Asianet Suvarna News Asianet Suvarna News

ಪ್ರಾಣಿಗಳಿಗೂ ಕೊರೋನಾ ಆತಂಕ: ಸಚಿವ ಸೋಮಶೇಖರ್ ಖುದ್ದು ಮೈಸೂರು ಝೂಗೆ ಭೇಟಿ

* ಪ್ರಾಣಿಗಳಿಗೂ ಕೊರೋನಾ ಸೋಂಕು ಆತಂಕ ಹಿನ್ನೆಲೆಯಲ್ಲಿ ಮೈಸೂರು ಝೂನಲ್ಲಿ ಕಟ್ಟೆಚ್ಚರ
* ಮೈಸೂರು ಮೃಗಾಲಯಕ್ಕೆ ಸಚಿವ ಎಸ್ ಟಿ ಸೋಮಶೇಖರ್ ಭೇಟಿ
* ಖುದ್ದು ಭೇಟಿ ನೀಡಿ ಸಮಸ್ಯೆ ಬಗ್ಗೆ ಮಾಹಿತಿ ಪಡೆದ ಸಚಿವರು.

Minister ST Somashekar Visits Mysuru zoo Over Corona rbj
Author
Bengaluru, First Published May 11, 2021, 5:53 PM IST

ಮೈಸೂರು, (ಮೇ.11): ಹೈದರಾಬಾದ್‌ನ ನೆಹರು ಮೃಗಾಲಯದ 8 ಸಿಂಹಗಳಿಗೆ ಕೊರೋನಾ ಸೋಂಕು ತಗುಲಿರುವುದು ಖಚಿತಪಡುತ್ತಿದ್ದಂತೆ ಮೈಸೂರು ಮೃಗಾಲಯಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

ಖುದ್ದು ಈ ಬಗ್ಗೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್ ಅವರು ಚಾಮರಾಜೇಂದ್ರ ಮೃಗಾಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಮೃಗಾಲಯದ ಪ್ರಾಣಿಗಳಿಗೆ ಸೋಂಕು ತಗುಲಿಲ್ಲ ಎಂದು ಸ್ಪಷ್ಟಪಡಿಸಿದರು.

ಸಿಂಹಗಳಿಗೂ ವಕ್ಕರಿಸಿದ ಸೋಂಕು: ರಾಜ್ಯದ ಝೂಗಳಲ್ಲಿ ಕೊರೋನಾ ಹೈ ಅಲರ್ಟ್‌

ಮೈಸೂರು ಮೃಗಾಲಯಕ್ಕೆ ಆರ್ಥಿಕ ಸಂಕಷ್ಟ ಹಿನ್ನಲೆಯಲ್ಲಿ ಪ್ರಾಣಿಗಳನ್ನ ಒಂದು ವರ್ಷಕ್ಕೆ ದತ್ತು ಪಡೆದುಕೊಂಡವರಲ್ಲಿ ಮತ್ತೆ ಮನವಿ ಮಾಡಿರುವ ಸಚಿವರು,  ಇನ್ನೊಂದು ವರ್ಷಕ್ಕೆ ದತ್ತು ಮುಂದುವರೆಸುವಂತೆ ಕೇಳಿಕೊಂಡಿದ್ದು,  ಇದರಿಂದ ಕೊಂಚ ಆರ್ಥಿಕ ಸಂಕಷ್ಟ ನಿವಾರಣೆ ಆಗಲಿದೆ. ಜನರು ಕೂಡ ಇದಕ್ಕೆ ಕೈ ಜೋಡಿಸಬೇಕು ಎಂದರು.

ಪ್ರಾಣಿಗಳಿಗೆ ಸೋಂಕು ತಗುಲಿಲ್ಲ
ರಾಜ್ಯದ ಯಾವುದೇ ಮೃಗಾಲಯದ ಪ್ರಾಣಿಗಳಿಗೆ ಸೋಂಕು ತಗುಲಿಲ್ಲ ಎಂದು ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ.ರವಿ ಎಂದು ಹೇಳಿದರು.

ನಮ್ಮಲ್ಲಿ 5 ಮೃಗಾಲಯದಲ್ಲಿ ಸಿಂಹ, ಚಿರತೆ ಹುಲಿಗಳಿವೆ. ಆ ಪ್ರಾಣಿಗಳಿಗೆ ಮಾತ್ರ ಕೊರೋನಾ ತಗುಲುವ ಸಾಧ್ಯತೆ ಇದೆ. ಆದ್ರೆ ಯಾವುದೇ ಪ್ರಾಣಿಗಳಿಗೆ ಸೋಂಕಿನ ಲಕ್ಷಣ ಕಾಣಿಸಿಲ್ಲ. ನಾವು ಕೇಂದ್ರದ ಎಲ್ಲ ಮಾರ್ಗಸೂಚಿ ಅನುಸಿರಿಸಿದ್ದೇವೆ ಎಂದು ಮಾಹಿತಿ ವಿವರಿಸಿದರು.

ಸೋಂಕು ತಗುಲಿದ ಪ್ರಾಣಿಗಳಿಗೆ ಕೆಮ್ಮು ಬರುತ್ತೆ. ನಂತರ ಊಟ ಬಿಡುತ್ತವೆ. ನಮ್ಮಲ್ಲಿ ಆ ರೀತಿಯ ಸಮಸ್ಯೆ ಇರುವ ಯಾವುದೇ ಪ್ರಾಣಿಗಳು ಇಲ್ಲ.
ಬಹುಶಃ ಹೈದರಾಬಾದ್ ಮೃಗಾಲಯದಲ್ಲಿ Asymptomatic ಕೀಪರ್ ನಿಂದ ಸೋಂಕು ಬಂದಿರಬಹುದು. ಅಲ್ಲಿನ ಪ್ರಾಣಿಗಳಿಗೆ ಬೂಸ್ಟರ್ ಕೊಡ್ತಾರೆ. ನಾವು ಆ ರೀತಿಯ ಸಮಸ್ಯೆ ಆದ್ರೆ ನೀರಿನಲ್ಲಿ ಬೂಸ್ಟರ್ ಕೊಡುತ್ತೇವೆ. ಸದಸ್ಯಕ್ಕೆ ಕೊರೋನಾ ಆತಂಕ ರಾಜ್ಯದ ಮೃಗಾಲಯದ ಪ್ರಾಣಿಗಳಿಗೆ ಇಲ್ಲ ಎಂದು ತಿಳಿಸಿದರು.

Follow Us:
Download App:
  • android
  • ios