ಕಾಂಗ್ರೆಸ್‌ ಬಲಹೀನ ವರ್ಗಗಳ ಮೀಸಲು ಹೆಚ್ಚಿಸಲಿಲ್ಲ: ಸಚಿವ ಸುಧಾಕರ್‌

ವಿರೋಧ ಪಕ್ಷದವರು ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನ ತಿರುಚುತ್ತಾರೆ ಎಂದು ಆರೋಪಿಸಿದರು. ಕಳೆದ 56 ವರ್ಷಗಳಿಂದ ಸುಳ್ಳು ಹೇಳುತ್ತಲೇ ಬಲಹೀನ ವರ್ಗಗಳ ಮತ ಪಡೆದಿದ್ದಾರೆ. ಆದರೆ ಅವರಿಗೆ ಮೀಸಲಾತಿ ನೀಡಲು ಸಾಧ್ಯವಾಗಲಿಲ್ಲ. 56 ವರ್ಷ ಅಧಿಕಾರ ನಡೆಸಿದವರು ನೀಡದ ಮೀಸಲಾತಿ ಬಿಜೆಪಿ ಸರ್ಕಾರ ನೀಡಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಹೇಳಿದರು.

Minister Dr K Sudhakar Talks Over Reservation At Chikkaballapur gvd

ಚಿಕ್ಕಬಳ್ಳಾಪುರ (ನ.06): ವಿರೋಧ ಪಕ್ಷದವರು ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನ ತಿರುಚುತ್ತಾರೆ ಎಂದು ಆರೋಪಿಸಿದರು. ಕಳೆದ 56 ವರ್ಷಗಳಿಂದ ಸುಳ್ಳು ಹೇಳುತ್ತಲೇ ಬಲಹೀನ ವರ್ಗಗಳ ಮತ ಪಡೆದಿದ್ದಾರೆ. ಆದರೆ ಅವರಿಗೆ ಮೀಸಲಾತಿ ನೀಡಲು ಸಾಧ್ಯವಾಗಲಿಲ್ಲ. 56 ವರ್ಷ ಅಧಿಕಾರ ನಡೆಸಿದವರು ನೀಡದ ಮೀಸಲಾತಿ ಬಿಜೆಪಿ ಸರ್ಕಾರ ನೀಡಿದೆ ಎಂದು ಆರೋಗ್ಯ ಸಚಿವ ಸುಧಾಕರ್‌ ಹೇಳಿದರು.

ತಾಲೂಕಿನ ಗೊಲ್ಲಹಳ್ಳಿ ಗೇಟ್‌ ಬಳಿ ಭಾನುವಾರ ಆಯೋಜಿಸಿದ್ದ ಸ್ಥಳೀಯ ಮುಖಂಡರ ಸಭೆಯಲ್ಲಿ ಜೆಡಿಎಸ್‌ ತೊರೆದು ಬಿಜೆಪಿ ಸೇರಿದ ನಲ್ಲಗುಟ್ಟಪಾಳ್ಯ ಗ್ರಾಪಂ ಸದಸ್ಯೆ ಕಾಂತಮ್ಮ ತಿಪ್ಪಾರೆಡ್ಡಿ ಮತ್ತು ಅವರ ಬೆಂಬಲಿಗರನ್ನು ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದ ಅವರು, ಹೊಸಬರು ಬಂದ ಕಾರಣಕ್ಕೆ ಹಳಬರು ಎದೆಗುಂದಬೇಕಿಲ್ಲ ಎಂದು ಕಾರ್ಯಕರ್ತರಿಗೆ ಕಿನಿಮಾತು ಹೇಳಿದರು.

