ಶಿವಮೊಗ್ಗ(ಸೆ.11): ನಾವೀಗ ಬದ​ಲಾ​ವ​ಣೆಯ ಕಾಲ ​ಘ​ಟ್ಟ​ದ​ಲ್ಲಿ​ದ್ದೇವೆ. ಕಾಂಗ್ರೆಸ್‌ ತಳ​ಮ​ಟ್ಟ​ದಿಂದ ಕಟ್ಟ​ಬೇಕು. ಪ್ರಧಾನಿ ಮೋದಿ ಎಲ್ಲ​ರಿಗೂ ಚಳ್ಳೆಹಣ್ಣು ತಿನ್ನಿ​ಸು​ತ್ತಿ​ದ್ದಾ​ರೆ. ಸಬ್‌ಕೆ ಸಾತ್‌ ಅಂದ್ರೆ ಆರ್‌​ಎ​ಸ್‌​ಎ​ಸ್‌ ​ಜೊತೆ ಮಾತ್ರ ಎನ್ನು​ವಂತಾ​ಗಿದೆ ಎಂದು ಕಾಂ​ಗ್ರೆಸ್‌ ಮುಖಂಡ, ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಹೇಳಿ​ದರು.

ತೀರ್ಥ​ಹ​ಳ್ಳಿಯಲ್ಲಿ ಕಾಂಗ್ರೆಸ್‌ ಹಮ್ಮಿ​ಕೊಂಡಿದ್ದ ಗ್ರಾಪಂ ಮತ್ತು ಪಪಂ ಚುನಾ​ವಣಾ ಪೂರ್ವ ಸಿ​ದ್ಧತೆಯ ಬಗ್ಗೆ ಹಮ್ಮಿ​ಕೊಂಡಿದ್ದ ಕಾರ್ಯ​ಕ​ರ್ತರ ಸಭೆ​ಯಲ್ಲಿ ಮಾತ​ನಾ​ಡಿ, ಮೋದಿ ಅ​ವ​ರದ್ದು ಬುರುಡೆ ಮಾತು. ಹಿಂದೆ ಪ್ರಧಾನಿ ಮನ​ಮೋ​ಹನ್‌ ಸಿಂಗ್‌ ಅವ​ಧಿ​ಯಲ್ಲಿ ಜನ​ರಿಗೆ ದುಡಿ​ಯುವ ಹಕ್ಕು ಕೊಟ್ಟಿದ್ದೇ ಕಾಂಗ್ರೆಸ್‌ ಪಕ್ಷ. ಆದರೆ ಉದ್ಯೋಗ ಖಾತ್ರಿ ಯೋಜ​ನೆ​ಯಲ್ಲಿ ಕೆಲಸ ಮಾಡಿದ ಬಡ​ವ​ರಿಗೆ ಕಳೆದ ಎರ​ಡು ​ವ​ರ್ಷ​ಗ​ಳಿಂದ ದುಡ್ಡೇ ಬಂದಿಲ್ಲ ಎಂದು ಹೇಳಿ​ದರು.

ಶಿವಮೊಗ್ಗ: ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆಗೆ ಯುವಕ ಯತ್ನ..ವೈರಲ್ ವಿಡಿಯೋ

ರಾಜ​ಕೀಯ ಎನ್ನು​ವುದು ಜನರ ಸಮಾ​ಜಿಕ ಸೇವೆಯ ಹೋರಾ​ಟದ ಕ್ಷೇತ್ರ. ಕೇವಲ ಚುನಾ​ವ​ಣೆಗೆ ಮಾತ್ರ ಸೀಮಿ​ತ​ವಲ್ಲ. ಕಾಂಗ್ರೆ​ಸ್‌ ಕಾರ್ಯ​ಕ​ರ್ತ​ರಿಗೆ ಪಕ್ಷದ ತತ್ವ ಸಿದ್ಧಾಂತ ತಿಳಿ​ಸುವ ಅಗ​ತ್ಯ​ವಿದೆ. ಪ್ರತಿ ಪಂಚಾ​ಯಿತಿಯಲ್ಲೂ ಕಾರ್ಯ​ಕ​ರ್ತರ ಪಡೆ ಬೇಕು ಎಂದರು.

