ಅಭಿವೃದ್ಧಿ ಭರವಸೆ ಈಡೇರಿಸಿದ ತೃಪ್ತಿ ಇದೆ: ಸಚಿವ ಮುರುಗೇಶ ನಿರಾಣಿ

ಬೀಳಗಿ ಮತಕ್ಷೇತ್ರದ ಬಾದಾಮಿ ತಾಲೂಕಿನ ಕೆರಕಲಮಟ್ಟಿಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ .500 ಲಕ್ಷ ವೆಚ್ಚದ ಸಂಕೇಶ್ವರ-ಕೂಡಲಸಂಗಮ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಚಾಲನೆ ನೀಡಿದ ಸಚಿವ ಡಾ.ಮುರುಗೇಶ ನಿರಾಣಿ 

Minister Murugesh Nirani Talks Over Development Works at Bilagi in Bagalkot grg

ಕೆರೂರ(ಡಿ.11): ವ್ಯವಸಾಯಕ್ಕೆ ನೀರು, ನೀರುದ್ಯೋಗಿಗಳಿಗೆ ಉದ್ಯೋಗ ಸೃಷ್ಟಿ, ಸದೃಢ ಆರೋಗ್ಯ, ಶೈಕ್ಷಣಿಕ ಉತ್ತೇಜನ ಸೇರಿ ಮೂಲ ಸೌಲಭ್ಯಗಳನ್ನು ಒದಗಿಸಲು ಹಗಲಿರುಳು ದುಡಿಯುತ್ತಿರುವ ನನಗೆ ನಾಗರಿಕರ ಸಹಕಾರ ಒಂದಿದ್ದರೆ ಸಾಕು ಎಂದು ಕೈಗಾರಿಕಾ ಸಚಿವ ಡಾ.ಮುರುಗೇಶ ನಿರಾಣಿ ಹೇಳಿದರು.

ಶುಕ್ರವಾರ ಬೀಳಗಿ ಮತಕ್ಷೇತ್ರದ ಬಾದಾಮಿ ತಾಲೂಕಿನ ಕೆರಕಲಮಟ್ಟಿ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ .500 ಲಕ್ಷ ವೆಚ್ಚದ ಸಂಕೇಶ್ವರ-ಕೂಡಲಸಂಗಮ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಬೀಳಗಿ ಕ್ಷೇತ್ರದಲ್ಲಿ ಎಲ್ಲ ನೀರಾವರಿ ಯೋಜನೆಗಳ ಕಾರ್ಯ ಪ್ರಗತಿಯಲ್ಲಿದೆ. ಸಾರಿಗೆ ಸಂಪರ್ಕ ಸುಗಮವಾಗಲು ರಸ್ತೆಗಳ ಸುಧಾರಣೆ, ನವೀನ ರಸ್ತೆ ಕಾಮಗಾರಿಗಳಿಗೆ ಆದ್ಯತೆ ನೀಡಲಾಗಿದೆ. ಕ್ಷೇತ್ರದಲ್ಲಿ ವಿಮಾನ ನಿಲ್ದಾಣ ಸ್ಥಾಪನೆಯಾಗಬೇಕು. ಸೈಕಲ್‌ನಿಂದ-ವಿಮಾನದವರೆಗೆ ಎಲ್ಲ ಉಪಕರಣಗಳ ತಯಾರಿಕೆಯ ಉದ್ಯಮಗಳ ಸ್ಥಾಪನೆ ಕ್ಷೇತ್ರದಲ್ಲಾಗಬೇಕು. ಟೆಕ್ಸಟೈಲ್ಸ್‌ ಉದ್ಯಮವನ್ನು ಕ್ಷೇತ್ರದಲ್ಲಿ ಪ್ರಾರಂಭಿಸಬೇಕು ಎಂಬ ಕನಸನ್ನು ನಾನು ಹೊಂದಿದ್ದು, ಈ ಎಲ್ಲ ಯೋಜನೆಗಳು ಜಾರಿಗೊಂಡರೆ ನಿರುದ್ಯೋಗ ಸಮಸ್ಯೆಗೆ ಪರಿಹಾರ ಸಿಗಲಿದೆ. ಇದಲ್ಲದೇ, ಎಂಆರ್‌ಎನ್‌ ¶ೌಂಡೇಶನ್‌ ಮೂಲಕ ಕರಕುಶಲ, ಕೈಗಾರಿಕೆ ತರಬೇತಿ ಹಾಗೂ ಐಎಎಸ್‌, ಐಪಿಎಸ್‌ ಪರೀಕ್ಷೆಗಳಿಗೆ ಉಚಿತ ತರಬೇತಿ ಸೇರಿದಂತೆ ಸಾಮಾಜಿಕ ಸೇವೆಗಳಲ್ಲಿ ನನ್ನ ಕುಟುಂಬವೇ ಸೇವೆ ಸಲ್ಲಿಸುತ್ತಿದೆ. ಕ್ಷೇತ್ರದಲ್ಲಿ ಕೈಗೊಂಡಿರುವ ಎಲ್ಲ ಅಭಿವೃದ್ಧಿ ಕಾರ್ಯಗಳಿಗೆ ಬಿಜೆಪಿ ಕಾರ್ಯಕರ್ತರ, ಜನಪ್ರತಿನಿ​ಗಳ, ಆಯಾ ಭಾಗದ ಧುರೀಣರ ಸ್ನೇಹಿತರ ಬೆಂಬಲ ಅಭೂತರ್ಪೂವಾಗಿ ದೊರೆತಿದೆ ಎಂದರು.

