Asianet Suvarna News Asianet Suvarna News

ಅಥಣಿ ನೂತನ ಶಾಸಕ ಕುಮಟಳ್ಳಿ ಮುಂದಿವೆ ಸಾಲು ಸಾಲು ಸವಾಲು!

ಉತ್ತರ ಭಾಗದ 10 ಹಳ್ಳಿಗಳಿಗೆ ನೀರಾವರಿ ಯೋಜನೆ ಜಾರಿಯಾಗಲಿ | 20 ಸಾವಿರ ಹೆಕ್ಟೇರ್ ಪ್ರದೇಶ ಸವಳು-ಜವಳು ಭೂಮಿ ಬೇಕು ಅನುದಾನ ನೀರಾವರಿಗೆ ಬೇಕು ಆದ್ಯತೆ| ನೆರೆಬಾಧಿತರಿಗೆ ಸಿಗಲಿ ಪರಿಹಾರ|

MLA Mahesh Kumatalli Faces Lot of Challenges in Athani
Author
Bengaluru, First Published Dec 11, 2019, 12:09 PM IST

ಸಿ.ಎ.ಇಟ್ನಾಳಮಠ 

ಅಥಣಿ(ಡಿ.11): ಉಪಚುನಾವಣೆಯ ಕದನ ಮುಗಿತು. ಇನ್ನೇನಿದ್ದರೂ ಅಭಿವೃದ್ಧಿ ಮಂತ್ರ ಜಪಿಸಿ ಎಂದು ಸ್ವತಃ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶಾಸಕರಿಗೆ ಸೂಚನೆ ನೀಡಿದ್ದಾರೆ. ಹೀಗಾಗಿ ಗೆದ್ದು ಬಂದಿರುವ ಶಾಸಕರು ಈಗ ತಮ್ಮ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚು ಒತ್ತು ಕೊಡಬೇಕಿದೆ. ಅಥಣಿ ಮತಕ್ಷೇತ್ರದಲ್ಲಿ ಉಪಮುಖ್ಯಮಂತ್ರಿ ಲಕ್ಷ್ಮಣ ಸಂಗಪ್ಪ ಸವದಿ, ಮುಖ್ಯಮಂತ್ರಿ ಬಿ.ಎಸ್ .ಯಡಿಯೂರಪ್ಪನವರು ಆದಿಯಾಗಿ ಬಿಜೆಪಿ ಅಭ್ಯರ್ಥಿ ಗೆಲವಿಗಾಗಿ ಹಗಲಿರುಳು ಶ್ರಮಿಸಿದ್ದಾರೆ. 

ನಾನಾ ರೀತಿಯ ಭರವಸೆಗಳ ಪ್ರವಾಹವನ್ನೇ ಹರಿಸಿದ್ದಾರೆ. ಇವೆಲ್ಲವನ್ನು ಹಿಡಿದಿಟ್ಟುಕೊಳ್ಳಬೇಕಾದ ಅನಿವಾರ್ಯತೆ ರಾಜ್ಯ ಸರ್ಕಾರಕ್ಕೆ ಇದೆ. ಜತೆಗೆ ಬಿಜೆಪಿ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ನೂತನ ಶಾಸಕರಿಗೆ ಹೊಸದಾಗಿ ಸಚಿವ ಸ್ಥಾನದ ಆಶಾಭಾವ ಮೂಡಿಸಿದ್ದಾರೆ ಸಿಎಂ ಯಡಿಯೂರಪ್ಪ ಅವರು. ಇದರ ಜತೆಗೆ ಅಥಣಿ ಕ್ಷೇತ್ರದಲ್ಲಿ ಸಾಕಷ್ಟು ಅಭಿ ವೃದ್ಧಿಗಳ ಕೆಲಸವಾಗಬೇಕಿದೆ. ಅಭಿವೃದ್ಧಿ ಕೆಲಸವೊಂದರಿಂದಲೇ ಮತದಾರರ ಋಣ ತೀರಿಸಲು ಸಾಧ್ಯ ಎಂಬುವುದರಲ್ಲಿ ಎರಡು ಮಾತಿಲ್ಲ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಪ್ರವಾಹದಂತಹ ಉಂಟಾಗಿರುವ ಈ ಕ್ಷೇತ್ರದಲ್ಲಿ ರಾಜ್ಯ ಸರ್ಕಾರ ಈಗಲಾದರೂ ಎಚ್ಚೆತ್ತುಕೊಂಡು ಸಮರ್ಪಕವಾಗಿ ಕಾರ್ಯನಿರ್ವಹಿಸಬೇಕಿದೆ. ಹಾಗಾದರೆ ಕ್ಷೇತ್ರದಲ್ಲಿ ಯಾವ್ಯಾವ ಕೆಲಸಗಳಾಗಬೇಕಿದೆ ಎಂಬುವುದರ ಕುರಿತು ಮಾಹಿತಿ ಇಲ್ಲಿದೆ. 

