್ಞ ಡಾ.ಶ್ರೀಧರ್ ಮಾತನಾಡಿ, ಸೋಂಕಿತ ವ್ಯಕ್ತಿಗೆ ಜ್ವರ, ಕೆಮ್ಮು, ಶೀತ ಹಾಗೂ ಉಸಿರಾಟದ ತೊಂದರೆಯಂತಹ ಲಕ್ಷಣಗಳು ಕಂಡುಬರುತ್ತವೆ. ಹಾಗಾಗಿ ಶಂಕಿತ ವ್ಯಕ್ತಿಯನ್ನು ಪರೀಕ್ಷೆಗೆ ಒಳಪಡಿಸುವ ಮುನ್ನ ಆತನಿಗಿರುವ ರೋಗ ಲಕ್ಷಣಗಳು ಹಾಗೂ ಸೋಂಕು ಇರುವ ಯಾವುದೇ ಪ್ರದೇಶಗಳಿಗೆ ಪ್ರವಾಸ ಮಾಡಿರುವನೇ ಅಥವಾ ವಿದೇಶಿಗನೇ ಎಂದು ಪರಿಶೀಲಿಸಿ ನಂತರ ಆ ವ್ಯಕ್ತಿಯ ರಕ್ತ ಹಾಗೂ ಅಗತ್ಯ ವರದಿ ಪಡೆದುಕೊಂಡು ಯಾವುದೇ ರೀತಿಯಲ್ಲಿಯೂ ಹೊರಗಿನ ವಾತಾವರಣದ ಸಂಪರ್ಕಕ್ಕೆ ಬಾರದಂತೆ ತಪಾಸಣೆಗೆ ಕಳುಹಿಸಲು ಕ್ರಮ ಕೈಗೊಳ್ಳಬೇಕು ಎಂದರು.