ಬೆಂಗಳೂರು: ರಸ್ತೆಯಲ್ಲಿದ್ದ ನೀರು ಸಿಡಿತು ಅಂತ ಕಾರಿನ ಗ್ಲಾಸ್ ಒಡೆದ ಕಿಡಿಗೇಡಿಗಳು..!
ಕ್ಯಾಬ್ ಚಾಲಕ ಮಲ್ಲಿಕಾರ್ಜುನ್ ಸಂಜೆ ಡ್ಯೂಟಿ ಮುಗಿಸಿ ಮನೆಗೆ ಹೋಗುತ್ತಿದ್ದ, ಈ ವೇಳೆ ಜಾಲಹಳ್ಳಿಯ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಬಳಿ ರಸ್ತೆಯಲ್ಲಿ ನೀರು ಆಟೋ ಮೇಲೆ ಸಿಡಿದಿದೆ. ಇದೇ ವಿಚಾರಕ್ಕೆ ಆಟೋ ಚಾಲಕ ಮತ್ತು ಆತನ ಸ್ನೇಹಿತ ಕಿರಿಕ್ ತೆಗೆದು ಕಾರಿನ ಮೇಲೆ ಕಲ್ಲು ಎತ್ತಿ ಹಾಕಿ ಗ್ಲಾಸ್ ಒಡೆದ ಕಿಡಿಗೇಡಿಗಳು
ಬೆಂಗಳೂರು(ಜು.21): ನಗರದಲ್ಲಿ ರೋಡ್ ರೇಜ್ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿವೆ. ರಸ್ತೆಯಲ್ಲಿದ್ದ ನೀರು ಹಾರಿತು ಅಂತ ಕಿಡಿಗೇಡಿಗಳು ಕಾರಿನ ಮೇಲೆ ಕಲ್ಲು ಎತ್ತು ಹಾಕಿ ವಿಕೃತಿ ಮೆರೆದ ಘಟನೆ ಜಾಲಹಳ್ಳಿಯ ಶೆಟ್ಟಿಹಳ್ಳಿ ಸಮೀಪ ಮಲ್ಲಸಂದ್ರ ಮುಖ್ಯರಸ್ತೆಯಲ್ಲಿ ಇಂದು(ಭಾನುವಾರ) ಸಂಜೆ ನಡೆದಿದೆ.
ಆಟೋದಲ್ಲಿದ್ದ ಪುಂಡರು ಕಾರಿನ ಮೇಲೆ ಕಲ್ಲು ಎತ್ತಿ ಹಾಕಿ ಕಾರಿನ ಗ್ಲಾಸ್ ಒಡೆದಿದ್ದಾರೆ. ಮಲ್ಲಿಕಾರ್ಜುನ್ ಎಂಬುವರಿಗೆ ಕಾರು ಸೇರಿದ್ದಾಗಿದೆ ಎಂದು ತಿಳಿದು ಬಂದಿದೆ. ಕ್ಯಾಬ್ ಚಾಲಕ ಮಲ್ಲಿಕಾರ್ಜುನ್ ಸಂಜೆ ಡ್ಯೂಟಿ ಮುಗಿಸಿ ಮನೆಗೆ ಹೋಗುತ್ತಿದ್ದ, ಈ ವೇಳೆ ಜಾಲಹಳ್ಳಿಯ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಬಳಿ ರಸ್ತೆಯಲ್ಲಿ ನೀರು ಆಟೋ ಮೇಲೆ ಸಿಡಿದಿದೆ. ಇದೇ ವಿಚಾರಕ್ಕೆ ಆಟೋ ಚಾಲಕ ಮತ್ತು ಆತನ ಸ್ನೇಹಿತ ಕಿರಿಕ್ ಮಾಡಿದ್ದರು.
ಹುಬ್ಬಳ್ಳಿ: ತಂದೆಯನ್ನೇ ಕೊಂದ ಪಾಪಿ ಮಗ..!
ಕ್ಯಾಬ್ ಚಾಲಕ ಆಟೋ ತೊಳೆದು ಕೊಡ್ತೀನಿ ಅಂದರು ಈ ಇಬ್ಬರು ಕಿಡಿಕೇಡಿಗಳು ಪುಂಡಾಟ ಮೆರೆದಿದ್ದಾರೆ. ಕಾರಿನ ಮೇಲೆ ಕಲ್ಲು ಎತ್ತಿ ಹಾಕಿ ಗ್ಲಾಸ್ ಒಡೆದಿದ್ದಾರೆ. ಕ್ಯಾಬ್ ಚಾಲಕ ಮಲ್ಲಿಕಾರ್ಜುನ್ ಯಾದಗಿರಿಯ ಮೂಲದನಾಗಿದ್ದು ವಾರದ ಹಿಂದೆ ಬೆಂಗಳೂರಿಗೆ ಬಂದಿದ್ದರು. ಮಲ್ಲಿಕಾರ್ಜುನ್ ಅವರು ಬೆಂಗಳೂರಿನಲ್ಲಿ ಓಲಾ-ಊಬರ್ ಕಾರು ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದರು ಎಂದು ತಿಳಿದು ಬಂದಿದೆ.
ಗುರಾಯಿಸಿ ನೋಡಿದ್ದಕ್ಕೆ ಹೆಲ್ಮೆಟ್‌ನಿಂದ ಹಲ್ಲೆ
ಇನ್ನು ನಗರದಲ್ಲಿ ಇಂತಹದ್ದೇ ಇನ್ನೊಂದು ಘಟನೆ ಸಿಗೆಹಳ್ಳಿ ಬಳಿ ಇಂದು ನಡೆದಿದೆ. ಗುರಾಯಿಸಿ ನೋಡಿದ್ದಕ್ಕೆ ಬೈಕ್ ಸವಾರ ಹೆಲ್ಮೆಟ್‌ನಿಂದ ಹಲ್ಲೆ ನಡೆಸಿದ್ದಾನೆ. ವೀಡಿಯೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸೋಷಿಯಲ್ ಮೀಡಿಯಾದಲ್ಲಿ ಬೆಂಗಳೂರು ಪೋಲಿಸರಿಗೆ ವಿಡಿಯೋ ಟ್ಯಾಗ್ ಮಾಡಿ ಕ್ರಮ ಕೈಗೊಳ್ಳುವಂತೆ ಜನರು ಒತ್ತಾಯಿಸಿದ್ದಾರೆ.