RSS ಟೀಕಿಸಿದರೆ ಪ್ರಚಾರ ಸಿಗುವುದೆಂಬ ಕಲ್ಪನೆಯಲ್ಲಿ ಎಚ್‌ಡಿಕೆ: ಈಶ್ವರಪ್ಪ
* ಜನ ಜೆಡಿಎಸ್ ಮರೆಯುತ್ತಿದ್ದಾರೆ
* ಕಾಂಗ್ರೆಸ್ ಸರ್ಕಾರದಲ್ಲಿ ಬೆಲೆ ಏರಿಕೆ ಆಗಿಲ್ಲವೇ?
* ಬೆಲೆ ಏರಿಕೆ ವಿಚಾರ ಒಪ್ಪಿಕೊಳ್ಳುತ್ತೇನೆ, ಬೇರೆ ಏನೂ ಒಳ್ಳೆದು ಆಗಿಲ್ವಾ?
ಗದಗ(ಅ.10): ರಾಜ್ಯದ ಜನ ಇಂದು ಜೆಡಿಎಸ್(JDS) ಮರೆಯುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಆರೆಸ್ಸೆಸ್ ಟೀಕಿಸಿದರೆ ಪ್ರಚಾರ ಸಿಗುತ್ತದೆ ಎನ್ನುವ ಹುಚ್ಚು ಕಲ್ಪನೆಯಲ್ಲಿ ಜೆಡಿಎಸ್ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ(HD Kumaraswamy) ಅವರಿದ್ದಾರೆ ಎಂದು ಗ್ರಾಮಿಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ(KS Eshwararappa) ಲೇವಡಿ ಮಾಡಿದ್ದಾರೆ.
ಶನಿವಾರ ಇಲ್ಲಿ ಮಾಧ್ಯಮಗಳ ಜೊತೆ ಮಾತನಾಡಿ ಅವರು, ಮುಸ್ಲಿಂರನ್ನು(Muslim) ತೃಪ್ತಿಪಡಿಸಿದರೆ ಸಾಕು. ಸೂರ್ಯನಿಗೆ ಬೈದರೆ ದೊಡ್ಡವನಾಗುತ್ತೇನೆ ಎನ್ನುವ ಭ್ರಮೆಯಲ್ಲಿ ಕುಮಾರಸ್ವಾಮಿ ಇದ್ದಾರೆ. ಕುಮಾರಸ್ವಾಮಿ ಎಲ್ಲಿ? ಆರೆಸ್ಸೆಸ್(RSS) ಎಲ್ಲಿ? ಕಾಶ್ಮೀರ(Kashmir) ಪಂಡಿತರ ಸಾವಿಗೆ ಆರೆಸ್ಸೆಸ್ ಕಾರಣ ಎನ್ನುವ ಮೂಲಕ ಇಷ್ಟು ಕೀಳು ಮಟ್ಟದ ರಾಜಕಾರಣಕ್ಕೆ(Politics) ಕುಮಾರಸ್ವಾಮಿ ಇಳಿಯುತ್ತಾರೆ ಎಂದುಕೊಂಡಿರಲಿಲ್ಲ. ಅವರಿಗೆ ಭಗವಂತ ಬುದ್ಧಿ ಕೊಡಲಿ ಎಂದು ಬೇಡಿಕೊಳ್ಳುತ್ತೇನೆ. ದೇವೇಗೌಡರ(HD Devegowda) ಮೂಲಕ ಆರ್‌ಎಸ್‌ಎಸ್‌ಗೆ ವಿಶೇಷ ಪ್ರಭಾವ ಬೆಳೆಯುವ ಅವಶ್ಯಕತೆ ಇಲ್ಲ. ದೇವೇಗೌಡರ ಮಕ್ಕಳು, ಮೊಮ್ಮಕ್ಕಳು ಆನಂದವಾಗಿ ರಾಜಕಾರಣ ಮಾಡಲಿ ಎಂದರು.
