500 ಕೋಟಿ ನೀಡಿದ್ರೆ ವಿಜಯಪುರ ಲಂಡನ್ ಮಾಡುವೆ: ಶಾಸಕ ಬಸನಗೌಡ ಪಾಟೀಲ ಯತ್ನಾಳ
ದ್ರಾಕ್ಷಿ ಬೆಳೆ ಉತ್ತೇಜನ ಸೇರಿದಂತೆ ನಗರದ ಸರ್ವತೋಮುಖ ಪ್ರಗತಿಗೆ ಇನ್ನೂ .500 ಕೋಟಿ ಅನುದಾನ ನೀಡಿದರೆ ವಿಜಯಪುರ ನಗರ ಲಂಡನ್ ನಗರ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ.
ವಿಜಯಪುರ (ಅ.1): ದ್ರಾಕ್ಷಿ ಬೆಳೆ ಉತ್ತೇಜನ ಸೇರಿದಂತೆ ನಗರದ ಸರ್ವತೋಮುಖ ಪ್ರಗತಿಗೆ ಇನ್ನೂ 500 ಕೋಟಿ ಅನುದಾನ ನೀಡಿದರೆ ವಿಜಯಪುರ ನಗರ ಲಂಡನ್ ನಗರ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿದರು. ವಿಜಯಪುರದ ಶ್ರೀ ಸಿದ್ದೇಶ್ವರ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬಳಿ ಇರುವ ವಿಶಾಲ ಜಾಗದಲ್ಲಿ ವಿಜಯಪುರ ನಗರದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ವಿವಿಧ ಕಾಮಗಾರಿಗಳ ಲೋಕಾರ್ಪಣೆ ಸಮಾರಂಭದಲ್ಲಿ ಮುಖ್ಯಮಂತ್ರಿಗಳಿಗೆ ಈ ಬೇಡಿಕೆಯನ್ನು ಮಂಡಿಸಿದರು. ವಿಜಯಪುರ ಒಣದ್ರಾಕ್ಷಿಯ ದೊಡ್ಡ ಮಾರುಕಟ್ಟೆಹೊಂದಿದೆ. ಇನ್ನಷ್ಟುಅನುದಾನ ನೀಡಿದರೆ ಒಣದ್ರಾಕ್ಷಿಯ ವಿಶ್ವಮಾರುಕಟ್ಟೆಯೇ ವಿಜಯಪುರದಲ್ಲಿ ನಡೆಯಲಿದೆ. ಈ ಹಿಂದೆ ಒಣದ್ರಾಕ್ಷಿ ನೆರೆಯ ಮಹಾರಾಷ್ಟ್ರದ ಪಾಲಾಗುತ್ತಿತ್ತು. ಈಗ ದ್ರಾಕ್ಷಿ ಬೆಳೆಗಾರರ ಸಮಸ್ಯೆಗಳಿಗೆ ಸಿಎಂ ಬೊಮ್ಮಾಯಿ ಸ್ಪಂದಿಸಿದ್ದಾರೆ. ಅದೇ ತೆರನಾಗಿ ಇನ್ನೂ .100 ಕೋಟಿ ಹಾಗೂ ನಗರದ ವಿವಿಧ ಕಾಮಗಾರಿಗಳಿಗೆ .100 ಕೋಟಿ ಒದಗಿಸಿದರೆ ವಿಜಯಪುರ ನಗರ ಸ್ಮಾರ್ಚ್ ಸಿಟಿಯ ಜೊತೆಗೆ ಲಂಡನ್ ನಗರವನ್ನು ಮೀರಿಸಲಿದೆ ಎಂದು ಹೇಳಿದರು.
ಖಾಸಗಿ ಸಹಭಾಗಿತ್ವದಲ್ಲಿ ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯ ನಿರ್ಮಾಣಕ್ಕೆ ಸರ್ಕಾರ ಆಶಯ ಹೊಂದಿದೆ. ಈ ಮಹತ್ವದ ಜವಾಬ್ದಾರಿಯನ್ನು ಸಿದ್ದೇಶ್ವರ ಸಂಸ್ಥೆ ಹಾಗೂ ನೆರೆಯ ಬಾಗಲಕೋಟೆ ಜಿಲ್ಲೆಯ ಬ.ವಿ.ವ. ಸಂಘಕ್ಕೆ ನೀಡಿದರೆ ಪರಿಣಾಮಕಾರಿಯಾಗಿ, ಬಡ ವಿದ್ಯಾರ್ಥಿಗಳಿಗೆ ಅನುಕೂಲಕರವಾಗಿಸುವ ನಿಟ್ಟಿನಲ್ಲಿ ವೈದ್ಯಕೀಯ ಶಿಕ್ಷಣ ನೀಡಲು ಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿ ಸರ್ಕಾರ ಸಕಾರಾತ್ಮಕವಾಗಿ ಚಿಂತಿಸಬೇಕು ಎಂದು ಹೇಳಿದರು.
