Chitradurga: ರೈತರು, ಕುರಿಗಾಯಿಗಳಿಗೆ ಹೆಲಿಕಾಪ್ಟರ್‌ನಲ್ಲಿ ಹಾರುವ ಭಾಗ್ಯ ಕಲ್ಪಿಸಿದ ಶಾಸಕ!

ವಾರೇ ವ್ಹಾ... ನಾವೇನು ಮಲೆನಾಡಿನಲ್ಲಿದ್ದೀವಾ, ಇಷ್ಟೊಂದು ಸುಂದರ ಪರಿಸರ ನಮ್ಮಲ್ಲಿಯೂ ಇದೆಯಾ, ನಿಜಕ್ಕೂ ನಾವು ನೋಡೆ ಇಲ್ವಾಲ್ಲಾ ಇಂತಹ ಸುಂದರ ಸೊಬಗನ್ನ, ಇದು ಶಾಸಕ ಗೂಳಿಹಟ್ಟಿ ಶೇಖರ್‌ ಗುರುವಾರ ಕುರಿಗಾಯಿಗಳಿಗೆ ಹಾಗೂ ರೈತರಿಗಾಗಿ ಏರ್ಪಡಿಸಿದ್ದ ಹೆಲಿಕಾಪ್ಟರ್‌ನಲ್ಲಿ ವಿವಿಸಾಗರ ಜಲಾಶಯ ವೀಕ್ಷಣೆ ಮಾಡಿದ ನಂತರ ಕುರಿಗಾಯಿಗಳೂ ಹಾಗೂ ರೈತರ ಬಾಯಲ್ಲಿ ಕೇಳಿ ಬಂದ ಮಾತಿದು. 

mla goolihatti shekhar arranged helicopter ride for farmers in chitradurga gvd

ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್,  ಚಿತ್ರದುರ್ಗ

ಚಿತ್ರದುರ್ಗ (ಜೂ.03): ವಾರೇ ವ್ಹಾ... ನಾವೇನು ಮಲೆನಾಡಿನಲ್ಲಿದ್ದೀವಾ, ಇಷ್ಟೊಂದು ಸುಂದರ ಪರಿಸರ ನಮ್ಮಲ್ಲಿಯೂ ಇದೆಯಾ, ನಿಜಕ್ಕೂ ನಾವು ನೋಡೆ ಇಲ್ವಾಲ್ಲಾ ಇಂತಹ ಸುಂದರ ಸೊಬಗನ್ನ, ಇದು ಶಾಸಕ ಗೂಳಿಹಟ್ಟಿ ಶೇಖರ್‌ ಗುರುವಾರ ಕುರಿಗಾಯಿಗಳಿಗೆ ಹಾಗೂ ರೈತರಿಗಾಗಿ ಏರ್ಪಡಿಸಿದ್ದ ಹೆಲಿಕಾಪ್ಟರ್‌ನಲ್ಲಿ ವಿವಿಸಾಗರ ಜಲಾಶಯ ವೀಕ್ಷಣೆ ಮಾಡಿದ ನಂತರ ಕುರಿಗಾಯಿಗಳೂ ಹಾಗೂ ರೈತರ ಬಾಯಲ್ಲಿ ಕೇಳಿ ಬಂದ ಮಾತಿದು. ವಿಮಾನಯಾನ, ಹಾಗೂ ಹೆಲಿಕಾಪ್ಟರ್‌ಗಳಲ್ಲಿ ಹಾರಾಟ ಎಂಬುದು ಶ್ರೀಮಂತರ ಆಯ್ಕೆ ಆಗಿರುತ್ತೆ. 

ಗ್ರಾಮೀಣ ಭಾಗದ ಬಡ ರೈತರು - ಕುರಿಗಾಯಿಗಳು ವಿಮಾನ ಹಾಗೂ ಹೆಲಿಕಾಪ್ಟರ್ ಅನ್ನು ಆಕಾಶದಲ್ಲಿ ಹಾರಾಡುವಾಗ ಮಾತ್ರ ತಲೆ‌ ಎತ್ತಿ ನೋಡಿ ಖುಷಿ ಪಟ್ಟಿರುತ್ತಾರೆ.  ಆದರೆ ಸದಾ ವಿಶೇಷತೆಯ ರೂವಾರಿಯಾದ ಹಾಗೂ ಜನರ ಸೇವೆಗೆ ಹೆಚ್ಚು ಕಾಲ ಮಿತಿ ಇಡುವ ಜನಪ್ರಿಯ ಶಾಸಕ ಗೂಳಿಹಟ್ಟಿ ಶೇಖರ್‌ ಕುರಿಗಾಯಿಗಳು ಹಾಗೂ ರೈತರಿಗೂ ಹೆಲಿಕಾಪ್ಟರ್ ಪ್ರಯಾಣದ ಅನುಭವ ತೋರಿಸಿದರು. ಹೊಸದುರ್ಗ ತಾಲೂಕು ಸುಂದರ ಪರಿಸರ ಹಾಗೂ ಪ್ರವಾಸೋದ್ಯಮ ಕೇಂದ್ರವಾಗಿದೆ. ಆದರೆ ಇದನ್ನು ಅಭಿವೃದ್ಧಿಪಡಿಸದೇ ಹಿನ್ನಡೆಯಾಗಿದೆ.  

