‘ಸಾಮೂಹಿಕ ವಿವಾಹಗಳಿಗೆ ಆದ್ಯತೆ ಕೊಡಿ’
ಬಡ ಕುಟುಂಬಗಳಿಗೆ ಮದುವೆ ವೆಚ್ಚ ಭರಿಸುವುದೇ ಒಂದು ಸವಾಲಾಗಿದೆ. ಅನಿಯಮಿತ ಬೆಲೆಗಳ ಏರಿಕೆಯಿಂದಾಗಿ ಜೀವನ ನಡೆಸುವುದೇ ಕಷ್ಟವಾಗಿದ್ದು, ಈ ಹಿನ್ನೆಲೆಯಲ್ಲಿ ಸರಳ ಸಾಮೂಹಿಕ ವಿವಾಹಗಳಿಗೆ ಪ್ರೋತ್ಸಾಹ ನೀಡಬೇಕೆಂದರು.
ಆನೇಕಲ್ [ಮಾ.08] : ಇಂದಿನ ಪರಿಸ್ಥಿತಿಯಲ್ಲಿ ಬಡ ಕುಟುಂಬಗಳಿಗೆ ಮದುವೆ ವೆಚ್ಚ ಭರಿಸುವುದೇ ಒಂದು ಸವಾಲಾಗಿದೆ. ಅನಿಯಮಿತ ಬೆಲೆಗಳ ಏರಿಕೆಯಿಂದಾಗಿ ಜೀವನ ನಡೆಸುವುದೇ ಕಷ್ಟವಾಗಿದ್ದು, ಈ ಹಿನ್ನೆಲೆಯಲ್ಲಿ ಸರಳ ಸಾಮೂಹಿಕ ವಿವಾಹಗಳಿಗೆ ಪ್ರೋತ್ಸಾಹ ನೀಡಬೇಕೆಂದು ಶಾಸಕ ಎಂ.ಕೃಷ್ಣಪ್ಪ ತಿಳಿಸಿದರು.
ತಾಲೂಕಿನ ಕಲ್ಲುಬಾಳು ಪಂಚಾಯಿತಿ ವ್ಯಾಪ್ತಿಯ ಮಹಂತಲಿಂಗಾಪುರದಲ್ಲಿ ನಡೆದ ಮುತ್ತರಾಯಸ್ವಾಮಿ ದೇವಸ್ಥಾನ ಉದ್ಘಾಟನೆ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರ್ಕಾರ ಭಾಗಲಕ್ಷ್ಮೀ ಯೋಜನೆ ಮರುಜಾರಿಗೆ ತಂದಿದೆ. ಸದ್ಯದಲ್ಲೇ ಯಶಸ್ವಿನಿ ಯೋಜನೆಯನ್ನು ಜಾರಿ ಮಾಡುವ ವಿಶ್ವಾಸವಿದೆ ಎಂದರು.
‘ನನ್ನ ಮಗಳ ಮದುವೆಯಂತೆ 50 ಸಾವಿರ ಮದುವೆ ಮಾಡಿಸಿದ್ದೇನೆ’.
ರಾಜಾಪುರ ಸಂಸ್ಥಾನ ಮಠದ ಡಾ. ರಾಜೇಶ್ವರ ಶಿವಾಚಾರ್ಯ ಸ್ವಾಮೀಜಿ, ಗುಮ್ಮಳಾಪುರ ಸಂಸ್ಥಾನ ಮಠದ ಡಾ. ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಕಲ್ಲುಬಾಳು ಗ್ರಾಮ ಪಂಚಾಯಿತಿ ಅಧ್ಯಕ್ಷ ಬಸವರಾಜು, ಜಿಲ್ಲಾ ಪಂಚಾಯಿತಿ ಸದಸ್ಯೆ ಜಯಮಾಲಾ ದಿನೇಶ್, ತಾಲೂಕು ಪಂಚಾಯಿತಿ ಸದಸ್ಯೆ ಪದ್ಮ ಅಶ್ವತ್ಥ ನಾರಾಯಣ್, ಎಪಿಎಂಸಿ ನಿರ್ದೇಶಕ ಬನ್ನೇರುಘಟ್ಟಜಯರಾಮ್, ಗಿಡ್ಡೇನಹಳ್ಳಿ ನಾಗರಾಜು, ಪಿಳ್ಳಪ್ಪ, ಲಕ್ಷ್ಮಣ್ ನಾಯಕ್, ಪ್ರಕಾಶ್ ನಾಯಕ್ ಇತರರು ಇದ್ದರು.