ಬೆಂಗಳೂರು(ಮಾ.28): ಮಾಜಿ ಸಿಎಂ ಸಿದ್ದರಾಮಯ್ಯಗೆ ನೆನಪಿನ ಶಕ್ತಿ ಕಡಿಮೆಯಾಗಿದೆ. ಮೇಟಿ ಪ್ರಕರಣದಲ್ಲಿ ಸಿಐಡಿಗೆ ಕೊಟ್ಟು ಕೇಸ್ ಮುಚ್ಚಿಹಾಕಿದ್ರು, ಮೇಟಿ ವಿಚಾರವಾಗಿ ಸಂತ್ರಸ್ತೆಯೇ ಬಂದು ದೂರು ಕೊಟ್ಟಿದ್ರು ಮೇಟಿ ವಿರುದ್ಧ ಕೇಸ್ ದಾಖಲಾಗಿರಲಿಲ್ಲ. ನಾವು ಯುವತಿ ದೂರು ಕೊಟ್ಟ ಬಳಿಕ ಎಫ್‌ಐಆರ್ ದಾಖಲಿಸಿದ್ದೇವೆ. ಪೊಲೀಸರ ನೈತಿಕ ಸ್ಥೈರ್ಯ ಕುಗ್ಗಿಸುವ ಕೆಲಸವನ್ನ ಮಾಡಬಾರದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. 

ಇಂದು(ಭಾನುವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಾರು ಏನೇ ಹೇಳಿಕೆ ಕೊಡಲಿ, ನಮ್ಮ ಪೊಲೀಸರು ಕ್ರಮ ಬದ್ಧವಾಗಿ ತನಿಖೆ ನಡೆಸುತ್ತಾರೆ. ಗೃಹ ಸಚಿವನಾಗಿ ಬೇರೆಯವರ ತರ ಪ್ರತಿಯೊಂದಕ್ಕೂ ಹೇಳಿಕೆ ನೀಡಲು ಸಾಧ್ಯವಿಲ್ಲ. ಎಸ್‌ಐಟಿ ಅಧಿಕಾರಿಗಳು ವಿಡಿಯೋಗಳು, ಆಡಿಯೋಗಳನ್ನ ತನಿಖೆ ಮಾಡುತ್ತಾರೆ. ಎಸ್ಐಟಿ ಸೂಕ್ತವಾಗಿ ತನಿಖೆ ಮಾಡುತ್ತದೆ ಎಂದು ಸ್ಪಷ್ಪಪಡಿಸಿದ್ದಾರೆ.

ರಾಸಲೀಲೆ ಸಿಡಿ ಪ್ರಕರಣ: ಜಾರಕಿಹೊಳಿಯನ್ನ ಬಂಧಿಸದಿದ್ರೆ ರಾಜ್ಯಾದ್ಯಂತ ಉಗ್ರ ಹೋರಾಟ, ಕಾಂಗ್ರೆಸ್‌

ಯುವತಿಗೆ ಈಗಾಗಲೇ ಐದು ನೋಟಿಸ್ ನೀಡಿದ್ದೇವೆ. ಐದು ನೋಟಿಸ್‌ನಲ್ಲೂ ರಕ್ಷಣೆ ಕೊಡುತ್ತೇವೆ ಅಂತ ತಿಳಿಸಿದ್ದೇವೆ. ನೀವು ಎಲ್ಲಿ ಇದ್ದೀರಾ ಅಲ್ಲೆ ಬಂದು ಸುರಕ್ಷತೆ ನೀಡುತ್ತೇವೆ ಎಂದಿದ್ದೇವೆ. ಪ್ರತಿಭಟನೆಗೆ ಅಲ್ಲಿನ ಪೊಲೀಸರು ಕ್ರಮ ತೆಗೆದುಕೊಳ್ಳುತ್ತಾರೆ. ಹೊರಗಡೆ ನಡೆಯುವ ಡೆವಲಪ್ಮೆಂಟ್ ಎಸ್ಐಟಿ ಮೇಲೆ ಪ್ರಭಾವ ಬೀರಲು ಸಾಧ್ಯವಿಲ್ಲ. ಸಿದ್ದರಾಮಯ್ಯ ಅವರಿಗೆ ನೆನಪಿನ ಶಕ್ತಿ ಕಡಿಮೆಯಾಗಿದೆ. ಮೇಟಿ ಕೇಸ್‌ನಲ್ಲಿ ಆ ಮಹಿಳೆಯೇ ಬಂದು ದೂರು ಕೊಟ್ಟಿದ್ರೂ ಕೇಸ್‌ ಮುಚ್ಚಿ ಹಾಕಿದ್ದರು. ಪೊಲೀಸರ ನೈತಿಕತೆಯನ್ನ ಕುಂದಿಸುವ ಕೆಲಸ ಯಾವುದೇ ಪಕ್ಷದ ನಾಯಕರು ಮಾಡಬಾರದು ಎಂದು ತಿಳಿಸಿದ್ದಾರೆ.

ಎಸ್ಐಟಿ ಅಧಿಕಾರಿಗಳು ಬಹಳಷ್ಟು ವಿಚಾರಗಳಲ್ಲಿ ತನಿಖೆ ಮಾಡಿದ್ದಾರೆ. ಅವರು ಎಲ್ಲರ ರೀತಿ ಬಂದು ಹೇಳಿಕೆ ನೀಡಲು ಸಾಧ್ಯವಿಲ್ಲ. ಯಾರು ಏನೇ ಹೇಳಿಕೆ ನೀಡಿದ್ರೂ ಪೊಲೀಸರು ಕ್ರಮಬದ್ದವಾಗಿ ಕೆಲಸ ಮಾಡುತ್ತಿದ್ದಾರೆ. ತನಿಖೆಯಲ್ಲಿ ಉತ್ತರ ಸಿಗುತ್ತದೆ. ತನಿಖೆ ಮಾಡುವ ತಂಡಕ್ಕೆ ಫುಲ್ ಫ್ರೀ ಆ್ಯಂಡ್ ನೀಡಿದ್ದೇವೆ. ನಿಮಗೆ ಎಷ್ಟು ಮಾಹಿತಿ ಇದೆಯೋ ಅಷ್ಟೇ ನನಗೂ ಮಾಹಿತಿ ಇರೋದು ಎಂದಿದ್ದಾರೆ.