ಅಪ್ರಾಪ್ತೆಯ ಬಳಿ ಪ್ರೇಮಿಯೋರ್ವ ಪ್ರೀತಿ ಮಾಡುವಂತೆ ಹಿಂದೆ ಬಿದ್ದಿದ್ದ. ಒಂದು ದಿನ ಇದ್ದಕ್ಕಿದ್ದಂತೆ ಕಾಣೆಯಾದ ಆಕೆ ಪತ್ತೆಯಾಗಿದ್ದು ಮಾತ್ರ ಶವವಾಗಿ. ಈ ಘಟನೆ ಇದೀಗ ಹಲವು ಅನುಮಾನಗಳಿಗೆ ಕಾರಣವಾಗಿದೆ. 

ಶಿಡ್ಲಘಟ್ಟ (ಫೆ.17): ತಾಲೂಕಿನ ದಿಬ್ಬೂರಹಳ್ಳಿ ಪೊಲೀಸ್‌ ಠಾಣೆ ವ್ಯಾಪ್ತಿಯ ಅಪ್ರಾಪ್ತ ಬಾಲಕಿಯೊಬ್ಬಳ ಶವ ಕೆರೆಯಲ್ಲಿ ದೊರೆತಿದ್ದು ಹತ್ತು ಹಲವು ಅನುಮಾನಗಳಿಗೆ ಕಾರಣವಾಗಿದೆ. ತಾಲೂಕಿನ ಎಸ್‌.ಎಂ.ಕೊಂಡರಾಜನಹಳ್ಳಿಯ 14 ವರ್ಷದ ಬಾಲಕಿ 8 ನೇ ತರಗತಿ ಓದುತ್ತಿದ್ದು ಗಂಜಿಗುಂಟೆ ಬಳಿ ಇರುವ ರೆಡ್ಡಿಕರೆಯಲ್ಲಿ ಆಕೆಯ ಶವ ಪತ್ತೆಯಾಗಿದೆ.

ಶೆಟ್ಟಿಕೆರೆಯ ಗಂಗರಾಜು(19) ಎಂಬಾತ ಪ್ರೀತಿಸುವಂತೆ ಬಾಲಕಿಯ ಹಿಂದೆ ಬಿದ್ದು ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಈ ಕಾರಣದಿಂದಾಗಿ ಪೋಷಕರು ಬಾಲಕಿಯನ್ನು ಆಕೆಯ ಮಾವನ ಮನೆ ದೇವಗುಟ್ಟಯಲ್ಲಿ ಬಿಟ್ಟು ಅಲ್ಲಿಂದಲೆ ಚಿಂತಾಮಣಿ ತಾಲೂಕು ಕನ್ನಂಪಲ್ಲಿಯ ಶಾಲೆಗೆ ಹೋಗಿ ಬರುವ ವ್ಯವಸ್ಥೆ ಮಾಡಿದ್ದರು.

ಮಹಿಳೆ ಸ್ನಾನ ಮಾಡುವಾಗ ವೀಡಿಯೋ ಮಾಡಿದ : ರೋಗಿ ನೋಡಲು ಬಂದು ಮಾಡಿದ್ದೇ ಬೇರೆ ...

ಈ ಮದ್ಯೆ ಬಾಲಕಿ ನಾಪತ್ತೆಯಾಗಿದ್ದು ಗಂಗರಾಜು ವಿರುದ್ಧ ಅಪಹರಣದ ಪ್ರಕರಣವನ್ನು ದಿಬ್ಬೂರಹಳ್ಳಿ ಪೊಲೀಸ್‌ ಠಾಣೆಯಲ್ಲಿ ಬಾಲಕಿಯ ಪೋಷಕರು ಫೆ 12ರಂದು ದಾಖಲಿಸಿದ್ದರು. ಈಗ ಕೆರೆಯಲ್ಲಿ ಬಾಲಕಿಯ ಶವ ಪತ್ತೆಯಾಗಿದ್ದು ದಿಬ್ಬೂರಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಆರೋಪಿ ಗಂಗರಾಜನನ್ನು ಬಂಧಿಸಲಾಗಿದೆ.