ಬೆಳಗಾವಿ(ಏ.10): ಜಿಲ್ಲಾ ಉಸ್ತುವಾರಿ ವಿಚಾರದಲ್ಲಿ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿಗೆ ಮತ್ತೊಮ್ಮೆ ನಿರಾಸೆಯಾಗಿದೆ. ರಮೇಶ್ ಜಾರಕಿಹೊಳಿಗೆ ಬೆಳಗಾವಿ ಜಿಲ್ಲಾ ಉಸ್ತುವಾರಿ ನೀಡೋದಿಲ್ಲ ಎಂಬುದು ಈ ಮೊದಲೇ ಖಾತ್ರಿ ಆಗಿತ್ತು ಎನ್ನಲಾಗಿದೆ.

ಒಂದು ವೇಳೆ ರಮೇಶ್ ಜಾರಕಿಹೊಳಿಗೆ ಜಿಲ್ಲಾ ಉಸ್ತುವಾರಿ ಕೊಟ್ಟಿದ್ದರೆ ಉಮೇಶ್ ಕತ್ತಿ ಹಾಗೂ ಜಾರಕಿಹೊಳಿ ನಡುವೆ ಶೀತಲ ಸಮರಕ್ಕೆ ಕಾರಣವಾಗಬಹುದು ಎಂದು ಅರಿತಿದ್ದ ಸಿಎಂ ಯಡಿಯೂರಪ್ಪ ಜಗದೀಶ್ ಶೆಟ್ಟರ್ ಅವರನ್ನೆ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಮುಂದುವರಿಸಲು ತೀರ್ಮಾನಿಸಿದ್ದಾರೆ. ಅದರಂತೆ ಈಗ ರಮೇಶ್ ಜಾರಕಿಹೊಳಿಗೆ ಯಾವುದೇ ಜಿಲ್ಲೆಯ ಉಸ್ತುವಾರಿ ಸ್ಥಾನಮಾನವನ್ನ ನೀಡಿಲ್ಲ.

ಇದೆಲ್ಲದರ ನಡುವೆ ಜಗದೀಶ್ ಶೆಟ್ಟರ್ ಜವಾಬ್ದಾರಿ ಆಶ್ಚರ್ಯ ಮೂಡಿಸಿದೆ. ಬೆಳಗಾವಿ ಜಿಲ್ಲೆಯ ಉಸ್ತುವಾರಿ ಸಚಿವರಾಗಿರುವ ಜಗದೀಶ್ ಶೆಟ್ಟರ್ ಅವರು ಹೆಚ್ಚುವರಿಯಾಗಿ ಧಾರವಾಡ ಜಿಲ್ಲೆಯ ನಿಭಾಯಿಸುತ್ತಿದ್ದಾರೆ. ಮೊದಲು ಧಾರವಾಡ ಜಿಲ್ಲೆಯ ಜೊತೆಗೆ ಹೆಚ್ಚುವರಿಯಾಗಿ ಬೆಳಗಾವಿ ಜಿಲ್ಲೆಯ ಜವಾಬ್ದಾರಿ ವಹಿಸಲಾಗಿತ್ತು. ಇದೀಗ ಜಗದೀಶ್‌ ಶೆಟ್ಟರ್ ಅವರೇ ಬೆಳಗಾವಿ, ಧಾರವಾಡ ಜಿಲ್ಲೆ ಉಸ್ತುವಾರಿ ಸಚಿವರಾಗಿ ಮುಂದುವರೆದಿದ್ದಾರೆ. ಈ ಮೂಲಕ ಇಬ್ಬರ ಜಗಳ ಮೂರನೇಯವರಿಗೆ ಲಾಭ ಎಂಬತ್ತಾಗಿದೆ ಬೆಳಗಾವಿ ಜಿಲ್ಲೆಯ ಕಥೆ.

'ಸರ್ಕಾರದ ಪರಿಹಾರ ಸಾಮಾಗ್ರಿ ಮೇಲೆ ಬಿಜೆಪಿ ನಾಯಕರ ಫೋಟೋ ಹಾಕಲು ಮೋದಿ ಸೂಚಿಸಿದರೇ'?

ಸಿಎಂ ಯಡಿಯೂರಪ್ಪ ಬಳಿ ರಮೇಶ್ ಜಾರಕಿಹೊಳಿ ಬೆಳಗಾವಿ ಜಿಲ್ಲಾ ಉಸ್ತುವರಿಗಾಗಿ ಬೇಡಿಕೆ ಇಟ್ಟಿದ್ದರು. ಆದರೆ ಡಿಸಿಎಂ ಲಕ್ಷ್ಮಣ ಸವದಿ ಕೂಡ ಬೆಳಗಾವಿಗಾಗಿ ಬಹಳಷ್ಟು ಕಸರತ್ತು ನಡೆಸಿದ್ದರು. ಇಬ್ಬರು ನಾಯಕರೂ ಕೂಡ ಸಾಕಷ್ಟು ಪಟ್ಟು ಹಿಡಿದ್ದರು. ಇದ್ರ ನಡುವೆ ಉಮೇಶ್ ಕತ್ತಿ ಸಹ ಮಂತ್ರಿ ಅದ್ರೆ ಅವರಿಗೂ ಸಹ ಉಸ್ತುವಾರಿಗೆ ಪಟ್ಟು ಹಿಡಿತಾರೆ ಎಂಬ ದೃಷ್ಟಿಯಿಮದ ಮತ್ತೆ ಗೊಂದಲ ಸೃಷ್ಟಿಸೊದು ಬೇಡ ಎಂದು ಬೆಳಗಾವಿ ಉಸ್ತುವರಿ ಜವಾಬ್ದಾರಿ ಜಗದೀಶ್ ಶೆಟ್ಟರ್ ಬಳಿಯೇ ಸಿಎಂ ಯಡಿಯುರಪ್ಪ ಇರಿಸಿದ್ದಾರೆ. 

ಡಿಸಿಎಂ ಲಕ್ಷ್ಮಣ ಸವದಿ ಈ ಮೊದಲು ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು.ಆದರೆ, ಇದೀಗಾ ಬಳ್ಳಾರಿಗೆ ಆನಂದ್‌ಸಿಂಗ್ ಅವರನ್ನು ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಲಾಗಿದೆ. ರಾಯಚೂರು ಜಿಲ್ಲಾ ಉಸ್ತುವಾರಿಯಾಗಿ ಡಿಸಿಎಂ ಲಕ್ಷ್ಮಣ ಸವದಿ ನೇಮಕವಾಗಿದ್ದಾರೆ.