ದೊರೆಸ್ವಾಮಿ ವಯಸ್ಸಿಗೆ ತಕ್ಕಂತೆ ಇರಲಿ : ಗರಂ ಆದ ಸಚಿವ ಈಶ್ವರಪ್ಪ

ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್ ಎಸ್ ದೊರೆಸ್ವಾಮಿ ವಿರುದ್ಧ ಕೆ ಎಸ್ ಈಶ್ವರಪ್ಪ ಗರಂ ಆಗಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರರು ಎಂದಿಗೂ ಪಕ್ಷಾತೀತವಾಗಿ ಇರಬೇಕು ಎಂದು ಹೇಳಿದರು. 

Minister KS Eshwarappa Slams Freedom Fighter HS Doreswamy

ಶಿವಮೊಗ್ಗ [ಫೆ.27]: ಸ್ವಾತಂತ್ರ್ಯ ಹೋರಾಟಗಾರರು ಪಕ್ಷಾತೀತರಾಗಿ ಇರಬೇಕು. ಕಾಂಗ್ರೆಸಿಗರಿಗೆ ದೊರೆಸ್ವಾಮಿ ಬೆಂಬಲ ನೀಡುವುದನ್ನು ಒಪ್ಪುವುದಿಲ್ಲ ಎಂದು ಸಚಿವ ಕೆ ಎಸ್ ಈಶ್ವರಪ್ಪ ಹೇಳಿದರು. 

ಶಿವಮೊಗ್ಗದಲ್ಲಿ ಮಾತನಾಡಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್ ಈಶ್ವರಪ್ಪ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. 

ದೇಶದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಿದ್ದರಾಮಯ್ಯ ಕೊಲೆಗಡುಕ ಎಂದು ಕರೆದಾಗಲೇ ಅವರನ್ನು ಪಕ್ಷದಿಂದ ಹೊರಹಾಕಬೇಕಿತ್ತು. ಈಗ ಸಿದ್ದರಾಮಯ್ಯ ನೇತೃತ್ವದಲ್ಲಿ ಯತ್ನಾಳ್ ವಿರುದ್ಧ ಹೋರಾಟ ನಡೆಸಲು ಸಜ್ಜಾಗಿದ್ದಾರೆ. ವಿಧಾನಸೌಧ ನಡೆಯಲು ಬಿಡಲ್ಲ ಎಂದು ಹೇಳುತ್ತಾರೆ. ವಿಧಾನಸೌಧ ಇವರ ಆಸ್ತೀನಾ, ಅದು ಹೇಗೆ ಬಿಡೋಲ್ಲ ನೋಡುತ್ತೇನೆ ಎಂದು ಸವಾಲು ಹಾಕಿದರು. 

ದೊರೆಸ್ವಾಮಿ ನಾಲಿಗೆ ಬಿಗಿ ಹಿಡಿದು ಮಾತನಾಡಲಿ: ಸಚಿವ ಸೋಮಣ್ಣ...

ಸರ್ವಾಧಿಕಾರಿ ರೀತಿಯಲ್ಲಿ ಹೇಳಿಕೆ ನೀಡಿದ್ದೆ ಕರ್ನಾಟಕದಲ್ಲಿ ಕಾಂಗ್ರೆಸ್ ನಿರ್ನಾಮ ಆಗಲು ಕಾರಣ. ದೊರೆಸ್ವಾಮಿ ಕಾಂಗ್ರೆಸಿನವರ ಹೇಳಿಕೆಗೆ ಬೆಂಬಲ ನೀಡದೇ ಪಾಕಿಸ್ತಾನ ಜಿಂದಾಬಾದ್ ಎಂದವರ ವಿರುದ್ಧ ಧರಣಿ ಕೂರಬೇಕಿತ್ತು.  ಆಗ ನಾನಿ ಅವರ ಜೊತೆಗೆ ಸೇರಿಕೊಳ್ಳುತ್ತಿದ್ದೆವು. ದೊರೆಸ್ವಾಮಿ ಕಾಂಗ್ರೆಸಿನವರ ಪರ ಹೇಳಿಕೆ ಕೊಟ್ಟಿದ್ದಕ್ಕೆ ಸಿಟ್ಟು ಬಂದಿದೆ ಎಂದು ಈಶ್ವರಪ್ಪ ಹೇಳಿದರು. 

ಹಿರಿಯರಾದ ದೊರೆಸ್ವಾಮಿ ತಮ್ಮ ವಯಸ್ಸಿಗೆ ತಕ್ಕಂತೆ ಮಾರ್ಗದರ್ಶನ ನೀಡಿದರೆ ನಾವು ಅದರಂತೆ ನಡೆಯುತ್ತೇವೆ. ದೇಶದಲ್ಲಿ ಪ್ರತಿಭಟನೆ, ದಂಗೆ, ಕೊಲೆ ನಡೆಯುವುದಕ್ಕೆ ಮುಸ್ಲಿಂರು ಕಾರಣವಲ್ಲ. ಇದಕ್ಕೆ ಕಾಂಗ್ರೆಸಿಗರೆ ನೇರ ಹೊಣೆ. ಇವರು ತಮ್ಮ ಮತ ಬ್ಯಾಂಕ್ ಗಟ್ಟಿಯಾಗುತ್ತದೆ ಎನ್ನುವ ಭ್ರಮೆಯಲ್ಲಿದ್ದರೆ. ಇದು ಕಾಂಗ್ರೆಸಿನವರು ನಡೆಸಿರುವ ಕುತಂತ್ರ ಎಂದು  ಈಶ್ವರಪ್ಪ ವಾಗ್ದಾಳಿ ನಡೆಸಿದರು. 

Latest Videos
Follow Us:
Download App:
  • android
  • ios