Asianet Suvarna News Asianet Suvarna News

ಅಂದು ನನ್ನನ್ನು ಬಿಜೆಪಿಗೆ ಕರೆದಿದ್ದರು ಎಂದ ಕೈ ಶಾಸಕಗೆ ಈಗ ಮತ್ತೆ ಆಹ್ವಾನ

  • ಅವರೆಲ್ಲಾ ಕಾಂಗ್ರೆಸ್ ಬಿಟ್ಟು ಹೊಗುವಾಗ ನನ್ನನ್ನು ಕರೆದರು ನಾನು ಹೋಗಲಿಲ್ಲ 
  • ಅವರು ಕರೆದಾಗ ನಾನು ಒಂದು ವೇಳೆ ಕಾಂಗ್ರೆಸ್ ಬಿಟ್ಟು ಹೋಗಿದ್ದರೆ  ಈಗ ನಾನು ಸಹ ಮಂತ್ರಿಯಾಗಿರುತ್ತಿದ್ದೆ
Minister Muniratna invite Congress MLA KY nanjegowda to BJP snr
Author
Bengaluru, First Published Aug 27, 2021, 4:00 PM IST
  • Facebook
  • Twitter
  • Whatsapp

ಮಾಲೂರು (ಆ.27): ನಾನು ಮೊದಲ ಬಾರಿಗೆ ಶಾಸಕನಾಗಿ ವಿಧಾನ ಸೌಧಕ್ಕೆ ಹೋಗಿದ್ದಾಗ ಭೈರತಿ ಹಾಗು ಸೋಮಶೇಖರ್ ಅವರ ಗುಂಪು ಹೆಚ್ಚು ಪರಿಣಾಮಕಾರಿಯಾಗಿ ಭಲವಾಗಿ ಇತ್ತು ಎಂದು ಕೈ ಶಾಸಕ ಕೆ ವೈ ನಂಜೇಗೌಡ ಹೇಳಿದರು. 

ಅವರ ಜೊತೆ ಇರಬೇಕು ಎಂದು ನಿರ್ಧರಿಸಿ ನಾನು ಸಹ ಅವರ ಜತೆ ಇದ್ದೆ. ಆದರೆ ಅವರೆಲ್ಲಾ ಕಾಂಗ್ರೆಸ್ ಬಿಟ್ಟು ಹೊಗುವಾಗ ನನ್ನನ್ನು ಕರೆದರು ನಾನು ಹೋಗಲಿಲ್ಲ ಎಂದು  ಮಾಲೂರು ಕಟ್ಟಡ ಉದ್ಘಾಟನಾ ಕಾರ್ಯಕ್ರಮ ಒಂದರಲ್ಲಿ ಗುರುವಾರ ಮಾತನಾಡುತ್ತಾ ಈ ಬಗ್ಗೆ ತಿಳಿಸಿದರು. 

ಖಾತೆ ಸಿಕ್ಕ ಬೆನ್ನಲ್ಲೇ ಕ್ಯಾತೆ ತೆಗೆದವರಿಗೆ ಮುನಿರತ್ನ ಟಾಂಗ್

ಅವರು ಕರೆದಾಗ ನಾನು ಒಂದು ವೇಳೆ ಕಾಂಗ್ರೆಸ್ ಬಿಟ್ಟು ಹೋಗಿದ್ದರೆ  ಈಗ ನಾನು ಸಹ ಮಂತ್ರಿಯಾಗಿರುತ್ತಿದ್ದೆ ಎಂದು ನಂಜೇಗೌಡ ಹೇಳಿದರು. 

ಈಗಲೂ ನನ್ನನ್ನು ಅನ್ಯ ಪಕ್ಷದವನೆಂದು ಭಾವಿಸದೇ ತಾಲೂಕಿನ  ಅಭಿವೃದ್ಧಿ ಕಾಮಗಾರಿಗೆ ಮಂಜೂರಾತಿ ನೀಡಬೇಕೆಂದು ಸಚಿವರಿಗೆ ಮನವಿ ಮಾಡಿದರು. ಶಾಸಕರ ಮಾತಿಗೆ ಸ್ಪಂದಿಸಿದ ಉಸ್ತುವಾರಿ ಸಚಿವ ಮುನಿರತ್ನ ಅವರು ಆಗಿನ ತಪ್ಪು ಈಗ ಮಾಡದೇ ನಮ್ಮ ಜೊತೆ ಬನ್ನಿ. ಯಾವುದೇ ಯೋಚನೆ ಬೇಡ ಎಂದು ಹೇಳಿದರು.

Follow Us:
Download App:
  • android
  • ios