ಮೈಸೂರು [ಸೆ.11]: ಮೈಸೂರು ಗ್ರಾಮೀಣ ದಸರಾ ಪೂರ್ವಭಾವಿ ಸಭೆಯಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯನ್ನಾಗಿ ಪರಿವರ್ತಿಸಿದ ಸಚಿವ ವಿ.ಸೋಮಣ್ಣ ಈ ವೇಳೆ ಅಧಿಕಾರಿಗೆ ತೀವ್ರ ತರಾಟೆ ತೆಗೆದುಕೊಂಡರು.

 ಮೈಸೂರಿನ ಹಳೇ ತಿರುಮಕೂಡಲಿನಲ್ಲಿರುವ ಆದಿಚುಂಚನಗಿರಿ ರಜತೋತ್ಸವ ಭವನದಲ್ಲಿ ಗ್ರಾಮೀಣ ದಸರಾ ಆಚರಣೆ ಹಿನ್ನೆಲೆಯಲ್ಲಿ ನಡೆದ ನಡೆದ ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ಗರಂ ಆದರು.

ದಸರಾ ಕ್ರೀಡಾಕೂಟ ಆರಂಭಿಸಿದ್ದೇನೆಯ್ಯಾ ಎಂದು ಕೇಳಿದ್ದಕ್ಕೆ ತಾಲ್ಲೂಕು ಮಟ್ಟದ ಕ್ರೀಡಾಕೂಟ ಪೂರ್ಣಗೊಳಿಸಿದ್ದೇನೆ ಎಂದು ಉತ್ತರಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಸ್ವಾಮಿ ಅವರನ್ನೇ ಕತ್ತೆ ಕಾಯೋಕೆ ಹೋಗು ಎಂದು ಗದರಿಸಿದರು. ಯಾವ ಜಿಲ್ಲೆಯವ ನೀನು, ಅದೇನೂ ಕೆಲಸ ಮಾಡ್ತೀಯಾ ? ಇಲ್ಲ ಮನೆಗೆ ಹೋಗ್ತೀಯಾ, ಬೇರೆ ಯಾರಾದರೂ ಬಂದು ಮಾಡ್ತಾರೆ ಅಂತ ಮೂದಲಿಸಿದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಅಲ್ಲದೆ ಪಕ್ಕದಲ್ಲಿಯೇ ನಿಂತಿದ್ದ ದೈಹಿಕ ಪರಿವೀಕ್ಷಕ ಮಹಾಂತಪ್ಪ ನಾಗೂರ ಅವರನ್ನು ನೀನಾದರೂ ಗ್ರಾಮೀಣ ದಸರಾ ಕ್ರೀಡಾ ಕೂಟ ಆರಂಭಿಸಯ್ಯಾ ಎಂದು ಪ್ರಶ್ನೆ ಮಾಡಿದರು.