'ಅಭಿವೃದ್ಧಿಯನ್ನೇ ಮರೆತ ಬಿಜೆಪಿ ಸರ್ಕಾರ'

ಪ್ರಧಾನಮಂತ್ರಿಯಂತ ಜವಾಬ್ದಾರಿಯುತ ಸ್ಥಾನದಲ್ಲಿ ಯಾರೇ ಕುಳಿತಿರಲಿ. ಅದು ಭಾರತಮಾತೆಯ ದೇಶಭಕ್ತಿ ಮೇಲಿರಬೇಕು| ಬಿಜೆಪಿ ಇದನ್ನು ಅಸ್ತ್ರವನ್ನಾಗಿ ಮಾಡಿಕೊಂಡು ಜನತೆಯನ್ನು ಭಾವನಾತ್ಮಕವಾಗಿ ಕಟ್ಟಿ ಹಾಕಲು ಯತ್ನಿಸುತ್ತಿದೆ ಎಂದು ದೂರಿದ ಶಾಸಕ ಪಿ.ಟಿ. ಪರಮೇಶ್ವರ ನಾಯ್ಕ|

MLA P T Parameshwar Naik Talks Over BJP Government

ಹಗರಿಬೊಮ್ಮನಹಳ್ಳಿ(ಜೂ. 27): ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ದೇಶ ಹಾಗೂ ಜನರ ಅಭಿವೃದ್ಧಿ ಮರೆತಿವೆ ಎಂದು ಶಾಸಕ ಪಿ.ಟಿ. ಪರಮೇಶ್ವರ ನಾಯ್ಕ ಆರೋಪಿಸಿದ್ದಾರೆ. 

ತಾಲೂಕಿನ ಬನ್ನಿಕಲ್ಲು ಗ್ರಾಮದಲ್ಲಿ ಕಾಂಗ್ರೆಸ್‌ನಿಂದ ಶುಕ್ರವಾರ ಹಮ್ಮಿಕೊಂಡಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಪದಗ್ರಹಣದ ಪ್ರತಿಜ್ಞಾ ದಿನದ ಹಿನ್ನೆಲೆಯಲ್ಲಿ ಕಾರ್ಯಕರ್ತರಿಗೆ ಜಾಗೃತಿ ಮೂಡಿಸುವ ಹಿನ್ನೆಲೆಯಲ್ಲಿ ಡಿಜಿಟಲ್‌ ಮಾಹಿತಿ ನೀಡುವ ಕುರಿತು ಆಗಮಿಸಿ ಅವರು ಮಾತನಾಡಿರು. ಪ್ರಧಾನಮಂತ್ರಿಯಂತ ಜವಾಬ್ದಾರಿಯುತ ಸ್ಥಾನದಲ್ಲಿ ಯಾರೇ ಕುಳಿತಿರಲಿ. ಅದು ಭಾರತಮಾತೆಯ ದೇಶಭಕ್ತಿ ಮೇಲಿರಬೇಕು. ಆದರೆ, ಬಿಜೆಪಿ ಇದನ್ನು ಅಸ್ತ್ರವನ್ನಾಗಿ ಮಾಡಿಕೊಂಡು ಜನತೆಯನ್ನು ಭಾವನಾತ್ಮಕವಾಗಿ ಕಟ್ಟಿ ಹಾಕಲು ಯತ್ನಿಸುತ್ತಿದೆ ಎಂದು ದೂರಿದರು.

