ಅನೈತಿಕ ಸಂಬಂಧ ಎಂದು ಸಿದ್ದರಾಮಯ್ಯ ಹೀಗೆ ಮಾಡಲು ಹೊರಟಿದ್ದಾರೆ. ಅಲ್ಲೀಗ ಮೂರು ಬಾಗಿಲಾಗಿದೆ. ಅದನ್ನು ಸರಿಪಡಿಸಿಕೊಳ್ಳಲಿ ಎಂದು ಮುಖಂಡರೊರ್ವರು ಹೇಳಿದ್ದಾರೆ. 

ಚಿತ್ರದುರ್ಗ(ಜ.17): ‘ಕಾಂಗ್ರೆಸ್‌ನ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆಗೆ ಸಿಎಂ ಸ್ಥಾನ ತಪ್ಪಿಸಿ, ಮಾಜಿ ಪ್ರಧಾನಿ ಎಚ್‌.ಡಿ.ದೇವೆಗೌಡರನ್ನು ಸಂಸತ್‌ ಚುನಾವಣೆ ವೇಳೆ ಬೆಂಬಲ ನೀಡುವುದಾಗಿ ಹೇಳಿ ಸೋಲಿಸಿದ, ಮೈತ್ರಿ ಸರ್ಕಾರಕ್ಕೆ ಬೆಂಬಲ ನೀಡಿ ಬಳಿಕ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಕೆಳಗಿಳಿಸಿದವರು ಈಗ ಬಗ್ಗೆ ಮಾತನಾಡುತ್ತಾರೆ’

-ಇದು ‘ಬಿಜೆಪಿಯದ್ದು ಅನೈತಿಕ ಸರ್ಕಾರ’ ಎಂಬ ವಿಪಕ್ಷ ನಾಯಕ ಸಿದ್ಧರಾಮಯ್ಯ ಅವರ ನೀಡಿದ್ದ ಹೇಳಿಕೆಗೆ ಸಚಿವ ಬಿ.ಶ್ರೀರಾಮುಲು ನೀಡಿರುವ ತಿರುಗೇಟು. ಬಿಜೆಪಿಯದ್ದು ಅನೈತಿಕ ಸಂಬಂಧದ ಸರ್ಕಾರ ಎಂದು ಹೇಳಿ ಸಿದ್ದರಾಮಯ್ಯ ಮೇಷ್ಟ್ರ ಆಗಲು ಹೊರಟಿದ್ದಾರೆ. ಹಾಗೆ ಹೇಳಲು ಅವರಿಗೆ ಕ್ವಾಲಿಫಿಕೇಷನ್‌ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಿದ್ದರಾಮಯ್ಯ ನಾಲಿಗೆ ಮೇಲೆ ಬಿಗಿ ಹಿಡಿದು ಮಾತನಾಡ್ಬೇಕು: ಸಚಿವ ಶ್ರೀರಾಮುಲು

ಈಗಾಗಲೇ ಕಾಂಗ್ರೆಸ್‌ ಪಕ್ಷ ಮೂರು ಬಾಗಿಲಾಗಿದೆ. ಮೊದಲು ಅವರ ಮನೆ ಸರಿಪಡಿಸಿಕೊಳ್ಳಲಿ. ಅಧಿಕಾರ ಕಳೆದುಕೊಂಡು ಮತಿ ಭ್ರಮಣೆ ಆಗಿ ಈ ರೀತಿ ಮಾತನಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.