* ಅಥಣಿ ತಾಲೂಕಿನ ಉತ್ತರ ಭಾಗದ 10 ಹಳ್ಳಿಗಳಿಗೆ ನೀರಾವರಿ ಯೋಜನೆ ಜಾರಿಯಾಗಬೇಕು. ಇದಕ್ಕೆ 780 ಕೋಟಿ ಅಂದಾಜು ವೆಚ್ಚದ ಯೋಜನೆ ಸಿದ್ದವಾಗಿ ಸರ್ಕಾರದ ಮುಂದಿದೆ. ಇದರಿಂದ 9950 ಹೆಕ್ಟೇರ್ ಪ್ರದೇಶ ನೀರಾ ವರಿಯಾಗಲಿದೆ. ಇದರಿಂದ ತಾಲೂಕಿನ ಶೇ.70 ಭಾಗ ನೀರಾವರಿಗೆ ಒಳಪಡಲಿದೆ. ಥಿ ತಾಲೂಕಿನ 20 ಸಾವಿರ ಹೆಕ್ಟೇರ್ ಪ್ರದೇಶ ಭೂಮಿ ಸವಳು-ಜವಳು ಆಗಿದೆ. ಇದನ್ನು ಹೀಗೆ ಬಿಟ್ಟರೆ ಮುಂದಿನ ದಿನಗಳಲ್ಲಿ ಭೂಮಿಯಲ್ಲಿ ಬಳ್ಳಾರಿ ಜಾಲಿಯನ್ನು ಬೆಳೆಯಲು ಅಸಾಧ್ಯವಾಗುತ್ತದೆ. ಅದಕ್ಕಾಗಿ ಈ ಪ್ರದೇಶ ಅಭಿವೃದ್ಧಿಗೆ ಸುಮಾರು 1` ಸಾವಿರ ಕೋಟಿ ಅನುದಾನ ಬೇಕು. 

* ನೆರೆ ಪ್ರದೇಶ ಸಂತ್ರಸ್ತರ ಹಲವಾರು ಬೇಡಿಕೆಗಳತ್ತ ಸರ್ಕಾರ ಗಮನ ಕೇಂದ್ರಿಕರಿಸಬೇಕಿದೆ. ಪರಿಹಾರ ವಿತರಣೆಯಲ್ಲಿ ಉಂಟಾದ ತಾರತಮ್ಯ ಸರಿಪಡಿಸಬೇಕಿದೆ. ಇದರ ಜತೆಗೆ ಬೆಳೆ ಪರಿಹಾರ ಸಮರ್ಪಕವಾಗಿ ರೈತರಿಗೆ ಸಿಗಬೇಕು. ಇದರ ಸಂಗಡ ಕೆಲವು ನೆರೆ ಗ್ರಾಮಗಳನ್ನು ಸ್ಥಳಾಂತರ ಮಾಡಬೇಕು. ಇದಕ್ಕಾಗಿ ಹೊಸ ಜಾಗವನ್ನು ಸರ್ಕಾರವೇ ಗುರುತಿಸಬೇಕಿದೆ. 

