Asianet Suvarna News Asianet Suvarna News

ಸಾವಿನ ಕೈಗೆ ಬುದ್ಧಿ ಕೊಡದೆ ಧೈರ್ಯವಾಗಿ ಎದುರಿಸಿ

ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡ ರೈತ ಮಹಿಳೆ ಮನೆಗೆ ಭೇಟಿ ನೀಡಿ ಅವರ ಕುಟುಂಬವರ್ಗಕ್ಕೆ ಧೈರ್ಯ ತುಂಬಿದರಲ್ಲದೇ ಇತ್ತೀಚೆಗಷ್ಟೇ ಕಾಂಗ್ರೆಸ್-ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರ ರೈತರ ಸಾಲ ಮನ್ನಾ ಮಾಡಿದ್ದರೂ ಕೂಡ ರೈತರು ಮತ್ತೆ ಆತ್ಮಹತ್ಯೆಯ ಹಾದಿ ತುಳಿಯುತ್ತಿರುವುದು ವಿಷಾದನೀಯ - ಯತೀಂದ್ರ ಸಿದ್ದರಾಮಯ್ಯ

MLA Yatindra Siddaramaiah to visit homes of farmers who committed suicide
Author
Bengaluru, First Published Oct 9, 2018, 4:28 PM IST
  • Facebook
  • Twitter
  • Whatsapp

ತಾಂಡವಪುರ[ಅ.09]: ದೇಶಕ್ಕೆ ಅನ್ನ ನೀಡುವ ಅನ್ನದಾತರು ಯಾವುದೇ ಕಾರಣಕ್ಕೂ ಮಾಡಿದ ಸಾಲಕ್ಕಾಗಿ ಹೆದರಿ ಆತ್ಮಹತ್ಯೆ ದಾರಿ ತುಳಿಯಬೇಡಿ ನಿಮ್ಮ ಜೊತೆ ಸರ್ಕಾರವಿದೆ ಎಂದು ಶಾಸಕ ಡಾ. ಎಸ್. ಯತೀಂದ್ರ ಸಿದ್ದರಾಮಯ್ಯ ಮನವಿ ಮಾಡಿದರು.

ನಂಜನಗೂಡು ತಾಲೂಕಿನ ಮರಳೂರು ಗೊದ್ದನಪುರ ಗ್ರಾಮದ ರೈತ ಮಹಿಳೆ ಶಿವಮ್ಮ ಎಂಬವರು ಮಾಡಿದ ಸಾಲ ತೀರಿಸಲಾಗದೇ ಹೆದರಿ ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡ ರೈತ ಮಹಿಳೆ ಮನೆಗೆ ಭೇಟಿ ನೀಡಿ ಅವರ ಕುಟುಂಬವರ್ಗಕ್ಕೆ ಧೈರ್ಯ ತುಂಬಿದರಲ್ಲದೇ ಇತ್ತೀಚೆಗಷ್ಟೇ ಕಾಂಗ್ರೆಸ್-ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರ ರೈತರ ಸಾಲ ಮನ್ನಾ ಮಾಡಿದ್ದರೂ ಕೂಡ ರೈತರು ಮತ್ತೆ ಆತ್ಮಹತ್ಯೆಯ ಹಾದಿ ತುಳಿಯುತ್ತಿರುವುದು ವಿಷಾದದ ಸಂಗತಿಯಾಗಿದೆ ಎಂದರು.

ಏನೇ ಕಷ್ಟ ಬಂದರೂ ಧೈರ್ಯವಾಗಿ ಎದುರಿಸಬೇಕು, ನಿಮ್ಮನ್ನೇ ನಂಬಿ ಬದುಕುತ್ತಿರುವ ಕುಟುಂಬವನ್ನು ಬೀದಿ ಪಾಲು ಮಾಡಬೇಡಿ, ಎಷ್ಟೇ ಸಾಲವಿದ್ದರೂ ಅದನ್ನು ಧೈರ್ಯವಾಗಿ ಎದುರಿಸಿ ನಿಲ್ಲಬೇಕು, ಸಾವಿನ ಕೈಗೆ ಬುದ್ದಿಕೊಡಬೇಡಿ ಎಂದು ರೈತರಿಗೆ ಮನವಿ ಮಾಡಿದರು.

ಗ್ರಾಪಂ ಅಧ್ಯಕ್ಷರಾದ ಬಿ.ಎಂ. ಮಹೇಶ್ ಕುಮಾರ್, ಸದಸ್ಯರಾದ ಬಿ. ಪುಟ್ಟಸ್ವಾಮಿ, ಸೂರಿ, ತಾಲೂಕು ಕುರುಬರ ಸಂಘದ ಅಧ್ಯಕ್ಷ ಕೆಂಪಣ್ಣ, ಯೋಗೀಶ್, ದೊರೆಸ್ವಾಮಿ, ತಾಪಂ ಮಾಜಿ ಸದಸ್ಯ ರಾಜಶೇಖರ್ ಕಾಮರಾಜು ಇದ್ದರು.

Follow Us:
Download App:
  • android
  • ios