Asianet Suvarna News Asianet Suvarna News

ಪಶುವೈದ್ಯರಿಗೆ ಖಡಕ್ ವಾರ್ನಿಂಗ್ ಕೊಟ್ಟ ಸಚಿವ ನಾಡಗೌಡ

ರಾಜ್ಯದ ಕೆಲ ಪಶುವೈದ್ಯರು ತಮ್ಮ ವೈದ್ಯ ವೃತ್ತಿ ಬಿಟ್ಟು ಬೇರೆ ಇಲಾಖೆಗಳ ಸೇವೆಗೆ ನಿಯೋಜನೆಗೊಂಡಿದ್ದಾರೆ. ಇದ್ರಿಂದ ಪಶುಸಂಗೋಪನಾ ಹಾಗೂ ಮೀನುಗಾರಿಕೆ ಸಚಿವ ವೆಂಕಟರಾವ್ ನಾಡಗೌಡ ಗರಂ ಆಗಿದ್ದಾರೆ.

Minister Venkatarao Nadagouda warns to veterinary doctors for return his duty
Author
Bengaluru, First Published Dec 9, 2018, 4:49 PM IST

ಗದಗ, [ಡಿ.09]: ಪಶುವೈದ್ಯರು ಕೂಡಲೇ ಮಾತೃ ಇಲಾಖೆಗೆ ಹಾಜರಾಗದಿದ್ರೆ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಪಶುಸಂಗೋಪನಾ ಹಾಗೂ ಮೀನುಗಾರಿಕೆ ಸಚಿವ ವೆಂಕಟರಾವ್ ನಾಡಗೌಡ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಗದಗನಲ್ಲಿ ಇಂದು [ಭಾನುವಾರ] ಸುದ್ದಿಗಾರೊಂದಿಗೆ ಮಾತನಾಡಿದ ಅವರು,  ಕೆಲ ಪಶು ವೈದ್ಯರು ಬೇರೆ ಇಲಾಖೆಗೆ ನಿಯೋಜನೆಗೊಂಡಿದ್ದಾರೆ. ಈಗಾಗಲೇ ಮಾತೃ ಇಲಾಖೆಗೆ ಹಾಜರಾಗುವಂತೆ ಆದೇಶ ಮಾಡಲಾಗಿದೆ ಇನ್ನೂ ಅನೇಕ ವೈದ್ಯರು ಪಶು ಸಂಗೋಪನೆ ಇಲಾಖೆಗೆ ಹಾಜರಾಗಿಲ್ಲ.

ಸಾಕಷ್ಟು ಪಶು ವೈದ್ಯರು ತಾಲೂಕು ಪಂಚಾಯತಿ ಕಾರ್ಯನಿರ್ವಾಹಕರಾಗಿ ಸೇವೆ ಮಾಡುತ್ತಿದ್ದಾರೆ. ಕೂಡಲೇ ಪಶು ಸಂಗೋಪನೆ ಇಲಾಖೆಗೆ ಹಾಜರಾಗದಿದ್ರೆ‌ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ರಾಜ್ಯದ ಕೆಲ ಪಶುವೈದ್ಯರು ತಮ್ಮ ವೈದ್ಯ ವೃತ್ತಿ ಬಿಟ್ಟು ಬೇರೆ ಇಲಾಖೆಗಳ ಸೇವೆಗೆ ನಿಯೋಜನೆಗೊಂಡಿದ್ದಾರೆ. ಇದ್ರಿಂದ ಸಚಿವ ವೆಂಕಟರಾವ್ ನಾಡಗೌಡ ಗರಂ ಆಗಿದ್ದಾರೆ.

Follow Us:
Download App:
  • android
  • ios