Asianet Suvarna News Asianet Suvarna News

Mysuru : ಕಬ್ಬಿನ ದರ: ಸಿಎಂ ಜೊತೆ ಚರ್ಚಿಸಿ ತೀರ್ಮಾನ

ಕೆಲ ಸಕ್ಕರೆ ಕಾರ್ಖಾನೆ ಮಾಲೀಕರು ನ್ಯಾಯಾಲಯದ ಮೊರೆ ಹೋಗಿ ತಡೆಯಾಜ್ಞೆ ತಂದಿರುವುದರಿಂದ ಕಬ್ಬು ದರ ನಿಗದಿ ಮಾಡಲು ತಡವಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ತಿಳಿಸಿದರು.

minister K gopalaiah Assure To Farmers  About Sugar Cane Price snr
Author
First Published Dec 4, 2022, 8:24 AM IST

ಮಂಡ್ಯ (ಡಿ.04): ಕೆಲ ಸಕ್ಕರೆ ಕಾರ್ಖಾನೆ ಮಾಲೀಕರು ನ್ಯಾಯಾಲಯದ ಮೊರೆ ಹೋಗಿ ತಡೆಯಾಜ್ಞೆ ತಂದಿರುವುದರಿಂದ ಕಬ್ಬು ದರ ನಿಗದಿ ಮಾಡಲು ತಡವಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ತಿಳಿಸಿದರು.

ನಗರದ ಸರ್‌ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಕಳೆದ 27 ದಿನಗಳಿಂದ ಅಹೋರಾತ್ರಿ ಧರಣಿ ನಡೆಸುತ್ತಿರುವ ರೈತರ (Farmers)  ಪ್ರತಿಭಟನೆ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಕಬ್ಬು ಬೆ​ಳೆ​ಗಾ​ರರ ಸ​ಮಸ್ಯೆ ಮಂಡ್ಯ ಮಾ​ತ್ರ​ವಲ್ಲ, ಇಡೀ ರಾ​ಜ್ಯದ ಸ​ಮ​ಸ್ಯೆ​ಯಾ​ಗಿದೆ. ಆ​ದರೆ, ಕೆಲ ಸ​ಕ್ಕರೆ ಕಂಪನಿ ಮಾ​ಲೀ​ಕರು ನ್ಯಾ​ಯಾ​ಲ​ಯದ ಮೊರೆ ಹೋಗಿ ತ​ಡೆ​ಯಾಜ್ಞೆ ತಂದಿ​ದ್ದಾರೆ. ಡಿ.6ರಂದು ನ್ಯಾ​ಯಾ​ಲ​ಯ​ದಲ್ಲಿ ವಿ​ಚಾ​ರಣೆ ಇ​ರುವ ಕಾ​ರಣ ಅಂದು ಈ ಬಗ್ಗೆ ಮಾ​ಹಿತಿ ಪ​ಡೆದು ಮುಂದಿನ ಕ್ರಮ ಅ​ನು​ಸ​ರಿ​ಸ​ಲಾ​ಗು​ವುದು ಎಂದು ಹೇ​ಳಿ​ದರು.

ಕಬ್ಬು ದರ ನಿಗದಿ ಬಗ್ಗೆ ನಾನು, ಸ​ಕ್ಕರೆ ಸ​ಚಿ​ವರು, ನಾ​ರಾ​ಯ​ಣ​ಗೌ​ಡರು (Minister Narayana Gowda ) ಸೇರಿ ಮು​ಖ್ಯ​ಮಂತ್ರಿ​ಗ​ಳೊ​ಟ್ಟಿಗೆ ಚ​ರ್ಚೆ ನ​ಡೆ​ಸಿ​ದ್ದೇವೆ. 6 ಮಂದಿಯ ಸ​ಮಿತಿ ರ​ಚಿಸಿ ವ​ರದಿ ನೀ​ಡು​ವಂತೆ ಸೂ​ಚನೆ ನೀ​ಡ​ಲಾ​ಗಿತ್ತು. ನ್ಯಾ​ಯಾ​ಲ​ಯದ ವಿಚಾ​ರಣೆ ನಂತರ ಮು​ಖ್ಯ​ಮಂತ್ರಿ ಬ​ಸ​ವ​ರಾಜ ಬೊ​ಮ್ಮಾಯಿ ಅ​ವರು ಸ​ಕ್ಕರೆ ಮಾ​ಲೀ​ಕರ ಸಭೆ ಕ​ರೆದು ಚರ್ಚಿಸಿ ಲಾ​ಭಾಂಶದ ಆ​ಧಾ​ರದ ಮೇಲೆ ರೈ​ತ​ರಿಗೆ ದರ ನೀ​ಡು​ವಂತೆ ಸೂ​ಚಿ​ಸ​ಲಾ​ಗು​ವುದು ಎಂದು ಹೇ​ಳಿ​ದರು.

