Chikkaballapur: ದತ್ತು ಪಡೆದ ಮಕ್ಕಳೊಂದಿಗೆ ದೀಪಾವಳಿ ಆಚರಿಸಿದ ಸಚಿವ ಸುಧಾಕರ್
ರಾಜ್ಯದ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ತಾನು ದತ್ತು ಪಡೆದ ಅನಾಥ ಮಕ್ಕಳೊಂದಿಗೆ ಸೋಮವಾರ ನರಕ ಚತುರ್ಥಿಯ ದಿನದಂದು ಬೆಳಕಿನ ಹಬ್ಬ ದೀಪಾವಳಿಯನ್ನು ಅರ್ಥಪೂರ್ಣವಾಗಿ ಆಚರಿಸುವ ಮೂಲಕ ಗಮನ ಸೆಳೆದರು.
ಚಿಕ್ಕಬಳ್ಳಾಪುರ (ಅ.24): ರಾಜ್ಯದ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ತಾನು ದತ್ತು ಪಡೆದ ಅನಾಥ ಮಕ್ಕಳೊಂದಿಗೆ ಸೋಮವಾರ ನರಕ ಚತುರ್ಥಿಯ ದಿನದಂದು ಬೆಳಕಿನ ಹಬ್ಬ ದೀಪಾವಳಿಯನ್ನು ಅರ್ಥಪೂರ್ಣವಾಗಿ ಆಚರಿಸುವ ಮೂಲಕ ಗಮನ ಸೆಳೆದರು.
ಕಳೆದ ಎರಡು ವರ್ಷದಲ್ಲಿ ಆವರಿಸಿದ್ದ ಮಹಾಮಾರಿ ಕರೋನಾದಿಂದ ಹೆತ್ತ ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡು ಅನಾಥರಾಗಿದ್ದ ಜಿಲ್ಲೆಯ ವಿವಿಧ ತಾಲೂಕುಗಳ 9 ಮಕ್ಕಳನ್ನು ಕೂಡ ಆರೋಗ್ಯ ಸಚಿವ ಸುಧಾಕರ್ ಸ್ವಯಂ ಪ್ರೇರಣೆಯಿಂದ ದತ್ತು ತೆಗೆದುಕೊಂಡು ಅವರ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಜೊತೆಗೆ ಆ ಮಕ್ಕಳಿಗೆ ತಲಾ ಒಂದು ಲಕ್ಷ ರೂಪಾಯಿ ಚೆಕ್ ಕೊಟ್ಟು ಆ ಮಕ್ಕಳ ಶಿಕ್ಷಣ ಹಾಗೂ ಇತರ ಜವಾಬ್ದಾರಿಗಳನ್ನು ತಮ್ಮ ಸಾಯಿಕೃಷ್ಣ ಚಾರಿಟಬಲ್ ಟ್ರಸ್ಟ್ ಮುಖಾಂತರ ವಹಿಸಿಕೊಂಡಿದ್ದಾರೆ. ಮತ್ತೊಬ್ಬರ ಬಾಳಿಗೆ ಬೆಳಕಾಗುವ ಈ ಪುಣ್ಯ ಕಾರ್ಯ ಮಾಡುತ್ತಿರುವ ಸುಧಾಕರ್‌ರವರು ನಿಜಕ್ಕೂ ಅಭಿನಂದನಾರ್ಹರು.
1001 ಗಿಡ ನೆಟ್ಟು ದೀಪಾವಳಿ ಹಬ್ಬ ಆಚರಣೆ: ಶಬ್ದ ಹಾಗೂ ವಾಯು ಮಾಲಿನ್ಯ ಉಂಟು ಮಾಡುವ ಪಟಾಕಿಗಳನ್ನು ಸಿಡಿಸದೇ ದೀಪವಾಳಿ ಸಂದರ್ಭದಲ್ಲಿ ಪ್ರತಿಯೊಬ್ಬರು ಪರಿಸರಕ್ಕೆ ಹಾನಿಯಾಗುವ ಪಟಾಕಿಗಳಿಂದ ದೂರ ಇದ್ದು ಪರಿಸರಕ್ಕೆ ಪೂರಕವಾಗಿ ಗಿಡ, ಮರಳನ್ನು ನೆಟ್ಟು ಪೋಷಿಸಬೇಕೆಂದು ರಾಜ್ಯ ಪರಿಸರ ಪ್ರಶಸ್ತಿ ಪುರಸ್ಕೃತ ಗುಂಪು ಮರದ ಆನಂದ್ ಹೇಳಿದರು.
