Asianet Suvarna News Asianet Suvarna News

'DCM ಹುದ್ದೆಯ ವಿಚಾರದಲ್ಲಿ ಹೈಕಮಾಂಡ್‌ ಸೂಕ್ತ ನಿರ್ಣಯ ಕೈಗೊಳ್ಳುತ್ತದೆ'

ನಾವೆಲ್ಲಾ ಪಕ್ಷದ ಸಿದ್ಧಾಂತದ ಮೇಲೆ ಕೆಲಸ ಮಾಡುವವರು|  ನಮ್ಮ ಪಕ್ಷ ಎಲ್ಲರಿಗೂ ಸಮಾನ ಸ್ಥಾನಮಾನ ಕೊಡುವಂತಹ ಪಕ್ಷವಾಗಿದೆ|  ಪಕ್ಷದ ಮೇಲೆ ನನಗೆ ಸಂಪೂರ್ಣ ವಿಶ್ವಾಸವಿದೆ| ಯಾರಿಗೆ ಏನು ಸ್ಥಾನಮಾನ ಕೊಡಬೇಕು ಪಕ್ಷ ಕೊಟ್ಟೆ ಕೊಡುತ್ತದೆ| 

Minister B Sriramulu Talks Over DCM Post
Author
Bengaluru, First Published Jan 30, 2020, 3:22 PM IST
  • Facebook
  • Twitter
  • Whatsapp

ಕಲಬುರಗಿ(ಜ.30): ಉಪಮುಖ್ಯಮಂತ್ರಿ ವಿಚಾರದಲ್ಲಿ ಹೈಕಮಾಂಡ್ ಸೂಕ್ತ ನಿರ್ಣಯ ಕೈಗೊಳ್ಳುತ್ತದೆ ಎನ್ನುವ ವಿಶ್ವಾಸವಿದೆ. ಹೈಕಮಾಂಡ್ ಕೈಗೊಳ್ಳುವ ನಿರ್ಣಯಕ್ಕೆ ನಾವು ಬದ್ಧರಾಗಿದ್ದೇವೆ. ಹೊಸ ಶಾಸಕರಿಗೆ ಮಂತ್ರಿ ಸ್ಥಾನ ಸೇರಿದಂತೆ ಯಾರ್ಯಾರಿಗೆ ಏನು ಕೊಡಬೇಕು ಎನ್ನುವ ಚರ್ಚೆಗೆ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ದೆಹಲಿಗೆ ತೆರಳಿದ್ದಾರೆ ಎಂದು ಸಚಿವ ಬಿ. ಶ್ರೀರಾಮುಲು ಹೇಳಿದ್ದಾರೆ.

ಗುರುವಾರ ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು,  ಜನವರಿ ಕೊನೆಯ ವಾರ ಅಥವಾ ಫೆಬ್ರುವರಿ ಮೊದಲ ವಾರದಲ್ಲಿ ಇದೆಲ್ಲಕ್ಕೂ ತೆರೆಬೀಳಲಿದೆ.ನಾವೆಲ್ಲಾ ಪಕ್ಷದ ಸಿದ್ಧಾಂತದ ಮೇಲೆ ಕೆಲಸ ಮಾಡುವವರು. ನಮ್ಮ ಪಕ್ಷ ಎಲ್ಲರಿಗೂ ಸಮಾನ ಸ್ಥಾನಮಾನ ಕೊಡುವಂತಹ ಪಕ್ಷವಾಗಿದೆ. ಪಕ್ಷದ ಮೇಲೆ ನನಗೆ ಸಂಪೂರ್ಣ ವಿಶ್ವಾಸವಿದೆ. ಯಾರಿಗೆ ಏನು ಸ್ಥಾನಮಾನ ಕೊಡಬೇಕು ಪಕ್ಷ ಕೊಟ್ಟೆ ಕೊಡುತ್ತದೆ ಎಂದು ತಿಳಿಸಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಡಿಸಿಎಂ ಹುದ್ದೆ ಸಂಬಂಧ ರಮೇಶ್ ಜಾರಕಿಹೊಳಿ ಸೇರಿದಂತೆ ಯಾರಿಗೂ ಪೈಪೋಟಿ ಇಲ್ಲ. ಅದೇನಿದ್ರೂ ಪಕ್ಷವೇ ಅಂತಿಮ ನಿರ್ಣಯ ಕೈಗೊಳ್ಳುತ್ತದೆ. ವಾಲ್ಮಿಕಿ ಸಮುದಾಯದ ಗುರುಗಳು ಸಮಾಜದ ಬಗ್ಗೆ ಕಳಕಳಿಯಿಂದ ಅಂತಹ ಹೇಳಿಕೆ ನೀಡಿದ್ದಾರೆ ಅಷ್ಟೇ ಎಂದು ಹೇಳಿದ್ದಾರೆ. 
 

Follow Us:
Download App:
  • android
  • ios