ಮಾಜಿ ಸಚಿವ ಕಿಮ್ಮನೆ ರತ್ನಾ​ಕರ್‌ ಮಾತ​ನಾಡಿ, ಸಿದ್ಧಾಂತದ ಮೇಲೆ ನಂಬಿಕೆ ಇಟ್ಟಚುನಾ​ವಣೆ ಇದಲ್ಲ. ಸಂಘ​ಟ​ನೆಯ ದೃಷ್ಟಿಇಲ್ಲಿದೆ. ಕ್ಷೇತ್ರದ ಎಲ್ಲ ಗ್ರಾ​ಪಂಗೂ ಭೇಟಿ ನೀಡಿ ಕಾರ್ಯ​ಕ​ರ್ತ​ರಿಗೆ ಮನ​ವ​ರಿಕೆ ಮಾಡಿ​ಕೊ​ಡ​ಲಾ​ಗು​ವುದು. ಅ.30ರೊಳಗೆ ಪ್ರತಿ ಗ್ರಾ​ಪಂನಲ್ಲೂ ಸಭೆ ನೆಡೆ​ಸ​ಲಿ​ದ್ದೇವೆ. ಬಿಜೆ​ಪಿ​ಯನ್ನು ತಡೆ​ಯಲು ಹೋರಾಟ ಮಾಡ​ಬೇ​ಕಾ​ಗು​ತ್ತದೆ. ಜನರ ಧಾರ್ಮಿಕ ಭಾವನೆ ಕೆರ​ಳಿಸುವ ಕೆಲಸ ಬಿಜೆಪಿ ಮಾಡು​ತ್ತಿದೆ ಎಂದರು.

ಹಿಂದು ಮಹಾಸಭಾ ಗಣಪತಿ ಭವ್ಯ ಮೆರವಣಿಗೆ

ಈ ಸಂದ​ರ್ಭ​ದಲ್ಲಿ ನೂತ​ನ​ವಾಗಿ ಜಾರಿಗೆ ತಂದಿ​ರುವ ಸಂಚಾರ ನಿಯಂತ್ರಣ ನಿಯ​ಮ​ಗ​ಳಿಂದ ಜನ​ಸಾ​ಮಾ​ನ್ಯ​ರಿಗೆ ಆಗು​ತ್ತಿ​ರುವ ತೊಂದ​ರೆ​ಗ​ಳಿಗೆ ಪರಿ​ಹಾರ ಒದ​ಗಿ​ಸು​ವಂತೆ ರಾಜ್ಯ ಸರ್ಕಾ​ರ​ವನ್ನು ಕೋರಿ ನಿರ್ಣ​ಯ​ವನ್ನು ಅಂಗೀ​ಕ​ರಿ​ಸ​ಲಾ​ಯಿತು. ಜನ​ಸಾ​ಮಾ​ನ್ಯರ ಬದು​ಕನ್ನೇ ಈ ತಿದ್ದು​ಪಡಿ ಕಾಯಿದೆ ದುರ್ಬ​ಲ​ಗೊ​ಳಿ​ಸಿದೆ. ನಿರ್ಣ​ಯ​ದಲ್ಲಿ ನಿಯ​ಮಾ​ವ​ಳಿಗೆ ತಿದ್ದು​ಪಡಿ ತಂದು ಜನ​ತೆಗೆ ಕಾನೂ​ನಿನ ಅರಿವು ಮೂಡಿಸಿ, ಎರಡು ವರ್ಷ​ಗಳ ವರೆಗೆ ದಂಡ ಶುಲ್ಕ​ದಲ್ಲಿ ಅರ್ಧ​ದಷ್ಟುವಿನಾ​ಯಿತಿ ನೀಡಬೇಕು ಎಂದು ಒತ್ತಾಯಿಸಿದರು.

ಶಿಕಾರಿಪುರಕ್ಕೆ ನೂತನ ಬಸ್‌ ಡಿಪೋ ಮಂಜೂರು