* ನೆರೆ ಪೀಡಿತ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರಿನ ಸಮಸ್ಯೆ ಇದ್ದು, ಅದಕ್ಕೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಸುಮಾರು 50 ಕೋಟಿಯಲ್ಲಿ ನಿರ್ಮಾಣ ಮಾಡಬೇಕಿದೆ. 

* ಕಳೆದ 12 ವರ್ಷಗಳ ಹಿಂದೆ ಬಿ.ಎಸ್.ಯಡಿ ಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಸುಮಾರು 150 ಕೋಟಿ ವೆಚ್ಚದಲ್ಲಿ ಪಶು ವೈದ್ಯಕೀಯ ಕಾಲೇಜು ಮಂಜೂರ ಮಾಡಿದ್ದರು. ಅದರ ಪೈಕಿ ಅವರು 50 ಕೋಟಿ ಮೊದಲ ಕಂತಾಗಿ 50 ಕೋಟಿ ಅನುದಾನ ಬಿಡುಗಡೆ ಮಾಡಿ ಕೆಲಸ ಮಾಡಿದ್ದರು. ಆನಂತರ ಬಂದ ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ಮತ್ತು ಕುಮಾರಸ್ವಾಮಿಯವರು ಈ ಕಾಲೇಜಿಗೆ ಒಂದು ಪೈಸೆ ಬಿಡುಗಡೆ ಮಾಡಿಲ್ಲ. ಅರ್ಧಕ್ಕೆ ನಿಂತ ಈ ಕೆಲಸವನ್ನು ತಕ್ಷಣ ಮಾಡಬೇಕಾಗಿದೆ. 

* ಈಗಾಗಲೇ ಸ್ಥಳ ಪರಿಶಿಲನೆಯಾಗಿದೆ. ಇಲ್ಲಿ ಕೃಷಿ ವಿಶ್ವವಿದ್ಯಾಲಯ ಕಾಲೇಜ ಮಂಜೂರ ಆಗಬೇಕಾಗಿದೆ. ಸುಮಾರು 100 ಎಕರೆ ಭೂ ಪ್ರದೇಶ ಮೀಸಲಿಡಲಾಗಿದೆ. ಆರಂಭದ ಕೆಲಸಕ್ಕೆ ಅಂತ ಮೀಸಲಿಟ್ಟ 25 ಕೋಟಿ ಹಣವನ್ನು ತಕ್ಷಣ ಸಚಿವ ಸಂಪುಟದಲ್ಲಿ ಅನುಮೋದನೆ ಪಡೆದು ಕೆಲಸ ಆರಂಭಿಸಬೇಕಿದೆ. 

* ಅಥಣಿ ಪುರಸಭೆಗೆ 150 ವರ್ಷಗಳಾಗಿವೆ. ಇದಕ್ಕಿಂತ ಹಿಂದೆ ಇರುವ ಅನೇಕ ಪುರಸಭೆಗಳು ನಗರ ಸಭೆಗಳಾಗಿವೆ. ಆದರೆ, ಅಥಣಿ ಮಾತ್ರ ನಗರಸಭೆಯಾಗಿ ಮೇಲ್ದರ್ಜೆಗೆ ಏರಿಲ್ಲ. ತಕ್ಷಣ ಇದನ್ನು ಮೇಲ್ದರ್ಜೆಗೆ ಏರಿಸಲು ಕ್ರಮ ಕೈಗೊಳ್ಳಬೇಕಿದೆ. ಅಥಣಿ ನಗರ ದಿನ ದಿನ ಬೆಳೆಯುತ್ತಿರುವುದರಿಂದ ತಕ್ಷಣ ಒಳಚರಂಡಿ ಯೋಜನೆ ಅನುಷ್ಠಾನಕ್ಕೆ ಒತ್ತು ನೀಡಬೇಕಿದೆ.