ಕೇಂದ್ರ​ದಲ್ಲಿ ಪ್ರ​ಧಾ​ನ​ಮಂತ್ರಿ ಅ​ಧ್ಯ​ಕ್ಷ​ತೆ ಸ​ಮಿತಿ ಎಫ್‌ಆರ್‌ಪಿ ನಿ​ಗದಿ ಮಾ​ಡು​ತ್ತದೆ. ಆ ದ​ರ​ವನ್ನು ನೀ​ಡ​ಲಾ​ಗು​ತ್ತಿದೆ. ರಾ​ಜ್ಯ​ದಲ್ಲೂ ಸಹ ಸ​ಕ್ಕರೆ ಕಾರ್ಖಾನೆ ಮಾ​ಲೀ​ಕರು ಲಾ​ಭಾಂಶದ ಮೇಲೆ ದರ ನಿ​ಗದಿ ಮಾ​ಡು​ವಂತೆ ಒ​ತ್ತ​ಡ​ಗಳು ಹೆ​ಚ್ಚು​ತ್ತಿದೆ. ಈ ಬಗ್ಗೆ Óಕ್ಕರೆ ಸ​ಚಿ​ವರು, ಮು​ಖ್ಯ​ಮಂತ್ರಿ​ಗ​ಳೊ​ಟ್ಟಿಗೆ ಚರ್ಚಿಸಿ ಅಂತಿಮ ತೀರ್ಮಾನ ತೆ​ಗೆ​ದು​ಕೊ​ಳ್ಳ​ಲಾ​ಗು​ವುದು. ಮಂಡ್ಯ ಸೇ​ರಿ​ದಂತೆ ರಾ​ಜ್ಯದ ಕೆಲ ಜಿಲ್ಲಾ ಕೇಂದ್ರ​ಗ​ಳಲ್ಲೂ ರೈ​ತರು ಪ್ರ​ತಿ​ಭ​ಟನೆ ನ​ಡೆ​ಸು​ತ್ತಿ​ರು​ವು​ದನ್ನು ಸರ್ಕಾರ ಗಂಭೀ​ರ​ವಾಗಿ ಪ​ರಿ​ಗ​ಣಿ​ಸಿದೆ. ನಾನೂ ಸಹ ರೈತನ ಮ​ಗ​ನಾ​ಗಿ​ರು​ವು​ದ​ರಿಂದ ನ​ನಗೂ ರೈ​ತರ ಸ​ಮ​ಸ್ಯೆ​ ಬಗ್ಗೆ ಅ​ರಿ​ವಿದೆ ಎಂದರು.

ಹಿಂದಿನ ಪದ್ಧತಿ ಮುಂದು​ವ​ರಿ​ಸಲು ಕ್ರಮ

ಭತ್ತ ಖ​ರೀದಿಯನ್ನು ಈ ಹಿಂದೆ ರೈಸ್‌ಮಿ​ಲ್‌ ಮಾ​ಲೀ​ಕ​ರಿಗೆ ನೀ​ಡ​ಲಾ​ಗಿತ್ತು. ಈಗ ಎ​ಪಿ​ಎಂಸಿಗೆ ನೀ​ಡ​ಲಾ​ಗಿದೆ ಎಂಬ ವಿ​ಚಾರ ತಿ​ಳಿ​ಯಿತು. ನಾನು ಆ​ಹಾರ ಖಾತೆ ಸ​ಚಿ​ವ​ನಾ​ಗಿದ್ದ ವೇಳೆ ಬ​ಹ​ಳಷ್ಟುಸ​ಮ​ಸ್ಯೆ​ಗ​ಳನ್ನು ಬ​ಗೆ​ಹ​ರಿಸಿದ್ದೆ. ಈ​ಗಲೂ ಸಹ ಮು​ಖ್ಯ​ಮಂತ್ರಿ​ಗಳು, ಇ​ಲಾಖೆ ಅ​ಧಿ​ಕಾ​ರಿ​ಗ​ಳೊಂದಿಗೆ ಚರ್ಚಿಸಿ ಈ ಹಿಂದೆ ಇದ್ದ ಪ​ದ್ದ​ತಿ​ಯನ್ನೇ ಮುಂದು​ವ​ರಿ​ಸು​ವಂತೆ ಕ್ರಮ ಕೈ​ಗೊ​ಳ್ಳ​ಲಾ​ಗು​ವುದು ಎಂದು ಹೇ​ಳಿ​ದರು.

