ಕಲಬುರಗಿ(ಜೂ.29): ಪಕ್ಕದ ಬಡಾವಣೆಯಲ್ಲಿ ಕೊರೋನಾ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಚಿತ್ತಾಪುರ ಶಾಸಕ ಪ್ರಿಯಾಂಕ್‌ ಖರ್ಗೆ ಬೆಂಗಳೂರಿನ ಸದಾಶಿವ ನಗರದ ತಮ್ಮ ಮನೆಯಲ್ಲಿ ಸ್ವಯಂ ಕ್ವಾರಂಟೈನ್‌ ಆಗಿದ್ದಾರೆ. 

ಸ್ವತಃ ಅವರ ತನ್ನ ಟ್ವೀಟರ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ತಾವು ವಾಸವಿರುವ ಬಡಾವಣೆ ಪಕ್ಕದ ಮನೆಯವರಿಗೆ ಕೊರೋನಾ ದೃಢವಾಗಿರುವುದರಿಂದ ಮುಂಜಾಗ್ರತೆಗಾಗಿ ತಾವೂ ಮನೆಯಲ್ಲೇ ಪ್ರತ್ಯೇಕವಾಗಿ ಕ್ವಾರಂಟೈನ್‌ ಆಗಿದ್ದಾರೆ. 

ಕಲಬುರಗಿ: ಕೊರೋನಾ ವಾರಿಯರ್‌ ಆಶಾ ಕಾರ್ಯಕರ್ತೆಗೂ ಅಂಟಿದ ಮಹಾಮಾರಿ ವೈರಸ್‌

ನಾನು ಆರೋಗ್ಯವಾಗಿದ್ದೀನಿ. ಅಲ್ಲದೇ ಈ ವೇಳೆ ಯಾರನ್ನೂ ಭೇಟಿ ಮಾಡಲು ಸಾಧ್ಯವಾಗದು, ಆದ್ದರಿಂದ ಯಾವುದೇ ಸಮಸ್ಯೆ, ಸಲಹೆಗಳಿದ್ದರೆ ನೇರವಾಗಿ ಫೋನ್‌ ಮೂಲಕ ಮಾತನಾಡಿ ವಿಷಯ ಚರ್ಚಿಸಲು ಪ್ರಿಯಾಂಕ್‌ ಕೋರಿದ್ದಾರೆ.