* ಅಥಣಿ ನಗರದ ಜನದಟ್ಟಣೆ ಕಡಿಮೆ ಮಾಡಲು ಸುಮಾರು 150 ಕೋಟಿ ಅನುದಾನ ಮಂಜೂರಾತಿಗಾಗಿ ಸರ್ಕಾರದ ಮುಂದೆ ಇದೆ. ಅಲ್ಲದೆ, ಅಥಣಿ ನಗರ ಸೌಂದರ್ಯಕ್ಕೆ ಕೆರೆ ಅಭಿವೃದ್ಧಿಗೆ ಸುಮಾರು 10 ಕೋಟಿ ಮಂಜೂರಾತಿಗೆ ಕಾಯುತಿದೆ. 

* ನಗರ ನಿತ್ಯ ಬೆಳೆಯುತ್ತಿರುವುದರಿಂದ ವಾಹನಗಳ ಸಂಖ್ಯೆಗಳು ಹೆಚ್ಚಿವೆ. ಆದರೆ, ಅದೇ ಕಿರಿದಾದ ರಸ್ತೆಗಳಿವೆ. ಹೀಗಾಗಿ ರಸ್ತೆಗಳ ಅಗಲೀಕರಣಕ್ಕೆ ಒತ್ತು ನೀಡಿ ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಲು ಯೋಜನೆ ರೂಪಿಸಬೇಕಿದೆ.

ಈ ಬಗ್ಗೆ ಮಾತನಾಡಿದ ನೂತನ ಶಾಸಕ ಮಹೇಶ್ ಕುಮಟಳ್ಳಿ ಅವರು, ನಮ್ಮ ಜಿಲ್ಲೆಯವರಾದ ರಮೇಶ್ ಜಾರಕಿಹೊಳಿ ಮುಂದಿನ ದಿನಮಾನ ಗಳಲ್ಲಿ ಬೃಹತ್ ನೀರಾವರಿ ಸಚಿವ ಖಾತೆ ಸಿಗಬಹುದು. ನಮ್ಮ ಭಾಗದ ಬಾಕಿ ಊಳಿದಿರುವ 7 ಹಳ್ಳಿಗಳ ನೀರಾವರಿ ಯೋಜನೆ, ಕೆರೆ ತುಂಬಿಸುವ ಯೋಜನೆಗಳನ್ನು ಒಳಗೊಂಡು ಎಲ್ಲ ನೀರಾವರಿ ಯೋಜನೆಗಳ ಪೂರ್ತಿ ಮಾಡುವುದಕ್ಕೆ ನಾನು ಡಿಸಿಎಂ ಸವದಿ ಜೊತೆಯಾಗಿ ಪ್ರಯತ್ನಿಸುತ್ತೇನೆ. ಕ್ಷೇತ್ರದಲ್ಲಿ ಅತಿ ಮುಖ್ಯ ಸಮಸ್ಯೆಗಳಾದ ಸವಳು-ಜವಳು, ಪ್ರದೇಶ ಅಭಿವೃದ್ಧಿಗೆ ಸುಮಾರು 700 ಕೋಟಿ ಅನುದಾನ ತರುವುದು, ಕೆಲವು ಗ್ರಾಮಗಳ ಸ್ಥಳಾಂತರ, ನೆರೆ ಸಮಸ್ಯೆಯಲ್ಲಿ ಇನ್ನೂ ಸಿಗಬೇಕಾದ ಪರಿಹಾರ ಒದಗಿಸಲು ಶ್ರಮಿಸುತ್ತೇನೆ ಎಂದು ಹೇಳಿದ್ದಾರೆ. 

Follow Us:
Download App:
  • android
  • ios