ಭತ್ತ ಖ​ರೀದಿ ಪ್ರ​ಕ್ರಿಯೆ ತಡ ಮಾ​ಡಿ​ದರೆ ದ​ಲ್ಲಾ​ಳಿ​ಗಳು ರೈ​ತ​ರಿಂದ ಕ​ಡಿಮೆ ದ​ರ​ದಲ್ಲಿ ಭತ್ತ ಖ​ರೀದಿ ಮಾ​ಡಿ​ಕೊಂಡು ಹೋ​ಗು​ತ್ತಾರೆ. ಮಂಡ್ಯ, ಮೈ​ಸೂರು, ಶಿ​ವ​ಮೊ​ಗ್ಗ​ದಲ್ಲಿ ಮಾತ್ರ ಹೆ​ಚ್ಚಿನ ಭತ್ತ ಖ​ರೀದಿ ಮಾ​ಡ​ಬ​ಹು​ದು. ಉ​ಳಿದ ಕ​ಡೆ​ಗ​ಳಲ್ಲಿ ಹೆ​ಚ್ಚಾ​ಗಿಲ್ಲ. ಇ​ದ​ರಿಂದಾಗಿ ಹಿಂದಿನ ಪ​ದ್ಧ​ತಿ​ಯನ್ನೇ ಮುಂದು​ವ​ರಿ​ಸಿ​ದಲ್ಲಿ ಶೀಘ್ರ ಭತ್ತ ಖ​ರೀದಿ ಕೇಂದ್ರ​ಗ​ಳನ್ನು ಸ್ಥಾ​ಪಿ​ಸ​ಲು ಅ​ನು​ಕೂ​ಲ​ವಾ​ಗ​ಲಿದೆ ಎಂದು ಹೇ​ಳಿ​ದರು.

ಸ್ಥ​ಳ​ದಲ್ಲೇ ಸ​ಮಸ್ಯೆ ಪ​ರಿ​ಹಾರ : ಉ​ಸ್ತು​ವಾರಿ ಸ​ಚಿ​ವರ ಕ​ಚೇರಿ ಇ​ಲ್ಲ​ದಿ​ದ್ದರೂ ಜಿ​ಲ್ಲೆಗೆ ಭೇಟಿ ನೀ​ಡಿದಾ​ಗೆಲ್ಲಾ ಸಾರ್ವಜ​ನಿ​ಕ​ರಿಂದ ಬಂದ ಅರ್ಜಿಗಳು, ಅ​ಹ​ವಾ​ಲು​ಗ​ಳಿಗೆ ಸ್ಥ​ಳ​ದಲ್ಲೇ ಪ​ರಿ​ಹಾ​ರಕ್ಕೆ ಸಂಬಂಧಿ​ಸಿದ ಅಧಿ​ಕಾ​ರಿ​ಗ​ಳಿಗೆ ಸೂ​ಚಿ​ಸು​ತ್ತೇನೆ. ಇ​ದಕ್ಕೆ ಕ​ಚೇರಿ ಬೇ​ಕೆಂದೇನೂ ಇಲ್ಲ. ನಾನು ಮಂಡ್ಯಕ್ಕೆ ಬಂದಾ​ಗ​ಲೆಲ್ಲಾ ಪ್ರ​ವಾಸಿ ಮಂದಿರ ಅ​ಥವಾ ಜಿ​ಲ್ಲಾ​ಧಿ​ಕಾರಿ ಕ​ಚೇ​ರಿ​ಯಲ್ಲೇ ಇ​ರು​ತ್ತೇನೆ. ಸಾರ್ವಜ​ನಿ​ಕರು ಬಂದು ನ​ನ್ನನ್ನು ಭೇಟಿ ಮಾಡಿ ಸ​ಮಸ್ಯೆ ಬ​ಗೆ​ಹ​ರಿ​ಸಿ​ಕೊ​ಳ್ಳ​ಬ​ಹುದು ಎಂದು ಪ್ರ​ಶ್ನೆ​ಯೊಂದಕ್ಕೆ ಉ​ತ್ತ​ರಿ​ಸಿ​ದರು.