ಅಯ್ಯಯ್ಯೋ: SSLC ಪರೀಕ್ಷಾ ಕೇಂದ್ರ​ದಲ್ಲಿ ಕೊರೋನಾ ಸೋಂಕಿತ ಪೇದೆ ಕಾರ್ಯ​ನಿ​ರ್ವ​ಹ​ಣೆ

ಕಳಿದೆ ಪುಲ್ವಾಮಾ ದಾಳಿ ವೇಳೆ ಬಂಧನಕ್ಕೆ ಒಳಗಾಗಿದ್ದ ಅಭಿನಂದನ್‌ ಅವರನ್ನು ಬಿಡಿಸಿಕೊಂಡು ಬಂದಿರುವುದನ್ನು ಹೆಚ್ಚು ಪ್ರಚಾರ ಪಡೆದರು. ಕೇಂದ್ರ ಸರ್ಕಾರದ ಎರಡನೇ ಅವಧಿಗೆ ಅಧಿಕಾರಕ್ಕೆ ಬಂದು 1 ವರ್ಷ ಪೂರ್ಣಗೊಳಿಸಿದ್ದರೂ ರೈತ ಪರ ಯೋಜನೆ ಘೋಷಿಸಿಲ್ಲ ಎಂದು ಕಿಡಿಕಾರಿದರು. ನಮ್ಮ ಸರ್ಕಾರ ಅಧಿಕಾರದಲ್ಲಿ ಇದ್ದಾಗ ಇಂಧನ ದರ ಏರಿಕೆಯಾದ ವೇಳೆ ಬಿಜೆಪಿಗರು ರಸ್ತೆಗಿಳಿದು ಪ್ರತಿಭಟನೆ ನಡೆಸಿದರು. ಇದೀಗ ಅವರ ಸರ್ಕಾರವೇ ಅಧಿಕಾರದಲ್ಲಿದ್ದು ಡಿಸೇಲ್‌ ಹಾಗೂ ಪೆಟ್ರೋಲ್‌ ಬೆಲೆ ದಿನದಿಂದ ದಿನಕ್ಕೆ ಏರುಗತಿಯಲೇ ಸಾಗುತ್ತಿದೆ. ಯಾರು ಈ ಕುರಿತು ತುಬಿ ಬಿಚ್ಚುತ್ತಿಲ್ಲ ಎಂದು ದೂರಿದರು. ಜು. 2ರಂದು ನಡೆಯುವ ರಾಜ್ಯಾಧ್ಯಕ್ಷರ ಪದಗ್ರಹಣವನ್ನು ಡಿಜಿಟಲ್‌ ಮೂಲಕ ನೋಡಬಹುದು ಮತ್ತು ಸಂವಾದ ಮಾಡಬಹುದು. ಇದಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

ಇದಕ್ಕೂ ಮುನ್ನ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಬಿ.ವಿ. ಶಿವಯೋಗಿ ಮಾತನಾಡಿ, ಕಾಂಗ್ರೆಸ್‌ ಆಡಳಿತದಲ್ಲಿ ನೀಡಿದ ಕಾರ್ಯಕ್ರಮಗಳನ್ನೇ ನಮ್ಮ ಕಾರ್ಯಕ್ರಮಗಳೆಂದು ಬಿಜೆಪಿ ಬೀಗುತಿದೆ. ಅನ್ನಭಾಗ್ಯ, ಕ್ಷೀರಭಾಗ್ಯ ಇಂತಹ ಅನೇಕ ಯೋಜನೆಗಳು ಮತ್ತು ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ರವರ ಖಾತ್ರಿ ಯೋಜನೆ ಬಡವರ ಕೈ ಹಿಡಿದಿದೆ. ಬಿಜೆಪಿ ಜನರಿಗೇನು ಕೊಡುತ್ತಿದೆ, ಅಭಿವೃದ್ಧಿ ಕುರಿತು ಬಿಜೆಪಿ ಬಹಿರಂಗ ಸಭೆ ಕರೆದರೆ ಉತ್ತರಿಸುತ್ತೇವೆ ಎಂದು ಸವಾಲೆಸೆದರು.

ಈ ವೇಳೆ ಕಾಂಗ್ರೆಸ್‌ ಹಡಗಲಿ ತಾಲೂಕು ಅಧ್ಯಕ್ಷ ಪರಮೇಶ್ವರಪ್ಪ, ಟಾಸ್ಕ್‌ಪೋರ್ಸ್‌ ಅಧ್ಯಕ್ಷ ವಾರದ್‌ಗೌಸ್‌, ಪ್ರಚಾರ ಸಮಿತಿ ಅಟವಾಳಿಗಿ ಕೊಟ್ರೇಶ್‌, ಕೋಗಳಿ ಮಂಜುನಾಥ, ತಾಪಂ ಮಾಜಿ ಅಧ್ಯಕ್ಷ ಹಾಲೇಶ, ಬಸವನಗೌಡ, ಹನುಮಜ್ಜ, ಕೋರಿ ಸಿದ್ದಲಿಂಗಪ್ಪ, ಕಾಗಿ ಅಂಬಣ್ಣ ಇದ್ದರು.
 

Latest Videos
Follow Us:
Download App:
  • android
  • ios