ಒಂದು ಜನಾಂಗ ವಿರೋಧಿಯಾಗಿ ಪೌರತ್ವ ಮಸೂದೆ ಜಾರಿ : CM ಲಿಂಗಪ್ಪ
ದೇಶದಲ್ಲಿ ಜಾರಿಯಾಗಿರುವ ಪೌರತ್ವ ಕಾಯ್ದೆ ವಿರುದ್ಧ ತೀವ್ರ ಪ್ರತಿಭಟನೆ ನಡೆದಿದ್ದು, ಇದೀಗ ಕಾಯ್ದೆ ವಿರುದ್ಧ ಕೈ ನಾಯಕರೋರ್ವರು ಹರಿಹಾಯ್ದಿದ್ದಾರೆ.
ರಾಮನಗರ (ಡಿ.22): ದೇಶದಲ್ಲಿ ಪೌರತ್ವ ಕಾಯ್ದೆ ವಿರುದ್ಧ ದೇಶದಾದ್ಯಂತ ಪ್ರತಿಭಟನೆ ನಡೆಯುತ್ತಿದ್ದು, ಇದು ಒಂದು ಧರ್ಮದ ಜನರ ವಿರುದ್ಧವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪ ಹೇಳಿದ್ದಾರೆ.
ರಾಮನಗರದಲ್ಲಿ ಮಾತನಾಡಿದ ಸಿ.ಎಂ.ಲಿಂಗಪ್ಪ ಸಂವಿಧಾನದ ಕಲಂ 14ರ ಕಾಯಿದೆಗೆ ಸ್ಪಷ್ಟ ವಿರೋಧವಾಗಿದ್ದು, ಮೂಲಭೂತ ಹಕ್ಕುಗಳ ವಿರೋಧಿಯಾಗಿ ಪೌರತ್ವ ಕಾಯ್ದೆ ಜಾರಿಯಾಗಿದೆ ಎಂದರು.
ಹಿಂದೂ ರಾಷ್ಟ್ರ ಮಾಡಬೇಕು ಎಂಬ ಅಜೆಂಡಾ ಬಿಜೆಪಿಯವರದ್ದಾಗಿದ್ದು, ಇದು ಬಿಜೆಪಿ ಗುಪ್ತ ಪ್ರಣಾಳಿಕೆಯಾಗಿದೆ. ಈ ಪ್ರಣಾಳಿಕೆಯಲ್ಲಿ ಮುಸ್ಲಿಂ ಜನಾಂಗವನ್ನು ಏಕೆ ಹೊರಗಿಡಲಾಗಿದೆ ಎಂದು ಪ್ರಶ್ನೆ ಮಾಡಿದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಯಾವುದೇ ಜನಾಂಗಕ್ಕೂ ತಾರತಮ್ಯ ಮಾಡಬಾರದು. ಸಂವಿಧಾನ ವಿರೋಧಿಯಾದ ಈ ಮಸೂದೆಯನ್ನು ಒಂದು ಜನಾಂಗದವರ ಬಗ್ಗೆ ದ್ವೇಷ ಮನಸ್ಸಿನಲ್ಲಿ ಇಟ್ಟುಕೊಂಡು ಕಾಯ್ದೆ ಜಾರಿ ಮಾಡಲಾಗಿದೆ ಎಂದರು.
ಪ್ರಧಾನಿ ನರೇಂದ್ರ ಹುಚ್ಚು ದರ್ಬಾರ್ ಮಾಡಲು ಮುಂದಾಗಿದ್ದಾರೆ. ಈ ಕಾಯ್ದೆ ವಿರೋಧಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಲಿಂಗಪ್ಪ ಹೇಳಿದರು.