ಕರ್ನಾಟಕದಲ್ಲೂ ಯುವಕರಿಗೆ ಮನ್ನಣೆ ಹೈಕಮಾಂಡ್‌ಗೆ ಬಿಟ್ಟದ್ದು: ಸಚಿವ ಭೈರತಿ

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಹೂವಪ್ಪ ರಾಠೋಡ ಮಾತನಾಡಿ, ಮುರುಗೇಶ ನಿರಾಣಿ ಅಧಿ​ಕಾರದ ಅವ​ಧಿ ಬೀಳಗಿ ಮತಕ್ಷೇತ್ರದ ಅಭಿವೃದ್ಧಿ ಪರ್ವವಾಗಿದೆ ಎಂದರು. ಹನಮಂತಗೌಡ ಪಾಟೀಲ, ಕೃಷ್ಣಗೌಡ ನಾಡಗೌಡ್ರ, ಸಂಗಯ್ಯ ಸರಗಣಾಚಾರಿ, ಸಿದ್ದಣ್ಣ ಅಂಗಡಿ, ಹನಮಂತಗೌಡ ಪಾಟೀಲ, (ಹೊಸಕೋಟಿ), ಮಲ್ಲಿಕಾರ್ಜುನ ಕಡಿವಾಲ, ದುಂಡಪ್ಪ ದಾಸರ, ಕಾಮಣ್ಣ ಕಬಾಡದ, ಗುತ್ತಿಗೆದಾರರಾದ ನಾಗರಾಜ ಕಂಕಾಳೆ, ನೂರಸಾಬ್‌ ಡಾಂಗೆ, ಚಿದಗಾನಂದ ಹಿರೇಮಠ, ಭೀಮಪ್ಪ ಜೋಗನ್ನವರ, ಹನಮಂತ ಗೋಡಿ, ತಹಶೀಲ್ದಾರ ಜೆ,ಬಿ,ಮಜ್ಜಗಿ, ಉಪತಹಶೀಲ್ದಾರ ರಾಜಶೇಖರ ಸಾತಿಹಾಳ, ಕಾರ್ಯನಿರ್ವಾಹಕ ಅಭಿಯಂತರರಾದ ನಾರಾಯಣ ಕುಲಕರ್ಣಿ, ಶ್ರೀಕಾಂತ ಹಿರೇಗೌಡ್ರ, ಮೇಟಿ, ಶಾಸ್ತಿ್ರ ಸೇರಿದಂತೆ ಅನೇಕರಿದ್ದರು.

