ವಿಜಯಪುರ(ಮಾ.12): ಸಾಮಾಜಿಕ ಜಾಲತಾಣ ವಾಟ್ಸಾಪ್ ಗ್ರೂಪ್‌ನಲ್ಲಿ ಅಪ್ರಾಪ್ತ ಬಾಲಕನೊಬ್ಬ ತನ್ನ ಗುಪ್ತಾಂಗದ ವಿಡಿಯೋವೊಂದನ್ನ ಹರಿಬಿಟ್ಟ ಘಟನೆ ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿ ನಡೆದಿದೆ. 

ಅಪ್ರಾಪ್ತ ಬಾಲಕ ಬಬಲಾದಿ ಮುತ್ಯಾ ಅಭಿಮಾನಿಗಳು ಎಂಬ ಹೆಸರಿನ ಗ್ರೂಪ್‌ನಲ್ಲಿ ತನ್ನ ಗುಪ್ತಾಂಗದ ವಿಡಿಯೋ ಮಾಡಿ ಹರಿಬಿಟ್ಟಿದ್ದಾನೆ. ಜೊತೆಗೆ ಬಬಲಾದಿ ಮಠದ ಶ್ರೀಗಳ ಬಗ್ಗೆ ಅಶ್ಲೀಲ ಮಾತುಗಳನ್ನಾಡಿದ ಆಡಿಯೋವೊಂದನ್ನು ಕೂಡ ಹರಿಬಿಟ್ಟಿದ್ದಾನೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಅಪ್ರಾಪ್ತ ಬಾಲಕನ ಕೃತ್ಯದಿಂದ ಬಬಲಾದಿ ಮಠದ ಭಕ್ತರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಸಬಬಲೇಶ್ವರ ಠಾಣೆ ಪೊಲೀಸರ ಗಮನಕ್ಕೆ ತಂದಿದ್ದಾರೆ. ಪ್ರಕರಣ ಸಂಬಂಧ ಅಪ್ರಾಪ್ತನ ಪೋಷಕರಿಂದ ಪೊಲೀಸರು ಮುಚ್ಚಳಿಕೆ ಬರೆಯಿಸಿಕೊಂಡಿದ್ದಾರೆ.