ವಿಜಯಪುರ(ಮೇ.10): ಪ್ರಸಕ್ತ ವರ್ಷದ ಬಿರು ಬೇಸಿಗೆಯಲ್ಲಿಯೇ ಜಿಲ್ಲೆಯ ಮುದ್ದೇಬಿಹಾಳದ ಶಾಸಕ ಎ.ಎಸ್‌. ಪಾಟೀಲ(ನಡಹಳ್ಳಿ) ಅವರು ವಿಶೇಷ ಕಾಳಜಿ ವಹಿಸಿ ಕೆರೆಗೆ ನೀರು ಹರಿಸುವ ಮೂಲಕ ರೈತರ ಮೊಗದಲ್ಲಿ ಸಂತಸದ ಜಲಧಾರೆಯ ಹರಿಸಿದ್ದಾರೆ.

ಕೃಷ್ಣಾ ಮೇಲ್ದಂಡೆಯಿಂದ ಚಿಮ್ಮಲಗಿ ಏತ ನೀರಾವರಿ ಕಾಮಗಾರಿ ಕಾಲುವೆಗಳ ಮೂಲಕ ಮುದ್ದೇಬಿಹಾಳ ತಾಲೂಕಿನ ಮಲಗಲದಿನ್ನಿ ಕೆರೆಗೆ ನೀರು ತುಂಬಿಸುವ ಬಹುವರ್ಷಗಳ ಬೇಡಿಕೆಯಾಗಿದ್ದ ಕನಸನ್ನು ಶಾಸಕ ಎ.ಎಸ್‌. ಪಾಟೀಲ(ನಡಹಳ್ಳಿ) ನನಸಾಗಿಸಿದ್ದಾರೆ.

ದಶಕದ ಬೇಡಿಕೆ: ಕೆರೆ ತುಂಬಿಸಿ ನೀರಿನ ಹಾಹಾಕಾರ ಈಡೇರಿಸಿದ ಶಾಸಕ ನಡಹಳ್ಳಿ

ಕೆರೆಗೆ ನೀರು ಹರಿಸಿದ್ದಕ್ಕೆ ಕ್ಷೆತ್ರದ ಜನರು ಶಾಸಕ ಎ.ಎಸ್. ಪಾಟೀಲ್ ನಡಹಳ್ಳಿ ದಂಪತಿಗಳ ಭಾವಚಿತ್ರಕ್ಕೆ ಪೂಜೆ, ಕ್ಷೀರಾಭಿಷೇಕ ಮಾಡುವ ಮೂಲಕ ಕೃತಜ್ಞತೆ ಸಲ್ಲಿಸಿದ್ದಾರೆ. ಮುದ್ದೇಬಿಹಾಳ ಪಟ್ಟಣದ 10 ನೇ ವಾರ್ಡ್‌ನ ಹನುಮಾನ ದೇವಸ್ಥಾನದಲ್ಲಿ ನಡಹಳ್ಳಿ ದಂಪತಿಗಳ ಫೋಟೋಗೆ ಪೂಜೆ ಹಾಗೂ ಹಾಲಿನ ಅಭಿಶೇಕ ಮಾಡಿದ್ದಾರೆ. ಇನ್ನು ಗೋವಾದಲ್ಲಿ ಸಿಲುಕಿದ ತಮ್ಮ ಕ್ಷೇತ್ರದ ಕಾರ್ಮಿಕರನ್ನ ಕರೆ ತರಲು ಶಾಸಕ ನಡಹಳ್ಳಿ ಅವರು ಗೋವಾ ಗಡಿಗೆ ಹೋಗಿದ್ದಾರೆ. ಈ ಮೂಲಕ ಕೊರೋನಾದಿಂದ ಸಂಕಷ್ಟಕ್ಕೆ ಸಿಲುಕಿದ ಕ್ಷೇತ್ರದ ಜನರಿಗೆ ಶಾಸಕ ನಡಹಳ್ಳಿ ಸಹಾಯ ಹಸ್ತ ಚಾಚಿದ್ದಾರೆ. 

ಕೊರೋನಾ ವಾರಿಯರ್ಸ್‌ಗಳಾದ ವೈದ್ಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರಿಗೆ ಕಿಟ್ ನೀಡಿ ಆತ್ಮಸ್ಥೈರ್ಯ ತುಂಬಿದ್ದಾರೆ. ಈ ಹಿನ್ನೆಲೆಯಲ್ಲಿ ಶಾಸಕ ನಡಹಳ್ಳಿ ಹಾಗೂ ಅವರ ಪತ್ನಿ ಮಹಾದೇವಿ ಫೋಟೋಗೆ ಅಭಿಮಾನಿಗಳು ಕ್ಷೀರಾಭಿಷೇಕ ಹಾಗೂ ಪೂಜೆ ಮಾಡಿಸಿದ್ದಾರೆ.