ವಿಮಾನ ನಿಲ್ದಾಣ ಖಚಿತ

ಹಲಕುರ್ಕಿ ಪ್ರದೇಶದಲ್ಲಿ ಗುರುತಿಸಲಾದ ಜಮೀನು ಸ್ವಾ​ಧೀನಕ್ಕೆ 850 ಎಕರೆ ಜಮೀನು ಕೊಡಲು ರೈತರ ಅನುಮತಿ ಸಿಕ್ಕಿದ್ದು, 550 ಎಕರೆ ಸರ್ಕಾರಿ ಜಮೀನು ಇದೆ. ಇನ್ನುಳಿದ ರೈತರ ಮನವೊಲಿಸಿ, ಅವರ ಒಪ್ಪಿಗೆಯನ್ನು ಪಡೆದು ಅಲ್ಲಿ ವಿಮಾನ ನಿಲ್ದಾಣ ಹಾಗೂ ಟೆಕ್ಸ್‌ಟೈಲ್‌ ಉದ್ಯಮ ಸೇರಿ ವಿವಿಧ ಉಪಕರಣಗಳ ತಯಾರಿಕೆಯ ಉದ್ಯಮಗಳನ್ನು ಸ್ಥಾಪಿಸುವುದು ಖಚಿತವೆಂದು ಇದೇ ಸಂದರ್ಭದಲ್ಲಿ ಸಚಿವ ಡಾ.ಮುರುಗೇಶ ನಿರಾಣಿ ಸ್ಪಷ್ಟಪಡಿಸಿದರು.

ಕೈನಕಟ್ಟಿಏತ ನೀರಾವರಿ ಕಾಮಗಾರಿ ಶೀಘ್ರ ಪ್ರಾರಂಭ:

ಕೈನಕಟ್ಟಿ ಏತ ನೀರಾವರಿ ವಿಳಂಬ ಕುರಿತು ಪ್ರಶ್ನಿಸಿದ ಪತ್ರಕರ್ತರಿಗೆ, ಕೆಲ ರೈತರ ತಕರಾರಿನಿಂದ ವಿಳಂಬವಾಗಿತ್ತು. ಈಗ ಅದು ಬಗೆಹರಿದಿದೆ. ಶೀಘ್ರವೇ ಕಾಮಗಾರಿ ಪ್ರಾರಂಭವಾಗುತ್ತದೆ. ಅನವಾಲ ಏತ ನೀರಾವರಿ ಯೋಜನೆ ಆರಂಭಿಸುವ ನಿಟ್ಟಿನಲ್ಲಿ ಎಲ್ಲ ಕಾರ್ಯಗಳು ಚುರುಕು ಪಡೆದಿವೆ. ಡಿಸೆಂಬರ್‌ ಕೊನೆಯ ವಾರದಲ್ಲಿ ಯೋಜನೆಗೆ ಚಾಲನೆ ನೀಡಲಾಗುವುದು. ಇಲ್ಲಿಯವರೆಗೆ ನಾನು ಭರವಸೆ ನೀಡಿದಂತೆ ಎಲ್ಲ ಕಾರ್ಯಗಳನ್ನು ಕ್ಷೇತ್ರಕ್ಕೆ ಒದಗಿಸಿದ ತೃಪ್ತಿ ನನಗಿದ್ದು, ಇಡೀ ರಾಜ್ಯದಲ್ಲಿ ಈ ಕ್ಷೇತ್ರವನ್ನು ಮಾದರಿಯಾಗಿಸುತ್ತೇನೆ ಎಂದರು.
 

Latest Videos
Follow Us:
Download App:
  • android
  • ios