Asianet Suvarna News Asianet Suvarna News

'ಶ್ರೀರಾಮುಲು ಜೋಗಪ್ಪನ ವೇಷದಲ್ಲಿ ಬಂದು ಸುಳ್ಳು,ವಂಚನೆ ಮಾಡ್ತಿದ್ದಾರೆ'

ಕನ್ನಡವೇ ಬಾರದ ಆಂಧ್ರ‌ ಮೂಲದ ಶ್ರೀರಾಮುಲುಗೆ ಬಿಜೆಪಿ ಮಂತ್ರಿಗಿರಿ ಸಿಕ್ಕಿದೆ| ಬಿ. ಶ್ರೀರಾಮುಲು ಅಂದರೆ ಬುರುಡೆ ಶ್ರೀರಾಮುಲು ಆಗಿದ್ದಾರೆ| ಶ್ರೀರಾಮುಲು ಪರ್ಸೆಂಟೇಜ್ ಪಡೆಯುವ ಕೆಲಸ ಮಾಡುತ್ತಿದ್ದಾರೆ ಎಂದ ಮೊಳಕಾಲ್ಮೂರು ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿ| ಮರಳು ದಂಧೆಯಲ್ಲಿ ಸಚಿವ ಶ್ರೀರಾಮುಲು ಭಾಗಿಯಾಗಿದ್ದಾರೆ|

Minister B Sriramulu Did Cheat to People Of Karnataka
Author
Bengaluru, First Published Nov 21, 2019, 1:02 PM IST
  • Facebook
  • Twitter
  • Whatsapp

ಚಿತ್ರದುರ್ಗ(ನ.21): ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮೇರು ಪರ್ವತ ಇದ್ದ ಹಾಗೆ. ಸಚಿವ ಬಿ.ಶ್ರೀರಾಮುಲು ಓರ್ವ ಲೀಡರ್ ಅಲ್ಲವೇ ಅಲ್ಲ. ಮೋಸ ಮಾಡಿ ನನಗೆ ಟಿಕೆಟ್ ತಪ್ಪಿಸಿ ಮೊಳಕಾಲ್ಮೂರು ಕ್ಷೇತ್ರದಿಂದ ಗೆದ್ದಿದ್ದಾರೆ. ಈಗ ರಾಜೀನಾಮೆ ಸಲ್ಲಿಸಿ ನನ್ನ ವಿರುದ್ಧ ಚುನಾವಣೆ ಗೆದ್ದು ತೋರಿಸಲಿ ಎಂದು ಮೊಳಕಾಲ್ಮೂರು ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿ ಸವಾಲು ಹಾಕಿದ್ದಾರೆ. 

ಮಾಜಿ ಸಿಎಂ ಸಿದ್ದರಾಮಯ್ಯಗೆ ಸಚಿವ ಶ್ರೀರಾಮುಲು ಸವಾಲು ಹಿನ್ನೆಲೆಯಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಗುರುವಾರ ನಗರದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಕನ್ನಡವೇ ಬಾರದ ಆಂಧ್ರ‌ ಮೂಲದ ಶ್ರೀರಾಮುಲುಗೆ ಬಿಜೆಪಿ ಮಂತ್ರಿಗಿರಿ ಸಿಕ್ಕಿದೆ. ಬಿ. ಶ್ರೀರಾಮುಲು ಅಂದರೆ ಬುರುಡೆ ಶ್ರೀರಾಮುಲು ಆಗಿದ್ದಾರೆ. ಶ್ರೀರಾಮುಲು ಪರ್ಸೆಂಟೇಜ್ ಪಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಮರಳು ದಂಧೆಯಲ್ಲಿ ಸಚಿವ ಶ್ರೀರಾಮುಲು ಭಾಗಿಯಾಗಿದ್ದಾರೆ. ಜೋಗಪ್ಪನ ವೇಷದಲ್ಲಿ ಬಂದು ಬರೀ ಸುಳ್ಳು ವಂಚನೆ ಮಾಡುತ್ತಿದ್ದಾರೆ. ಆರೋಗ್ಯ ಸಚಿವನಾಗಿದ್ದರೂ ಕ್ಷೇತ್ರದಲ್ಲಿ ಸರಿಯಾದ ಆಸ್ಪತ್ರೆ, ಸಿಬ್ಬಂದಿ ಇಲ್ಲ.ಸಚಿವನಾದ 24 ಗಂಟೆಯಲ್ಲಿ ನಾಯಕ ಸಮುದಾಯದ ಮೀಸಲಾತಿ ಹೆಚ್ಚಳ ಭರವಸೆ ನೀಡಿದ್ದರು. ಮೀಸಲಾತಿ ಹೆಚ್ಚಳ ಬಗ್ಗೆ ಶ್ರೀರಾಮುಲು ರಕ್ತದಲ್ಲಿ ಬರೆದುಕೊಡುತ್ತೇನೆ ಎಂದಿದ್ದರು. ಈಗ ಸಚಿವ ಶ್ರೀರಾಮುಲು ರಕ್ತ ಎಲ್ಲಿಗೆ ಹೋಗಿದೆ ಎಂದು ಪ್ರಶ್ನಿಸಿದ್ದಾರೆ. 

ಡಿಸೆಂಬರ್ 5ರಂದು ಕರ್ನಾಟಕದಲ್ಲಿ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, 9ರಂದು ಫಲಿತಾಂಶ ಪ್ರಕಟವಾಗಲಿದೆ.
 

Follow Us:
Download App:
  • android
  • ios