ಸಚಿವ ಗೋಪಾಲಯ್ಯ ಮಹತ್ವದ ಸುಳಿವು : ಮತ್ತಷ್ಟು ಮುಖಂಡರು ಬಿಜೆಪಿಗೆ
- ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯದಲ್ಲಿ ರಾಜಕೀಯ ಧ್ರುವೀಕರಣ
- ಅದು ಬಿಜೆಪಿ ಪರವಾಗಿಯೇ ಆಗಲಿದೆ. ಏನೆಲ್ಲಾ ಆಗಲಿದೆ ಎಂಬುದನ್ನು ನೀವೇ ಕಾದು ನೋಡಿ
- ಅಬಕಾರಿ ಸಚಿವ ಕೆ.ಗೋಪಾಲಯ್ಯ ಮಹತ್ವದ ಸುಳಿವು
ದಾವಣಗೆರೆ (ಆ.31): ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯದಲ್ಲಿ ರಾಜಕೀಯ ಧ್ರುವೀಕರಣ ಆಗಲಿದ್ದು, ಅದು ಬಿಜೆಪಿ ಪರವಾಗಿಯೇ ಆಗಲಿದೆ. ಏನೆಲ್ಲಾ ಆಗಲಿದೆ ಎಂಬುದನ್ನು ನೀವೇ ಕಾದು ನೋಡಿ ಎಂದು ಅಬಕಾರಿ ಸಚಿವ ಕೆ.ಗೋಪಾಲಯ್ಯ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಪಕ್ಷಗಳ ಮತ್ತಷ್ಟುಮುಖಂಡರು ಕಮಲ ಸೇರುವ ಸುಳಿವು ನೀಡಿದರು.
ಲಾಭದಲ್ಲಿ ಅಬಕಾರಿ ಇಲಾಖೆ : ಇದೇವೇಳೆ ಅಬಕಾರಿ ಇಲಾಖೆ ಆದಾಯವೂ ಹೆಚ್ಚಿದೆ ಎಂದು ತಿಳಿಸಿದ ಅವರು ಇಲಾಖೆಗೆ 2500 ಕೋಟಿ ಆದಾಯ ಬಂದಿದೆ. ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚು ಲಾಭವಾಗಿದೆ. ಕಳೆದ ಬಜೆಟ್‌ನಲ್ಲಿ ಇಲಾಖೆಗೆ .24,500 ಕೋಟಿ ಗುರಿ ನೀಡಲಾಗಿತ್ತು. ಮೊನ್ನೆಗೆ 10089 ಕೋಟಿ ಅಬಕಾರ ಇಲಾಖೆಗೆ ಬಂದಿದೆ. ಕೊರೋನಾ ಸೋಂಕು ಕಡಿಮೆಯಾಗಿದ್ದೇ ಆದಲ್ಲಿ ನಾನು ನಿರೀಕ್ಷಿಸಿದಷ್ಟುಆದಾಯವಂತೂ ಬರಲಿದೆ. ಮದ್ಯ ಪ್ರಿಯರಿಗೆ ಯಾವತ್ತೂ ಹೊರೆ ಇಲ್ಲ. ಆನ್ ಲೈನ್ ಮದ್ಯ ಮಾರಾಟದ ಬಗ್ಗೆ ಸದ್ಯಕ್ಕೆ ಚಿಂತನೆ ಇಲ್ಲ ಎಂದು ತಿಳಿಸಿದರು.
ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಮುಖಂಡರು : ಸ್ವಾಗತಿಸಿದ ಶಾಸಕರು
ಕೊಪ್ಪಳ ಅಬಕಾರಿ ಡಿಸಿ ಹಣ ಕೊಟ್ಟಿರುವುದೆಲ್ಲಾ ಸುಳ್ಳು. ಅಬಕಾರಿ ಆಯುಕ್ತರು ಈ ಬಗ್ಗೆ ತನಿಖೆ ಕೈಗೊಂಡಿದ್ದಾರೆ. ಅಂತಹ ಯಾವುದೇ ಅವ್ಯವಹಾರವೂ ನಡೆದಿಲ್ಲ. ಇಲಾಖೆ ಆಯುಕ್ತರು ಸಮಗ್ರವಾಗಿ ತನಿಖೆ ನಡೆಸಿ, ನೈಜ ಸ್ಥಿತಿಯನ್ನು ನೋಡಿಕೊಂಡು, ಸೂಕ್ತ ಕ್ರಮ ಕೈಗೊಳ್ಳುತ್ತಾರೆ ಎಂದರು.