*   ನಾವು ನಗರದ ಸ್ವಚ್ಛತೆ ಹಾಗೂ ಅಭಿವೃದ್ಧಿಗೆ ಸದಾ ಸಿದ್ದರಿದ್ದೇವೆ *   ಪಾಲಿಕೆಯಲ್ಲೂ ಬಿಜೆಪಿ ಅಧಿಕಾರ ನಿಶ್ಚಿತ *   ಪಕ್ಷದ ಕಾರ್ಯಲಯದಲ್ಲಿ ಆಯೋಜಿಸಿದ್ದ ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮ 

ಧಾರವಾಡ(ಆ.26): ದೇಶಕ್ಕಾಗಿ ದುಡಿಯುತ್ತಿರುವ ಏಕೈಕ ಪಕ್ಷ ಬಿಜೆಪಿ ಎಂದು ಕೈಮಗ್ಗ, ಜವಳಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಹೇಳಿದ್ದಾರೆ. 

ಪಕ್ಷದ ಕಾರ್ಯಲಯದಲ್ಲಿ ಬುಧವಾರ ಆಯೋಜಿಸಿದ್ದ ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಆಡಳಿತ ನಡೆಸುತ್ತಿದ್ದು ಪಾಲಿಕೆಯಲ್ಲೂ ಬಿಜೆಪಿ ಅಧಿಕಾರ ನಿಶ್ಚಿತ ಎಂದರು.

ಹುಬ್ಬಳ್ಳಿ -ಧಾರವಾಡ ಹೈಟೆಕ್‌ ಸಿಟಿ ಮಾಡಲು ಜೆಡಿಎಸ್‌ಗೆ ಮತ ನೀಡಿ: ಎಚ್‌ಡಿಕೆ

ಶಾಸಕ ಅಮೃತ ದೇಸಾಯಿ ಮಾತನಾಡಿ, ಪಾಲಿಕೆಯ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗಳಿಗೆ ಬಹುಮತದಿಂದ ಗೆಲ್ಲಿಸಿದರೆ ಮೊದಲಿನ ಹಾಗೆ ನಾವು ನಗರದ ಸ್ವಚ್ಛತೆ ಹಾಗೂ ಅಭಿವೃದ್ಧಿಗೆ ಸದಾ ಸಿದ್ದರಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಅನೇಕರು ಪಕ್ಷಕ್ಕೆ ಸೇರ್ಪಡೆಗೊಂಡರು. ಈರೇಶ ಅಂಚಟಗೇರಿ, ಟಿ.ಎಸ್‌. ಪಾಟೀಲ, ಸುನೀಲ ಮೊರೆ, ಬಸವರಾಜ ಪಳೋಟಿ, ಶೇಖರ ಕವಳಿ ಹಾಗೂ ಜಿಲ್ಲಾ ಬಣಜಿಗ ಸಂಘದ ಅಧ್ಯಕ್ಷರು, ಮಲ್ಲೇಶಪ್ಪ ಕಾಟೆಕಾರ, ಎ.ಎಚ್‌. ಗೊರಮಕೋಳ, ಪ್ರವೀಣ ಜೋಶಿ, ರಾಜು ತೆಳಗೇರಿ, ವಿಠಲ ಘೋಡ್ಸೆ, ಪ್ರದೀಪ ಸಂಕೋಜಿ ಮತ್ತು ಪಕ್ಷದ ಪದಾಧಿಕಾರಿಗಳು ಇದ್ದರು.