Asianet Suvarna News Asianet Suvarna News

ನನಗೆ ಜವಾಬ್ದಾರಿ ನೀಡಲು ಸಿಎಂ ಮೀನಾಮೇಷ : ಎಂಟಿಬಿ ನಾಗರಾಜ್

  • ಸಮರ್ಪಕವಾಗಿ ಔಷಧ ಪೂರೈಸುವಲ್ಲಿ ಅಧಿಕಾರಿಗಳು ವಿಫಲ
  • ಔಷಧ ಕಿಟ್ ವಿತರಣೆ ಮಾಡಿದ ಸಚಿವ ಎಂಟಿಬಿ ನಾಗರಾಜ್
  • ಉಸ್ತುವಾರಿ ಸ್ಥಾನದ ಬಗ್ಗೆ ಪ್ರಸ್ತಾಪಿಸಿದ ಸಚಿವ ಎಂಟಿಬಿ
Minister MTB Nagaraj distributes Medicine kit for Covid Patients snr
Author
Bengaluru, First Published Jun 1, 2021, 2:42 PM IST

ಹೊಸಕೋಟೆ (ಜೂ.01): ಕೊರೋನಾ ಮಹಾಮಾರಿಗೆ ಅಧಿಕಾರಿಗಳು ಅಗತ್ಯ ಔಷಧಿಗಳನ್ನು ವಿತರಿಸುವಲ್ಲಿ ವಿಫಲವಾಗಿರುವ ಬಗ್ಗೆ ದೂರುಗಳು ಬಂದಿವೆ. ಆರೋಗ್ಯ ಅಧಿಕಾರಿಗಳು ಔಷಧಿ ಪೂರೈಕೆಯಲ್ಲಿ ಗಮನಹರಿಸಬೇಕು ಎಂದು ಸಚಿವ ಎಂಟಿಬಿ ನಾಗರಾಜ್ ತಿಳಿಸಿದರು. 

ನಗರದ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಕೋವಿಡ್ ಸೋಂಕಿತರಿಗೆ  ನೀಡುವ ಔಷಧಗಳ ಕಿಟ್ ವಿತರಿಸಿ ಮಾತನಾಡಿದರು. ಅಗತ್ಯ ಔಷಧ ಖರೀದಿಗೆ ಸರ್ಕಾರ  ಹಣಕಾಸಿನ ನೆರವು ಒದಗಿಸುತ್ತಿದೆ. ಆದರೆ ಅಧಿಕಾರಿಗಳು ಅಗತ್ಯ ಔಷಧ ಪೂರೈಕೆಗೆ ಮುಂದಾಗುತ್ತಿಲ್ಲ. ಇದರಿಂದ ಜನರಿಗೆ ತೀವ್ರ ಸಮಸ್ಯೆಯಾಗುತ್ತಿದೆ ಎಂದು ನಾಗರಾಜ್ ಹೇಳಿದರು. 

ಫಲ ನೀಡಿದ ಸಚಿವ ಎಂಟಿಬಿ ನಾಗರಾಜ್ ಎಚ್ಚರಿಕೆ, ರೈತರಿಗೆ 565 ಕೋಟಿ ರೂ. ಬಾಕಿ ಪಾವತಿ ..

ಆದ್ದರಿಂದ ಪರಿಸ್ಥಿತಿ ಅರಿತು  ಔಷಧೋಪಚಾರಗಳ ಸರಬರಾಜಿಗೆ ಆದ್ಯತೆ ನೀಡಬೇಕು. ಟಿ.ಎಚ್‌ಒ,ಡಿಎಚ್‌ಒಗಳ ಗಮನಕ್ಕೆ ತಂದು ತ್ವರಿತ ಔಷಧ  ಸರಬರಾಜು ಮಾಡಿಸಿಕೊಳ್ಳಬೇಕು. ಔಷಧ ಸಮಸ್ಯೆ ಅರಿತು ನನ್ನ ವೈಯಕ್ತಿಕ ಹಣದಲ್ಲಿ 2 ಸಾವಿರ ಸೋಂಕಿತರಿಗೆ ಔಷದ, ಮಾಸ್ಕ್ ವಿತರಣೆ ಮಾಡುತ್ತಿದ್ದೇನೆ ಎಂದರು. 

ಉಸ್ತುವಾರಿ ಮೀನಮೇಷ : ಗ್ರಾಂತರ ಜಿಲ್ಲೆಯ ನಾಡುಮಿಡಿತವನ್ನು ಅರಿತಿದ್ದರು  ಉಸ್ತುವಾರಿ ಸಚಿವ ಸ್ಥಾನ ನೀಡಲು ಸಿಎಂ ಬಿಎಸ್‌ವೈ ಮೀನಮೇಷ ಎಣಿಸುತ್ತಿದ್ದಾರೆ. ಜಿಲ್ಲೆಯ ಉಸ್ತುವಾರಿ ಸಚಿವ ಸ್ಥಾನ ನೀಡಿದರೆ ಜಿಲ್ಲೆಯಲ್ಲಿ ಬಿಜೆಪಿ ಪಕ್ಷ ಸಂಘಟನೆ ಮಾಡಲು ಸಾಧ್ಯವಾಗುತ್ತದೆ. ಒಂದು ವೇಳೆ ನೀಡದಿದ್ದರೂ ಹೊಸಕೋಟೆ ಕ್ಷೇತ್ರದ  ಜನರ ಸೇವೆ ಮಾಡಿಕೊಂಡು ಇರುತ್ತೇವೆ ಎಂದರು. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

Follow Us:
Download App:
  • android
  • ios