ಪ್ರಸ್ತುತ ಉದ್ಘಾಟನೆಯಾಗಿರುವ ಸಿದ್ದೇಶ್ವರ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬಡವರಿಗೆ ಗುಣಮಟ್ಟದ ಸೇವೆ ಒದಗಿಸುವ ಧ್ಯೇಯವಾಗಿದ್ದು, ಸಿದ್ದೇಶ್ವರ ಸಂಸ್ಥೆಯಿಂದ ಬರುವ ಆದಾಯವನ್ನು ಈ ಬಡವರ ಕಲ್ಯಾಣದ ಕಾರ್ಯಕ್ಕೆ ಉಪಯೋಗಿಸಿಕೊಳ್ಳಲು ನಿರ್ಧರಿಸಲಾಗಿದೆ. ಬರುವ ಐದು ವರ್ಷಗಳಲ್ಲಿ ಈ ಆಸ್ಪತ್ರೆಯನ್ನು 1008 ಬೆಡ್ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ ದೊಡ್ಡ ಗುರಿ ಹೊಂದಲಾಗಿದೆ ಎಂದು ಯತ್ನಾಳ ಪ್ರಕಟಿಸಿದರು.
ಭಾರತ ಶೀಘ್ರ ಸೂಪರ್ ಪವರ್ ರಾಷ್ಟ್ರ: ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾತನಾಡಿ, ಸಂಪೂರ್ಣ ಪ್ರಗತಿ ಹೊಂದಿ .3 ಕೋಟಿ ಜನಸಂಖ್ಯೆಯುಳ್ಳ ರಾಷ್ಟ್ರಗಳು ಜನತೆಗೆ ಕೋವಿಡ್ ವ್ಯಾಕ್ಸಿನ್ ಒದಗಿಸಲು ಸಾಧ್ಯವಾಗಿಲ್ಲ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರ ಸಮರ್ಥ ನಾಯಕತ್ವದಲ್ಲಿ 210 ಕೋಟಿ ವ್ಯಾಕ್ಸಿನ್ ನೀಡುವ ಮೂಲಕ ದೇಶವನ್ನು ಸುರಕ್ಷಿತವಾಗಿರಿಸಲು ಸಾಧ್ಯವಾಗಿದೆ. ಆ ಮೂಲಕ ಕೆಲವೇ ವರ್ಷಗಳಲ್ಲಿ ಭಾರತ ಸೂಪರ್ ಪವರ್ ರಾಷ್ಟ್ರವಾಗಿ ಮುನ್ನಡೆಯಲಿದೆ ಎಂದು ಭವಿಷ್ಯ ನುಡಿದರು.
Panchamasali Protest; ಯಡಿಯೂರಪ್ಪಗೆ ತಕ್ಕ ಪಾಠ ಕಲಿಸಬೇಕಿದೆ ಎಂದ ಬಸನಗೌಡ ಪಾಟೀಲ್ ಯತ್ನಾಳ
ಹಿಂದೆ ದೇಶದ ಒಳಗೆ ನುಗ್ಗಿ ಬಾಂಬ್ ಹಾಕುವ ಕಾಲವಿತ್ತು. ಆದರೆ ಈಗ ಬಾಂಬ್ ಹಾಕುವವರನ್ನು ಅಲ್ಲಿಯೇ ಕತ್ತರಿಸುವ ಕೆಲಸ ನಡೆಯುತ್ತಿದೆ. ದೇಶವನ್ನು ಸುರಕ್ಷಿತವಾಗಿರಿಸುವ ನಿಟ್ಟಿನಲ್ಲಿ ದಿಟ್ಟಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಯತ್ನಾಳ್ ಹೇಳಿಕೆಯಿಂದ ಪಕ್ಷಕ್ಕೆ ಡ್ಯಾಮೇಜ್: ವಿಜಯೇಂದ್ರ
ಗಮನ ಸೆಳೆದ ಯತ್ನಾಳ ಮಾತುಗಳು: ಅಧ್ಯಕ್ಷತೆ ಭಾಷಣ ಸಂದರ್ಭದಲ್ಲೂ ವಿಜಯಪುರ ನಗರ ಶಾಸಕ ಯತ್ನಾಳರು ಉಲ್ಲೇಖಿಸಿದ ಅನೇಕ ವಿಷಯಗಳು ಗಮನ ಸೆಳೆದವು. ಕಾರಜೋಳ ಸಾಹೇಬ್ರೇ,ಈಗಿರುವ ಜಿಲ್ಲೆಯ ಎಲ್ಲ ಅಧಿಕಾರಿಗಳು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಯಾರನ್ನೂ ಬದಲಿಸಬೇಡಿ ಎಂದು ನಗುತ್ತಲೇ ಮಾತು ಆರಂಭಿಸಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಅಪ್ಪುಗೌಡ ಪಾಟೀಲ ಮನಗೂಳಿ ಅವರನ್ನು ಸ್ವಾಗತಿಸುವ ಸಂದರ್ಭದಲ್ಲಿ ಅಪ್ಪುಗೌಡರು ಬಾಗೇವಾಡಿಯ ಭವಿಷ್ಯದ ಶಾಸಕ ಎಂದು ಉಲ್ಲೇಖಿಸಿದ್ದು ವಿಶೇಷವಾಗಿತ್ತು. ಅದೇ ತೆರನಾಗಿ ಈ ಹಿಂದೆ ನಾವು ದಿ.ಅನಂತಕುಮಾರ ಅವರ ಹಿಂದೆ ಇರುತ್ತಿದ್ದೆ, ಈಗ ಅನಂತಕುಮಾರ ಅವರನ್ನು ಪ್ರಹ್ಲಾದ ಜೋಶಿ ಅವರಲ್ಲಿ ಕಾಣುತ್ತಿದ್ದೇನೆ. ಈಗ ನೀವು ನಮ್ಮನ್ನು ಹಿಡಿದುಕೊಂಡು ಹೋಗಬೇಕು ಎನ್ನುವ ಮಾತುಗಳು ಸಭಿಕರ ಗಮನ ಸೆಳೆದವು.