ಕೊಪ್ಪಳ(ಫೆ.27): ನಗರದ ಶ್ರೀ ಗವಿಸಿದ್ಧೇಶ್ವರ ಮಠಕ್ಕೆ ಬುಧವಾರ ಭೇಟಿ ನೀಡಿದ ವೇಳೆಯಲ್ಲಿ ಸಿದ್ದಗಂಗಾ ಶಿವಕುಮಾರ ಸ್ವಾಮೀಜಿ ಅವರನ್ನು ನೆನೆದು ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳ ಸಮ್ಮುಖದಲ್ಲಿಯೇ ವಸತಿ ಖಾತೆ ಸಚಿವ ವಿ. ಸೋಮಣ್ಣ ಅವರು ಕಣ್ಣೀರಿಟ್ಟಿದ್ದಾರೆ. 

ದೊರೆಸ್ವಾಮಿ ನಾಲಿಗೆ ಬಿಗಿ ಹಿಡಿದು ಮಾತನಾಡಲಿ: ಸಚಿವ ಸೋಮಣ್ಣ

ಸಂತ ಪರಂಪರೆ ಮತ್ತು ಶರಣರ ಕುರಿತು ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳೊಂದಿಗೆ ಮಾತುಕತೆ ನಡೆಸಿದ್ದರು. ಆ ವೇಳೆಯಲ್ಲಿ ಸಹಜವಾಗಿಯೇ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಕುರಿತು ಚರ್ಚೆ ಬಂದಿತು. ಹೀಗೆ ಅವರ ಹೆಸರು ಪ್ರಸ್ತಾಪವಾಗುತ್ತಿದ್ದಂತೆ ಭಾವುಕರಾದ ವಸತಿ ಖಾತೆ ಸಚಿವ ಸೋಮಣ್ಣ ಅವರು ಕಣ್ಣೀರು ಹಾಕಿದ ಘಟನೆ ನಡೆಯಿತು. 

ಸಂಸದರ ಪುತ್ರನ ಮೇಲೆ ಪ್ರೀತಿ: 

ಕೊಪ್ಪಳಕ್ಕೆ ಆಗಮಿಸಿದ ವಸತಿ ಖಾತೆ ಸಚಿವ ವಿ. ಸೋಮಣ್ಣ ಅವರಿಗೆ ಸನ್ಮಾನ ನೀಡಲಾಯಿತು. ಈ ವೇಳೆಯಲ್ಲಿ ದೂರವೇ ನಿಂತಿದ್ದ ಸಂಸದರ ಪುತ್ರ ಅಮರೇಶ ಕರಡಿ ಅವರನ್ನು ಕರೆದು, ಹೂವಿನ ಹಾರ ಹಾಕಿದರು. ಎರಡು ಕೈಗಳಿಂದ ಕೆನ್ನೆಗಳನ್ನು ಸವರಿದ್ದು ಅಲ್ಲದೆ ಅಪ್ಪಿಕೊಂಡು ಪ್ರೀತಿಯಿಂದ ಹರಸಿದರು. ಹೀಗೆ ಸಚಿವರು ಅಮರೇಶ ಕರಡಿಯ ಮೇಲೆ ತೋರಿದ ಪ್ರೀತಿ ನಾನಾ ಚರ್ಚೆಗೆ ನಾಂದಿಯಾಯಿತು. ಅಲ್ಲಿದ್ದ ಕಾರ್ಯಕರ್ತರು ಅಮರೇಶ ಕರಡಿ ಪರ ಘೋಷಣೆಗಳನ್ನು ಕೂಗಿದ್ದಾರೆ.