ಮೈಸೂರಿಗೆ ನಮ್ಮ ರಾಜಮನೆತನದ ಕೊಡುಗೆ ಅಪಾರ| ನಮ್ಮ ಆಗಿನ ಮೈಸೂರು ರಾಜ್ಯವನ್ನು ಒಂದು ಮಾದರಿಯನ್ನಾಗಿ ರೂಪಿಸುವಲ್ಲಿ ಆಳಿದಂತಹ ಅನೇಕ ರಾಜ ಮಹಾರಾಜರ ಕೊಡುಗೆಗಳಿವೆ| ಮೈಸೂರು ವಿಮಾನ ನಿಲ್ದಾಣಕ್ಕೆ ಜಯಚಾಮರಾಜ ಒಡೆಯರ್‌ ಅವರ ಹೆಸರನ್ನು ನಾಮಕರಣ ಮಾಡಬೇಕು:ಎಸ್‌ಟಿಎಸ್‌| 

ಮೈಸೂರು(ಮಾ.04): ಮೈಸೂರು ವಿಮಾನ ನಿಲ್ದಾಣಕ್ಕೆ ರಾಜವಂಶಸ್ಥ ಜಯಚಾಮರಾಜ ಒಡೆಯರ್‌ ಅವರ ಹೆಸರನ್ನು ನಾಮಕರಣ ಮಾಡುವಂತೆ ಹಾಗೂ ಕರ್ನಾಟಕ ವಿಧಾನಸಭೆಯಲ್ಲಿ ಅವರ ಭಾವಚಿತ್ರವನ್ನು ಅಳವಡಿಸಿ ಗೌರವ ಸೂಚಿಸುವಂತೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹಾಗೂ ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್‌ ಅವರು ಪತ್ರ ಬರೆದು ಮನವಿ ಮಾಡಿದ್ದಾರೆ.

ಮೈಸೂರಿಗೆ ನಮ್ಮ ರಾಜಮನೆತನದ ಕೊಡುಗೆ ಅಪಾರ. ನಮ್ಮ ಆಗಿನ ಮೈಸೂರು ರಾಜ್ಯವನ್ನು ಒಂದು ಮಾದರಿಯನ್ನಾಗಿ ರೂಪಿಸುವಲ್ಲಿ ಆಳಿದಂತಹ ಅನೇಕ ರಾಜ ಮಹಾರಾಜರ ಕೊಡುಗೆಗಳಿವೆ. ಈ ಸಾಲಿನಲ್ಲಿ ನಮ್ಮ ಜಯಚಾಮರಾಜ ಒಡೆಯರ್‌ ಅವರ ಕಾಣಿಕೆ ಸಹ ಇದೆ. ಈ ಹಿನ್ನೆಲೆಯಲ್ಲಿ ಮೈಸೂರು ವಿಮಾನ ನಿಲ್ದಾಣಕ್ಕೆ ಜಯಚಾಮರಾಜ ಒಡೆಯರ್‌ ಅವರ ಹೆಸರನ್ನು ನಾಮಕರಣ ಮಾಡಬೇಕು ಹಾಗೂ ವಿಧಾನಸಭೆಯಲ್ಲಿ ಅವರ ಭಾವಚಿತ್ರವನ್ನು ಅಳವಡಿಸಿ ಗೌರವ ಸೂಚಿಸುವಂತೆ ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್‌ ಅವರು ಸಚಿವರಿಗೆ ಪತ್ರದ ಮೂಲಕ ಕೋರಿದ್ದರು.

ಸಚಿವ ಸೋಮಶೇಖರ್ ಕಾರ್ಯವೈಖರಿಗೆ ರಾಜಮಾತೆ ಪ್ರಮೋದಾ ದೇವಿ ಪ್ರಶಂಸೆ

ಈ ಹಿನ್ನೆಲೆಯಲ್ಲಿ ಕರ್ನಾಟಕ ದೇಶ- ವಿದೇಶದಲ್ಲಿ ಹೆಸರುಗಳಿಸಲು ಮೈಸೂರು ಹಾಗೂ ಮಹಾರಾಜರ ಕೊಡುಗೆ ಅಪಾರವಾಗಿದೆ. ಜೊತೆಗೆ ಸ್ವತಃ ರಾಜವಂಶಸ್ಥರೇ ಪತ್ರ ಬರೆದು ಕೋರಿದ್ದು, ಅವರಿಗೆ ಗೌರವ ಸೂಚಿಸುವುದು ನಮ್ಮ ಕರ್ತವ್ಯವಾಗಿದೆ. ಈ ಹಿನ್ನೆಲೆಯಲ್ಲಿ ವಿಧಾನಸೌಧದಲ್ಲಿ ಶ್ರೀ ಜಯಚಾಮರಾಜ ಒಡೆಯರ್‌ ಭಾವಚಿತ್ರವನ್ನು ಅಳವಡಿಸುವಂತೆ ವಿಧಾನಸಭಾಧ್ಯಕ್ಷರಿಗೆ ಸಚಿವರು ಪತ್ರ ಬರೆದು ಕೋರಿದ್ದಾರೆ. ಅಲ್ಲದೆ, ಮೈಸೂರು ವಿಮಾನ ನಿಲ್ದಾಣಕ್ಕೆ ಶ್ರೀ ಜಯಚಾಮರಾಜ ಒಡೆಯರ್‌ ಅವರ ಹೆಸರನ್ನು ನಾಮಕರಣ ಮಾಡಲು ಸೂಕ್ತ ಕ್ರಮ ವಹಿಸುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.