Youth Congress President: ಡಿಕೆಶಿ-ಸಿದ್ದು ಸಮ್ಮುಖದಲ್ಲಿ ಕಳಂಕಿತ ನಲಪಾಡ್‌ ಪದಗ್ರಹಣ

ರಾಜ್ಯ ಯುವ ಕಾಂಗ್ರೆಸ್‌ ನೂತನ ಅಧ್ಯಕ್ಷರಾಗಿ ಕಳಂಕಿತ ಮೊಹಮ್ಮದ್‌ ಹ್ಯಾರಿಸ್‌ ನಲಪಾಡ್‌ ಅವರು ಗುರುವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸಮ್ಮುಖದಲ್ಲಿ ಅಧಿಕೃತವಾಗಿ ಅಧಿಕಾರ ಸ್ವೀಕಾರ ಮಾಡಿದ್ದಾರೆ.

Mohammed Haris Nalapad Took Charge as Karnataka Youth Congress Chief President gvd

ಬೆಂಗಳೂರು (ಫೆ.11): ರಾಜ್ಯ ಯುವ ಕಾಂಗ್ರೆಸ್‌ ನೂತನ ಅಧ್ಯಕ್ಷರಾಗಿ (Youth Congress President) ಕಳಂಕಿತ ಮೊಹಮ್ಮದ್‌ ಹ್ಯಾರಿಸ್‌ ನಲಪಾಡ್‌ (Mohammed Haris Nalapad) ಅವರು ಗುರುವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ (DK Shivakumar) ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಸಮ್ಮುಖದಲ್ಲಿ ಅಧಿಕೃತವಾಗಿ ಅಧಿಕಾರ ಸ್ವೀಕಾರ ಮಾಡಿದ್ದಾರೆ. ರಕ್ಷಾ ರಾಮಯ್ಯ ಅವರ ಅವಧಿ ಜ.30ರಂದು ಪೂರ್ಣಗೊಂಡಿದ್ದ ಹಿನ್ನೆಲೆಯಲ್ಲಿ ಜ.31ರಿಂದ ನೂತನ ಅಧ್ಯಕ್ಷರಾಗಿ ನೇಮಕಗೊಂಡಿದ್ದ ಅವರು ಗುರುವಾರ ಕೆಪಿಸಿಸಿ ಕಚೇರಿ ಬಳಿ ನಡೆದ ಸಮಾರಂಭದಲ್ಲಿ ಅಧಿಕಾರ ಸ್ವೀಕರಿಸಿದರು.

ಮೋದಿ ವಿರುದ್ಧ ಸಿದ್ದು ಕಿಡಿ: ಸಿದ್ದರಾಮಯ್ಯ ಮಾತನಾಡಿ, ಸ್ವಾತಂತ್ರ್ಯ ಬಂದ ಮೇಲೆ ಪ್ರಧಾನಮಂತ್ರಿ ನರೇಂದ್ರ ಮೋದಿ ಹುಟ್ಟಿದ್ದು. ನೆಹರೂ 9 ವರ್ಷ ಜೈಲು ವಾಸ ಅನುಭವಿಸಿದ್ದರು. ಅಂತಹವರ ವಿರುದ್ಧ ಇವರು ಲಘುವಾಗಿ ಮಾತನಾಡುತ್ತಾರೆ. ಇವರ ಆಡಳಿತದಲ್ಲಿ 16 ಸಾವಿರ ಮಂದಿ ನಿರುದ್ಯೋಗದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಯುವಕರು ತೀವ್ರ ಸಮಸ್ಯೆ ಎದುರಿಸುವಂತಾಗಿದೆ. ಈ ಬಗ್ಗೆ ಯುವ ಕಾಂಗ್ರೆಸ್‌ ಹೋರಾಟ ಮಾಡಬೇಕು ಎಂದರು.

