ಕೊಪ್ಪಳ: ಪಿಐಗೆ ಶಾಸಕ ರಾಘವೇಂದ್ರ ಹಿಟ್ನಾಳ ತರಾಟೆ

ಕೊಪ್ಪಳದಲ್ಲಿ ಕಾಂಗ್ರೆಸ್‌ ಸದಸ್ಯರು ತಂಗಿದ್ದ ಲಾಡ್ಜ್‌ಗೆ ಪಿಐ ವೆಂಕಟಸ್ವಾಮಿ ಭೇಟಿ| ಗಂಗಾವತಿ ಪೊಲೀಸ್‌ ಠಾಣೆಯ ಇನ್‌ಸ್ಪೆಕ್ಟರ್‌ ವೆಂಕಟಸ್ವಾಮಿ ಅವರನ್ನು ತರಾಟೆಗೆ ತೆಗೆದುಕೊಂಡ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್‌| ಶಾಸಕರ ಆವಾಜ್‌ನಿಂದ ವೆಂಕಟಸ್ವಾಮಿ ಸ್ಥ​ಳ​ದಿಂದ ಕಾಲ್ಕಿ​ತ್ತ​ ಪಿಐ ವೆಂಕಟಸ್ವಾಮಿ| 
 

MLA Raghavendra Hitnal Slams on PSI in Koppal grg

ಗಂಗಾವತಿ(ಅ.28): ಇಲ್ಲಿಯ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಚಟುವಟಿಕೆ ದಿನಕ್ಕೊಂದು ರೂಪ ಪಡೆಯುತ್ತಿದ್ದು, ಸದಸ್ಯೆಯ ಕಿಡ್ನ್ಯಾಪ್‌ ಹಿನ್ನೆಲೆಯಲ್ಲಿ ಕೊಪ್ಪಳ ಖಾಸಗಿ ಹೋಟೆಲ್‌ ಒಂದರಲ್ಲಿ ತಂಗಿದ್ದ ಸದಸ್ಯರ ಬಗ್ಗೆ ಮಾಹಿತಿ ಪಡೆಯಲು, ಪರಿಶೀಲನೆಗೆ ತೆರಳಿದ್ದ ಗಂಗಾವತಿ ಪೊಲೀಸ್‌ ಠಾಣೆಯ ಇನ್‌ಸ್ಪೆಕ್ಟರ್‌ ವೆಂಕಟಸ್ವಾಮಿ ಅವರನ್ನು ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್‌ ತರಾಟೆಗೆ ತೆಗೆದುಕೊಂಡಿದ್ದಾರೆ.

ಬಿಜೆಪಿ ಸದಸ್ಯೆ ಸುಧಾ ಸೋಮನಾಥ ಅವರ ಅಪಹರಣ ಹಿನ್ನೆಲೆಯಲ್ಲಿ ಈಗಾಗಲೇ ಪ್ರಕರಣ ದಾಖಲಾಗಿದ್ದು, ಆ ಹಿನ್ನೆಲೆಯಲ್ಲಿ ಪರಿಶೀಲನೆಗೆ ವೆಂಕಟಸ್ವಾಮಿ ತೆರಳಿದ್ದರು. ಆದರೆ ಅಲ್ಲಿ ಕೇವಲ ಕಾಂಗ್ರೆಸ್‌ ಸದಸ್ಯರು ಮಾತ್ರ ಇದ್ದರು.
ಕಾಂಗ್ರೆಸ್‌ ಸದಸ್ಯರು ತಂಗಿ​ದ್ದ ಹೋಟೆಲ್‌ಗೆ ಬರಲು ನೀ​ವ್ಯಾರು? ಎಂದು ರಾಘವೇಂದ್ರ ಹಿಟ್ನಾಳ್‌ ಇನ್‌ಸ್ಪೆಕ್ಟರ್‌ ಅವರನ್ನು ತರಾಟೆಗೆ ತೆಗೆ​ದು​ಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ವೆಂಕಟಸ್ವಾಮಿ ಅವರು ಅಪರಹಣಕ್ಕೆ ಒಳಗಾದ ಸದಸ್ಯೆ ಮತ್ತು ಅವರ ಪತಿ ಹೋಟೆಲ್‌ನಲ್ಲಿದ್ದಾರೆಂಬ ಮಾಹಿತಿ ಪಡೆದು ಬಂದಿರುವೆ ಎಂದ​ರು. ಅದಕ್ಕೆ ಅವರು ಎಫ್‌ಐಆರ್‌ಎಲ್ಲಿದೆ? ಅಪಹರಣಕ್ಕೆ ಒಳಗಾದವರು ಎಲ್ಲಿದ್ದಾರೆ? ಸುಮ್ಮಸುಮ್ಮನೆ ಬಂದಿದ್ದೀರಾ? ಆಟ ಹಚ್ಚಿದ್ದೀರಾ ಎಂದು ತರಾಟೆಗೆ ತೆಗದುಕೊಂಡು ಇಲ್ಲಿಂದ ಜಾಗ ಖಾಲಿ ಮಾಡಿ ಎಂದು ಆಕ್ರೋಶ ವ್ಯಕ್ತ ಪಡಿಸಿದರು. ಶಾಸಕರ ಆವಾಜ್‌ನಿಂದ ವೆಂಕಟಸ್ವಾಮಿ ಸ್ಥ​ಳ​ದಿಂದ ಕಾಲ್ಕಿ​ತ್ತ​ರು.

ಕೊಪ್ಪಳ: ನಿಂದಿಸಿದಾತನ ಸನ್ಮಾನಿಸಿದ ಶಾಸಕ ಹಾಲಪ್ಪ ಆಚಾರ್‌!

ಕೊಪ್ಪಳ ಠಾಣೆಗೆ ಸದಸ್ಯೆ ಪ್ರತ್ಯಕ್ಷ:

ಪೊಲೀಸರು ಮತ್ತು ಶಾಸಕರ ಮಧ್ಯೆ ನಡೆದ ಸಮರ ಬೆನ್ನ ಹಿಂದೆಯೇ ಅಪರಹಣಕ್ಕೆ ಒಳಗಾಗಿದ್ದಾರೆ ಎನ್ನಲಾ​ಗಿ​ದ್ದ ನಗರಸಭೆಯ 26ನೇ ವಾ​ರ್ಡಿನ ಸದಸ್ಯೆ ಸುಧಾ ಸೋಮನಾಥ ಎರಡು ದಿನಗಳ ಹಿಂದೆ ಕೊಪ್ಪಳ ನಗರ ಪೊಲೀಸ್‌ ಠಾಣೆಗೆ ಭೇಟಿ ನೀಡಿ ಹೇಳಿಕೆ ನೀಡಿದ್ದಾರೆ. ತಮ್ಮನ್ನು ಯಾ​ರೂ ಅಪಹರಿಸಿಲ್ಲ. ನಾನು, ನನ್ನ ಪತಿ ಸೋಮನಾಥ, ಮಕ್ಕಳು ಎಲ್ಲರೂ ಸೇರಿ ಪ್ರವಾಸಕ್ಕೆ ಬಂದಿದ್ದೇವೆ. ಅಪಹರಣ ಮಾಡಿದ್ದಾರೆ ಎಂಬ ದೂರು ಸರಿಯಲ್ಲ ಎಂದು ಹೇಳಿಕೆ ನೀಡಿ ಅಪಹರಣ ಪ್ರಕರಣಕ್ಕೆ ಅಂತ್ಯ ಹಾಡಿದ್ದಾರೆ.
 

Latest Videos
Follow Us:
Download App:
  • android
  • ios