ಕೆಂಪೇಗೌಡ ಪ್ರತಿಮೆ ಲೋಕಾರ್ಪಣೆ: ಕಾರ‍್ಯಕ್ರಮ ಸಿದ್ಧತೆ ಪರಿಶೀಲಿಸಿದ ಸಚಿವರು
ಜಿಲ್ಲೆಯ ಗುಡಿಬಂಡೆ ತಾಲ್ಲೂಕು ವಾಪಸಂದ್ರದ ದೀಪಾವಳಿ ಹಬ್ಬದ ಪ್ರಯುಕ್ತ ಸೋಮವಾರ 1001 ಗಿಡಗಳನ್ನು ನೆಟ್ಟು ವನಮೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪರಿಸರ ವಿನಾಶ ಆದರೆ ಮನುಷ್ಯನಿಗೆ ಉಳಿಗಾಲ ಇಲ್ಲ ಎಂಬುದನ್ನು ಪ್ರತಿಯೊಬ್ಬರು ಅರಿಯಬೇಕೆಂದರು. ದೀಪಾವಳಿ ಹಬ್ಬದಂದು ವನಮಹೋತ್ಸವ ನಡೆಸುತ್ತಿರುವ ಗುಡಿಬಂಡೆ ಪಟ್ಟಣದ ವಾಪಸಂದ್ರದ ನರಸಿಂಹರೆಡ್ಡಿ ಕಾರ್ಯವನ್ನು ಶ್ಲಾಘಿಸಿ, ಪ್ರತಿ ಮನೆಗಳ ಮುಂದೆ ಹಣತೆಯ ದೀಪವನ್ನು ಹಚ್ಚಿ ನಂತರ ಗಿಡಗಳನ್ನು ನೆಟ್ಟಿದೀಪಾವಳಿ ಹಬ್ಬವನ್ನು ಆಚರಿಸಿದರೆ ನಮ್ಮ ಜೀವನ ಸಾರ್ಥಕವಾಗುತ್ತದೆ ಎಂದು ತಿಳಿಸಿದರು.
ಗುಡಿಬಂಡೆ ತಾಲೂಕು ಆಸ್ಪತ್ರೆಯ ವೈದ್ಯರಾದ ಡಾ ಪ್ರದೀಪ್ ಮಾತಾಡಿ ಭಾರತಾದ್ಯಂತ ದೀಪಾವಳಿ ಹಬ್ಬವನ್ನು ವಿಶೇಷವಾಗಿ ಆಚರಣೆ ಮಾಡುತ್ತಾರೆ. ಆದರೆ ಗುಡಿಬಂಡೆಯಲ್ಲಿ ಸಾವಿರ ಒಂದು ಗಿಡಗಳನ್ನು ನೆಟ್ಟು ಪರಿಸರ ಸಂರಕ್ಷಣೆ ಮಾಡಲು ರೈತ ನರಸಿಂಹ ರೆಡ್ಡಿ ಅವರು ಪಣ ತೊಟ್ಟಿದ್ದಾರೆ .ಇದೇ ರೀತಿ ಎಲ್ಲಾ ರೈತರು ತಮ್ಮ ಹೊಲಗಳಲ್ಲಿ ಗಿಡಗಳನ್ನು ನೆಟ್ಟು ಪರಿಸರವನ್ನು ಉಳಿಸಬೇಕು ಎಂದು ಕರೆ ನೀಡಿದರು . ಕಾರ್ಯಕ್ರಮದಲ್ಲಿ ಗಾಂಧಿ ಗ್ರಾಮೀಣ ಅಭಿವೃದ್ಧಿ ಸಂಘದ ಅಧ್ಯಕ್ಷ ನಾಗರಾಜ್ ಹಾಗೂ ಪರಿಸರ ವೇದಿಕೆ ಕಾರ್ಯದರ್ಶಿ ಇಂದ್ರ ಕುಮಾರ್ ಸಿಂಗ್ ಮುಂತಾದವರು ಪಾಲ್ಗೊಂಡಿದ್ದರು.
ಸಕ್ಕರೆ ಕಾಯಿಲೆ, ಬಿಪಿಯಿಂದ ಹೆಚ್ಚು ಸಾವು: ಸಚಿವ ಸುಧಾಕರ್
ಜ್ಞಾನದ ಬೆಳಕು ಬೀರುವುದೇ ದೀಪಾವಳಿ: ಅಜ್ಞಾನದ ಕತ್ತಲನ್ನು ದೂರ ಮಾಡಿ ಜ್ಞಾನದ ಬೆಳಕನ್ನು ಬೀರುವುದೇ ದೀಪಾವಳಿಯ ಸತ್ಯಾರ್ಥ ಎಂದು ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಹೇಮಾ ನಂದೀಶ್ ಹೇಳಿದರು. ಅಪೂರ್ವ ಸ್ನೇಹ ಬಳಗದ ವತಿಯಿಂದ ದೀಪಾವಳಿ ಅಂಗವಾಗಿ ಚಾಮುಂಡಿಪುರಂ ಹಾಗೂ ಬಂಡಿ ಕೇರಿ ಸುತ್ತಮುತ್ತ ಮನೆ ಮನೆಗೆ ತೆರಳಿ ಹಣತೆ ವಿತರಿಸುವ ಮೂಲಕ ಬೆಳಕಿನ ಜಾಗೃತಿ ಮೂಡಿಸಿ ಅವರು ಮಾತನಾಡಿದರು. ಪ್ರತಿ ಮನೆ-ಮನೆಯಲ್ಲೂ ಪ್ರತಿಯೊಬ್ಬನ ಮನ-ಮನದಲ್ಲೂ ಜ್ಞಾನವೆಂಬ ದೀಪವು ನಿರಂತರವಾಗಿ ಬೆಳೆಯುತ್ತಿರಲಿ ಎಂಬುದೇ ದೀಪಾವಳಿ ಹಬ್ಬದ ಉದ್ದೇಶ. ಭಾರತೀಯ ಹಬ್ಬಗಳೆಲ್ಲವೂ ಹರ್ಷದಾಯಕವಾಗಿವೆ ಎಂದರು.