Mohammed Nalapad ತಮ್ಮ ಮೇಲೆ ಬಂದಿರುವ ಗಂಭೀರ ಆರೋಪಕ್ಕೆ ನಲಪಾಡ್ ಸ್ಪಷ್ಟನೆ

ನನ್ನ ತಪ್ಪುಗಳನ್ನು ಕ್ಷಮಿಸಿ- ನಲಪಾಡ್‌: ಮೊಹಮ್ಮದ್‌ ನಲಪಾಡ್‌ ಮಾತನಾಡಿ, ಇಲ್ಲಿಯವರೆಗೆ ನಾನು ತಪ್ಪು ಮಾಡಿದ್ದೇನೆ, ತಿದ್ದಿಕೊಂಡು ನಡೆದಿದ್ದೇನೆ. ಈವರೆಗೆ ಏನೇ ತಪ್ಪು ಮಾಡಿದ್ದರೂ ಕ್ಷಮಿಸಿಬಿಡಿ. ಇನ್ನು ಮುಂದೆ ನೀವೆಲ್ಲಾ ನನ್ನ ಕೈ ಹಿಡಿದು ಮುನ್ನಡೆಸಿ. ಬಿಜೆಪಿಯನ್ನು ಸೋಲಿಸಿ ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ತರುವವರೆಗೆ ನಮಗೆ ವಿಶ್ರಾಂತಿ ಇಲ್ಲ ಎಂದರು.

ಗುಂಪುಗಾರಿಕೆ ನಿಷಿದ್ಧ:ರಾಜ್ಯದಲ್ಲಿನ ಸಮಸ್ಯೆಗಳ ಬಗ್ಗೆ ಯುವ ಕಾಂಗ್ರೆಸ್‌ ಹೋರಾಟ ಮಾಡಬೇಕು. ಯುವ ಕಾಂಗ್ರೆಸ್‌ನಲ್ಲಿ ಯಾವು ಗುಂಪೂ ಇರಬಾರದು. ಪರಸ್ಪರ ಚಾಡಿ ಹೇಳುವುದು ಮಾಡಬಾರದು. ಒಂದು ವೇಳೆ ಗುಂಪುಗಳು ಸೃಷ್ಟಿಯಾದರೆ ಅಂತಹವರನ್ನು ಸಂಘಟನೆಯಿಂದ ಪಕ್ಕಕ್ಕೆ ಇಡಲಾಗುವುದು.
- ಡಿ.ಕೆ. ಶಿವಕುಮಾರ್‌, ಕೆಪಿಸಿಸಿ ಅಧ್ಯಕ್ಷ

ದೇಶ ಒಡೆಯುತ್ತಿದ್ದಾರೆ: ಬಿಜೆಪಿಯು ಶೋಷಿತರ ಮೇಲೆ ಬಿಜೆಪಿ ದಬ್ಬಾಳಿಕೆ ಮಾಡುತ್ತಿದೆ. ದೇಶ ಒಡೆಯುವ ಕೆಲಸ ಚಡ್ಡಿ ಹಾಕಿಕೊಂಡ ಸಂಘಪರಿವಾರ ಮಾಡುತ್ತಿದೆ. ಧರ್ಮಾಧಾರಿತವಾಗಿ ದೇಶವನ್ನು ಒಡೆದು ನರೇಂದ್ರ ಮೋದಿ ಪ್ರಧಾನಿಯಾಗಿದ್ದಾರೆ. ಇದೀಗ ಭಾವನಾತ್ಮಕ ವಿಷಯಗಳನ್ನು ಮುಂದಿಟ್ಟುಕೊಂಡು ಮತ್ತೆ ಮತ್ತೆ ದೇಶ ಒಡೆಯಲು ಯತ್ನಿಸುತ್ತಿದ್ದಾರೆ.
- ಬಿ.ವಿ.ಶ್ರೀನಿವಾಸ್‌, ಯುವ ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ

ನಲಪಾಡ್‌ರಿಂದ ಹಿಂದೂ ಸಂಪ್ರದಾಯದಂತೆ ಹೋಮ-ಹವನ: ರಾಜ್ಯ ಯುವ ಕಾಂಗ್ರೆಸ್‌ ಅಧ್ಯಕ್ಷರಾಗಿ ರಕ್ಷಾ ರಾಮಯ್ಯ ಅವಧಿ ಮುಕ್ತಾಯವಾದ ಹಿನ್ನೆಲೆಯಲ್ಲಿ ಸೋಮವಾರ ನೂತನ ಅಧ್ಯಕ್ಷ ಮೊಹಮ್ಮದ್‌ ನಲಪಾಡ್‌ ಅವರು ಯುವ ಕಾಂಗ್ರೆಸ್‌ ಅಧ್ಯಕ್ಷರ ಕಚೇರಿ ಪೂಜೆ ನೆರವೇರಿಸಿದ್ದು, ಫೆ.10 ರಂದು ಅಧಿಕೃತವಾಗಿ ಅಧಿಕಾರ ವಹಿಸಿಕೊಳ್ಳುವುದಾಗಿ ಹೇಳಿದ್ದಾರೆ. ಇಂದಿನಿಂದ ರಾಜ್ಯ ಯುವ ಕಾಂಗ್ರೆಸ್‌ಗೆ ಹಾಗೂ ರಕ್ಷಾ ರಾಮಯ್ಯ ಅವರಿಗೂ ನಾನೇ ಅಧ್ಯಕ್ಷ. ನಾನು ಈ ಹಿಂದೆ ತಪ್ಪು ಮಾಡಿರುವುದು ನಿಜ. ಇನ್ನು ಮುಂದೆ ಹಾಗೆ ಆಗುವುದಿಲ್ಲ. ಮಾತು ಕಡಿಮೆ ಮಾಡಿ ಕೆಲಸ ಜಾಸ್ತಿ ಮಾಡುತ್ತೇನೆ ಎಂದು ಹೇಳಿದ ಮೊಹಮ್ಮದ್‌ ನಲಪಾಡ್‌. 