ಟಿ​ಕೆಟ್‌ ನೀ​ಡಲ್ಲ ಘೋ​ಷಣೆ ಮಾ​ಡಲಿ: ಈ ಹಿಂದೆ ಯಾ​ರಾರ‍ಯರು ಕಾಂಗ್ರೆಸ್‌ ಪ​ಕ್ಷ​ದಲ್ಲಿ ಇ​ದ್ದರು ಎಂಬು​ದನ್ನು ನಾಯಕರು ಒಮ್ಮೆ ಹಿಂತಿ​ರುಗಿ ನೋ​ಡಿ​ಕೊ​ಳ್ಳಲಿ. ಯಾ​ವುದೋ ವಿ​ಚಾ​ರ​ದಲ್ಲಿ ಬಂದಿ​ರ​ಬ​ಹುದು. ಅರ್ಜಿ ಹಾ​ಕಿ​ರು​ವ​ವರ ಮೇಲೆ ಕ್ರಿ​ಮಿ​ನಲ್‌ ಕೇಸ್‌ ಇ​ಲ್ಲವೇ ಎಂದು ಕಾಂಗ್ರೆಸ್‌ ನಾಯಕರಿಗೆ ಟಾಂಗ್‌ ನೀಡಿದರು. ನ​ಮ್ಮಲ್ಲಿ ಕ್ರಿ​ಮಿ​ನಲ್‌ ಕೇಸ್‌ ಇ​ಲ್ಲ​ದ​ವ​ರಿಗೆ ಟಿ​ಕೆಟ್‌ ಕೊ​ಡು​ತ್ತೇವೆ. ಈ​ಗಾ​ಗಲೇ ಮು​ಖ್ಮ​ಮಂತ್ರಿ​ಗಳು ಹಾಗೂ ರಾ​ಜ್ಯಾ​ಧ್ಯ​ಕ್ಷರು ಘೋ​ಷಣೆ ಮಾ​ಡಿ​ದ್ದಾರೆ. ಅವರು ಕೂಡ ಟಿಕೆಟ್‌ ನೀಡಲ್ಲ ಎಂದು ಘೋಷಣೆ ಮಾಡಲಿ ಎಂದು ಆಗ್ರಹಿಸಿದರು.

ಈ ವೇಳೆ ಜಿಲ್ಲಾಧಿ​ಕಾರಿ ಡಾ. ಎಚ್‌.ಎನ್‌.ಗೋ​ಪಾ​ಲ​ಕೃಷ್ಣ, ಜಿಲ್ಲಾ ಎಸ್ಪಿ ಎನ್‌.ಯ​ತೀ​ಶ್‌, ಜಿಲ್ಲಾ ರೈತ ಸಂಘದ ಅ​ಧ್ಯಕ್ಷ ಎ.​ಎಲ್‌.ಕೆಂಪೂ​ಗೌಡ, ಮು​ಖಂಡ​ರಾದ ಎಸ್‌.ಸಿ. ಮ​ಧು​ಚಂದನ್‌, ಅಕ್ಕಿ ಗಿ​ರಣಿ ಮಾ​ಲೀ​ಕರ ಸಂಘದ ಅ​ಧ್ಯಕ್ಷ ರ​ಮೇಶ್‌, ಕಾ​ರ‍್ಯ​ದರ್ಶಿ ಮ​ಹೇಶ್‌ಕು​ಮಾರ್‌, ಉ​ದ​ಯ​ಕು​ಮಾರ್‌, ವೇಣುಗೋಪಾಲ್‌ , ದೀಪಕ್‌ , ಅರುಣ್‌ , ಆ​ತ್ಮಾ​ನಂದ , ರಾಮಕೃಷ್ಣೇಗೌಡ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

Follow Us:
Download App:
  • android
  • ios