ಶಿಶು, ಬಾಣಂತಿ ಸಾವು: ಸಚಿವ ಸುಧಾಕರ್‌ ರಾಜೀನಾಮೆಗೆ ಎಚ್‌ಡಿಕೆ ಆಗ್ರಹ

ಶ್ರೀಗಳಿಗೆ ಗುರುವಂದನೆ: ಉಪವಾಸ ಸತ್ಯಾಗ್ರಹದ ಮೂಲಕ ಮೀಸಲಾತಿಗಾಗಿ ಹೋರಾಟ ನಡೆಸಿದ ಶ್ರೀಪ್ರಸನ್ನಾನಂದ ಶ್ರೀಗಳಿಗೆ ಜಿಲ್ಲೆಯಲ್ಲಿ ಬೃಹತ್‌ ಗುರುವಂದನಾ ಕಾರ್ಯಕ್ರಮ ಆಯೋಜಿಸಲಾಗುವುದು. ಇದೇ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸಲಾಗುವುದು. ಯಾರಿಗೂ ಅನ್ಯಾಯವಾಗದ ರೀತಿಯಲ್ಲಿ ಮೀಸಲಾತಿ ಸರಿಪಡಿಸಲು ಮುಖ್ಯಮಂತ್ರಿಗಳು ಶ್ರಮಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಈ ಭಾಗವನ್ನು ಕೈಗಾರಿಕಾ ಪ್ರದೇಶ ಮಾಡಲಾಗುವುದು. ಇದಕ್ಕೆ ಅಗತ್ಯವಿರುವ ಭೂಮಿ ವಶಕ್ಕೆ ಪಡೆಯಲು ಎಲ್ಲರ ಸಹಕಾರ ನೀಡಬೇಕು ಎಂದು ಅವರು ಮನವಿ ಮಾಡಿದರು.

ಬಿಜೆಪಿ ಮಹಾ ಸಮುದ್ರದಂತೆ, ಯಾರೇ ಪಕ್ಷಕ್ಕೆ ಬಂದರೂ ಆತ್ಮೀಯವಾಗಿ ಬರಮಾಡಿಕೊಳ್ಳಬೇಕು, ಸಮಾನ ಗೌರವ ನೀಡುವ ಮೂಲಕ ಪಕ್ಷ ಬಲವರ್ಧನೆಗೆ ಎಲ್ಲರೂ ಕೈಜೋಡಿಸಬೇಕು. ಪಕ್ಷದಲ್ಲಿ ಹಿರಿಯ, ಕಿರಿಯ ಎಂಬ ಯಾವುದೇ ಭೇದವಿಲ್ಲ. ನದಿಯಲ್ಲಿ ಹಳೇ ನೀರು, ಹೊಸ ನೀರು ಬೆರೆತು ಒಟ್ಟಾಗಿ ಹರಿಯುವಂತೆ ವಲಸಿಗ ಮತ್ತು ಮೂಲ ಎಂಬ ಯಾವುದೇ ಭಿನ್ನಾಭಿಪ್ರಾಯವಿಲ್ಲದೆ ಎಲ್ಲರೂ ಬೆರೆತು ನಡೆಯಬೇಕು ಎಂದರು.

ಅವಳಿ ಮಕ್ಕಳಿಬ್ಬರು ಸಾವನ್ನಪ್ಪಿರುವ ಘಟನೆಯಿಂದ ದಿಗ್ಭ್ರಮೆಗೆ ಒಳಗಾಗಿದ್ದೇನೆ: ಸಚಿವ ಸುಧಾಕರ್‌

ಕ್ಷೇತ್ರದ ಅಭಿವೃದ್ಧಿಗೆ ಕೈಜೋಡಿಸಿ: ಹರಿಯೋ ನದಿಯಲ್ಲಿ ನೀರೆಲ್ಲ ಒಂದೇ ಎಂಬ ಮಾತಿನಂತೆ ನಾವೆಲ್ಲ ಮುಂದೆ ಸಾಗೋಣ ಎಂದು ಸಚಿವರು ಕರೆ ನೀಡಿದರು. ನಾವು ನೋಡಬೇಕಿರುವುದು ಅಭಿವೃದ್ಧಿ, ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗಾಗಿ ಎಲ್ಲರೂ ಕೈ ಜೋಡಿಸೋಣ. ಅಭಿವೃದ್ಧಿ ಪಥದಲ್ಲಿ ಕ್ಷೇತ್ರ ಉತ್ತಂಗ ತಲುಪಲು ಎಲ್ಲರೂ ಕೈ ಜೋಡಿಸುವಂತೆ ಮನವಿ ಮಾಡಿದರು. ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಕೆ.ವಿ. ನಾಗರಾಜ್‌, ನಗರಸಭೆ ಅಧ್ಯಕ್ಷ ಆನಂದರೆಡ್ಡಿ, ಮುನಿರಾಜು, ಜೆ.ಕೆ. ರೆಡ್ಡಿ, ಆವುಲಕೊಂಡರಾಯಪ್ಪ, ರಾಜಣ್ಣ, ಮಿಲ್ಟನ್‌ ವೆಂಕಟೇಶ್‌, ರಾಮಣ್ಣ, ಮೂರ್ತಿ, ಜಾಲಪ್ಪ, ನರಸಿಂಹಯ್ಯ, ವೆಂಕಟರಮಣಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.

Latest Videos
Follow Us:
Download App:
  • android
  • ios