Congress Politics: ಬಳ್ಳಾರಿ ಯುವ ಕಾಂಗ್ರೆಸ್‌ ಅಧ್ಯಕ್ಷಗೆ ನಲಪಾಡ್‌ ಥಳಿತ

ಮಂಗಳವಾರ ಅಮಾವಾಸ್ಯೆ ಇದೆ. ಹಾಗಾಗಿ ಇಂದೇ ಕಚೇರಿ ಪೂಜೆ ನೆರವೇರಿಸಿದ್ದೇನೆ. ಫೆ.10 ರಂದು ಅಧಿಕಾರ ಹಸ್ತಾಂತರವಿದ್ದು, ಕೆಪಿಸಿಸಿ ಕಚೇರಿಯಲ್ಲೇ ಕಾರ್ಯಕ್ರಮ ನಡೆಯಲಿದೆ. ಯುವ ಕಾಂಗ್ರೆಸ್‌ ರಾಜ್ಯಾಧ್ಯಕ್ಷ ಜವಾಬ್ದಾರಿ ನನಗೆ ವಹಿಸಿದ್ದಾರೆ. ಈ ಸ್ಥಾನಕ್ಕಾಗಿ ನಾನು ಒಂದು ವರ್ಷ ಕಾಯಬೇಕಾಯಿತು. ನಮ್ಮಲ್ಲಿ ರಕ್ಷಾ ರಾಮಯ್ಯ, ನಲಪಾಡ್‌ ಎಂಬ ಗುಂಪುಗಾರಿಕೆ ಇಲ್ಲ. ರಕ್ಷಾ ರಾಮಯ್ಯ ಅವರಿಗೂ ನಾನೇ ಅಧ್ಯಕ್ಷ. ಹಿಂದೆ ಒಂದು ವರ್ಷ ನನಗೆ ರಕ್ಷಾ ರಾಮಯ್ಯ ಅಧ್ಯಕ್ಷರಾಗಿದ್ದರು. 

ಇದರಲ್ಲಿ ಭಿನ್ನಾಭಿಪ್ರಾಯದ ಪ್ರಶ್ನೆಯೇ ಬರುವುದಿಲ್ಲ ಎಂದು ಹೇಳಿದ ನಲಪಾಡ್‌. ಮೊಹಮ್ಮದ್‌ ನಲಪಾಡ್‌ ಅವರು ಕಾಂಗ್ರೆಸ್‌ಭವನದಲ್ಲಿನ ತಮ್ಮ ಕಚೇರಿಯಲ್ಲಿ ಪೂಜೆ ಸಲ್ಲಿಸಿದರು. ಬಳಿಕ ಸ್ವತಃ ಹೋಮ ಕುಂಡದ ಮುಂದೆ ಕುಳಿತು ಹಿಂದೂ ಸಂಪ್ರದಾಯದಂತೆ (Hindu Tradition) ಹೋಮ-ಹವನ ನಡೆಸಿದರು. ಬಳಿಕ ಮುಸ್ಲಿಂ (Mulsim) ಧಾರ್ಮಿಕ ಮುಖಂಡರು, ತಂದೆ ಎನ್‌.ಎ. ಹ್ಯಾರಿಸ್‌ ಜತೆಗೂಡಿ ಮುಸ್ಲಿಂ ಸಂಪ್ರದಾಯದಂತೆ ಪ್ರಾರ್ಥನೆಯನ್ನೂ ಸಲ್ಲಿಸಿದರು.

Latest Videos
Follow Us:
Download App:
  • android
  • ios