ನಾನು RSS ಹೊಗಳಿಲ್ಲ: ಬಿಜೆಪಿ ನಾಯಕರಿಗೆ ಟಾಂಗ್ ಕೊಟ್ಟ ದೇವೇಗೌಡ
ಪೈಪೋಟಿ ಏಕೀರಬಾರದು?
ಬೆಂಗಳೂರು(Bengaluru) ಉಸ್ತುವಾರಿಗೆ ಸೋಮಣ್ಣ(V Somanna), ಅಶೋಕ್(R Ashok) ಪೈಪೋಟಿ ವಿಚಾರವಾಗಿ ಮಾತನಾಡಿದ ಈಶ್ವರಪ್ಪ, ಪೈಪೋಟಿ ಯಾಕೆ ಇರಬಾರದು? ರಾಜಕಾರಣದಲ್ಲಿ ಇದೆಲ್ಲಾ ಸಾಮಾನ್ಯ. ಏನೂ ಇಲ್ಲ ಎಂದು ನಾನು ಹೇಳಲ್ಲ, ಆದರೆ ಸಮಸ್ಯೆ ಇದ್ದರೆ ದೊಡ್ಡವರ ಸಮ್ಮುಖದಲ್ಲಿ ಕೂತು ಬಗೆಹರಿಸಿಕೊಳ್ಳುತ್ತಾರೆ ಎಂದರು.
ತೈಲೋತ್ಪನ್ನಗಳ ಬೆಲೆ ಏರಿಕೆ(Petrol) ವಿಚಾರವಾಗಿ ಮಾತನಾಡಿ, ಸ್ವಾತಂತ್ರ್ಯ ಬಂದಾಗಿನಿಂದಲೂ ಬೆಲೆ ಏರಿಕೆ ಆಗಿಲ್ವಾ? ಕಾಂಗ್ರೆಸ್(Congress) ಸರ್ಕಾರ ಇದ್ದಾಗ ಏರಿಕೆ ಮಾಡಿಲ್ವಾ? ಹೆಚ್ಚು ಕಮ್ಮಿ ಆಗೋದು ಪ್ರಕ್ರಿಯೆ, ಕಂಟ್ರೋಲ್ ಮಾಡುವುದಕ್ಕೆ ಪ್ರಯತ್ನ ಮಾಡಲಾಗುವುದು. ಬೆಲೆ ಏರಿಕೆ ವಿಚಾರ ಒಪ್ಪಿಕೊಳ್ಳುತ್ತೇನೆ, ಬೇರೆ ಏನೂ ಒಳ್ಳೆದು ಆಗಿಲ್ವಾ? ಕಾಂಗ್ರೆಸ್ ಕಾಲದಲ್ಲಿ ಇವರು ಒಂದಾದರೂ ಸಿಲಿಂಡರ್ ಕೊಟ್ಟಿದ್ರಾ? ಇಂದು ಪ್ರತಿ ಮನೆಯಲ್ಲೂ ಗ್ಯಾಸ್ ಸಿಲಿಂಡರ್ ಇದೆ. 100 ಔಷಧಿ ಇವತ್ತು ಜನೌಷಧಿ ಕೇಂದ್ರದಲ್ಲಿ 10ಗೆ ಸಿಗುತ್ತಿದೆ. 6 ಸಾವಿರ ರೈತರ ಅಕೌಂಟ್‌ಗೆ ನೇರವಾಗಿ ಹೋಗುತ್ತಿದೆ. ಕೇಂದ್ರದ ಸಂಪುಟದಲ್ಲಿ ಹಿಂದುಳಿದ ವರ್ಗದವರಿಗೆ ಆದ್ಯತೆ ನೀಡಲಾಗಿದೆ. ಈ ಹಿಂದೆ ಇಷ್ಟೊಂದು ಆದ್ಯತೆ ನೀಡಿದ್ರಾ? ಯಾವುದು ಒಳ್ಳೆಯದಿದೆ ಅದರ ಸುದ್ದಿ ಎತ್ತುವುದಿಲ್ಲ ಎಂದರು.