ಯಲಬುರ್ಗಾ(ಜೂ.24): ದೇಶದ ಪ್ರಧಾನಿ ನರೇಂದ್ರ ಮೋದಿ ತಮ್ಮ ಅಧಿಕಾರಾವಧಿಯಲ್ಲಿ ಯಾವುದೇ ಒಂದು ಕಪ್ಪು ಚುಕ್ಕೆ ಇಲ್ಲದೆ ಸುಭದ್ರ ಆಡಳಿತ ನೀಡಿದ್ದು, ಅವರ ಆಡಳಿತ ಇಡೀ ದೇಶಕ್ಕೆ ಮಾದರಿಯಾಗಿದೆ ಎಂದು ಶಾಸಕ ಹಾಲಪ್ಪ ಆಚಾರ್‌ ಹೇಳಿದ್ದಾರೆ. 

ಪಟ್ಟಣದ ರಾಮನಗರದ ಕಾಲೋನಿಯಲ್ಲಿ ತಾಲೂಕು ಬಿಜೆಪಿ ಘಟಕ ವತಿಯಿಂದ ಮಂಗಳವಾರ ಪ್ರಧಾನಮಂತ್ರಿ ನರೇಂದ್ರ ಮೋದಿ ಎನ್‌ಡಿಎ ನೇತೃತ್ವದ ಸರ್ಕಾರ ಎರಡನೇ ಅವಧಿಯಲ್ಲಿ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸರಕಾರದ ಸಾಧನೆಗಳ ಕರಪತ್ರಗಳನ್ನು ಶಾಸಕ ಹಾಲಪ್ಪ ಆಚಾರ್‌ ಜನರ ಮನೆ ಬಾಗಿಲಿಗೆ ವಿತರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ಕಾಂಗ್ರೆಸ್‌ ಈ ದೇಶದಲ್ಲಿ 70 ವರ್ಷ ಆಳ್ವಿಕೆ ನಡೆಸಿದರೂ ದೇಶ ಯಾವುದೇ ಅಭಿವೃದ್ಧಿ ಹೊಂದಿಲ್ಲ. ಪ್ರಧಾನಿ ನರೇಂದ್ರ ಮೋದಿ ಕೋವಿಡ್‌-19 ಮಹಾಮಾರಿ ನಿರ್ಮೂಲನೆಗೆ ದಿಟ್ಟ ನಿರ್ಧಾರಗಳನ್ನು ಕೈಗೊಳ್ಳುವ ಮೂಲಕ ದೇಶದ ಜನತೆಯ ಆರೋಗ್ಯ ಹಿತ ಕಾಪಾಡುವ ಉದ್ದೇಶದಿಂದ ಸುಮಾರು 20 ಲಕ್ಷ ಕೋಟಿ ಮೊತ್ತದ ಪ್ಯಾಕೇಜ್‌ ಘೋಷಿಸಿದ್ದಾರೆ. ಇದರಿಂದ ಕೊರೋನಾದಿಂದ ಜನತೆ ನೆಮ್ಮದಿಯ ಜೀವನ ನಡೆಸಲು ಹೆಚ್ಚು ಸಹಕಾರಿಯಾಗಿದೆ ಎಂದು ಹೇಳಿದರು.

ಗಂಗಾವತಿ: ಒಂದೇ ಕಾಲಿರುವ ಅಪರೂಪದ ಮಗು ಜನನ..!

ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕೊರೋನಾ ಸಂಕಷ್ಟ ಸಮಯದಲ್ಲಿ ಬಡವರಿಗೆ ಸಾಕಷ್ಟು ನೆರವು ನೀಡಿ ಸ್ವಾವಲಂಬಿ ಜೀವನ ನಡೆಸಲು ಹೆಚ್ಚು ಅನುಕೂಲ ಕಲ್ಪಿಸಿದ್ದಾರೆ. ಜೊತೆಗೆ ರೈತಪರ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ದೇಶದ ಸೈನಿಕರಿಗೆ ಮುಕ್ತ ಸ್ವಾತಂತ್ರ್ಯ ನೀಡುವ ಮೂಲಕ ಅವರಿಗೆ ವಿಶೇಷ ರಕ್ಷಾ ಕವಚಗಳನ್ನು ನೀಡಿ ಆತ್ಮಸ್ಥೈರ್ಯ ನೀಡಿದ್ದಾರೆ. ಇಡೀ ದೇಶವನ್ನು ಅಭಿವೃದ್ಧಿ ಪಥದತ್ತ ಮುನ್ನಡೆಸುತ್ತಿರುವುದು ನಮ್ಮಗೆಲ್ಲ ಹೆಮ್ಮೆಯ ಏನಿಸುತ್ತಿದೆ ಎಂದರು.

ಬಿಜೆಪಿ ತಾಲೂಕಾಧ್ಯಕ್ಷ ವಿಶ್ವನಾಥ ಮರಿಬಸಪ್ಪನವರ, ಸಿ.ಎಚ್‌. ಪಾಟೀಲ, ವೀರಣ್ಣ ಹುಬ್ಬಳ್ಳಿ, ಸಿದ್ದರಾಮೇಶ ಬೇಲೇರಿ, ಶಂಕರ ಭಾವಿಮನಿ, ಶಿವಾನಂದ ಬಣಕಾರ, ಮಾರುತಿ ಗಾವರಾಳ, ತಾಪಂ ಸದಸ್ಯರಾದ ಶರಣಪ್ಪ ಈಳಿಗೇರ, ಶಂಕರಗೌಡ ಟಣಕನಕಲ್‌, ಪಪಂ ಸದಸ್ಯರಾದ ಬಸವಲಿಂಗಪ್ಪ ಕೊತ್ತಲ, ಅಮರೇಶ ಹುಬ್ಬಳ್ಳಿ, ವಸಂತ ಭಾವಿಮನಿ, ಕಳಕಪ್ಪ ತಳವಾರ, ದೊಡ್ಡಯ್ಯ ಗುರುವಿನ, ಈರಪ್ಪ ಬಣಕಾರ, ಕಲ್ಲಪ್ಪ ಕರಮುಡಿ, ಸುರೇಶ ಹೊಸಳ್ಳಿ, ಅಮರೇಶ ಹುಬ್ಬಳ್ಳಿ ಮತ್ತಿತರರು ಇದ್ದರು.