ಹೊಸದುರ್ಗ ಕ್ಷೇತ್ರದಿಂದ ಸ್ಪರ್ಧೆ ಮಾಡ್ತಾರಾ ಬಿ.ವೈ ವಿಜಯೇಂದ್ರ?

ವಿವಿಸಾಗರ ಜಲಾಶಯ ಸಂಪೂರ್ಣ ಹೊಸದುರ್ಗ ತಾಲೂಕಿನಲ್ಲಿದ್ದರೂ ಅದರ ಅನುಕೂಲವನ್ನು ಅಕ್ಕಪಕ್ಕದ ತಾಲೂಕುಗಳು ಪಡೆಯುತ್ತಿವೆ. ಆದರೆ ಅದನ್ನು  ಬಳಸಿಕೊಂಡು ತಾಲೂಕಿನ ಜನರಿಗೆ ಉದ್ಯೋಗವನ್ನು ಕಲ್ಪಿಸುವ ನಿಟ್ಟಿನಲ್ಲಿ ವಿವಸಾಗರ ಜಲಾಶಯದ ಹಿನ್ನೀರಿನ ಪ್ರದೇಶವನ್ನು ಪ್ರವಾಸೋದ್ಯಮ ಮಾಡುವ ನಿಟ್ಟಿನಲ್ಲಿ  ಕೇಂದ್ರವನ್ನಾಗಿ ಹಲವಾರು ಯೋಜನೆಗಳ ಹಾಕಲಾಗಿದೆ ಎಂದರು. 

ವಿವಿ ಸಾಗರ ಹಿನ್ನೀರಿನಲ್ಲಿ ಐಲ್ಯಾಂಡ್ ನಿರ್ಮಾಣದ ಮಾಸ್ಟರ್ ಪ್ಲಾನ್: ಈಗಾಗಲೇ ವಿವಿಸಾಗರದ ಮಧ್ಯಭಾಗದಲ್ಲಿ ಐಲ್ಯಾಂಡ್ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಯೋಜನೆಗಳು ರೂಪಗೊಳ್ಳುತ್ತಿವೆ. ಇನ್ನು ಅಂಚೆಬಾರಹಟ್ಟಿ ಬಳಿ ಅಕಾಡೆಮಿಯಲ್ಲಿ ಜಲಸಾಹಸ ಕ್ರೀಡಾ ತರಬೇತಿ ಕೇಂದ್ರ ಜನರಲ್ ತಿಮ್ಮಯ್ಯ ತೆರೆಯಲಾಗಿದ್ದು, ಅಲ್ಲಿಯೂ ಅಭಿವೃದ್ಧಿ ಕಾರ್ಯ ನಡೆಸಲಾಗುತ್ತಿದೆ. ಇವೆಲ್ಲವುಗಳ ನಡುವೆ ಈಗ ನಿರ್ಮಿಸುತ್ತಿರುವ ಬೃಹತ್ ಸಂಪರ್ಕ ಸೇತುವೆ ಪ್ರವಾಸೋದ್ಯಮಕ್ಕೆ ಮತ್ತೊಂದು ಆಕರ್ಷಣೆಯಾಗಲಿದೆ ಎಂದರು. 

ಬೋಟಿಂಗ್ ವ್ಯವಸ್ಥೆ: ಬೃಹತ್ ಸಂಪರ್ಕ ಸೇತುವೆ ನಿರ್ಮಾಣ ಕಾರ್ಯಕ್ಕೆ ಶಂಕುಸ್ಥಾಪನೆ ನೆರವೇರಿಸಲು ಮುಖ್ಯಮಂತ್ರಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ 3 ದಿನಗಳ ಕಾಲ ಉಚಿತವಾಗಿ ಬೋಟಿಂಗ್, ರೈಡಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಹೇಳಿದರು.

Chitradurga; ಚಲವಾದಿ ಗುರುಪೀಠದಲ್ಲಿ ಸಮಾಜದ ಸಭೆ, ಎರಡು ಗುಂಪುಗಳ ವಾಗ್ವಾದ

ಜಲಾಶಯ ವೀಕ್ಷಣೆಗೆ ಹೆಲಿ ಟೂರಿಸಂ: ಹಂಪೆಯಲ್ಲಿ ಈ ಹಿಂದೆ ಹೆಲಿಟೂರಿಸಂ ಪ್ರಾರಂಭಿಸಲಾಗಿತ್ತು. ಇದಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಅದರಂತೆ ನಮ್ಮ ಭಾಗದಲ್ಲಿಯೂ ಹೆಲಿ ಟೂರಿಸಂ ನಡೆಸಬಹುದಾ ಎಂಬುದನ್ನು ಪರಿಚಯಿಸಲು ಗುರುವಾರ ಹೆಲಿಕಾಪ್ಟರ್ ಮೂಲಕ ವಿವಿಸಾಗರ ಜಲಾಶಯ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು. ಗುರುವಾರ 150 ಜನರಿಗೆ ಅವಕಾಶ ನೀಡಿತ್ತಾದರೂ ಸುಮಾರು 200ಕ್ಕೂ ಹೆಚ್ಚು ಜನರು ವೀಕ್ಷಿಸಿ ಸಂಭ್ರಮಿಸಿದರು.

Latest Videos
Follow Us:
Download App:
  • android
  • ios